ಭೋಪಾಲ್​:ಮಧ್ಯಪ್ರದೇಶದ ಸಿಎಂ ಶಿವರಾಜ್​ ಸಿಂಗ್ ಚೌಹಾನ್​ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ದನಿಗೂಡಿಸಿ, ಸ್ನೇಹದ ಬಗೆಗಿನ ಶೋಲೇ ಚಿತ್ರದ ಹಿಟ್​ ಗೀತೆಯನ್ನು ಹಾಡಿದ ಪ್ರಸಂಗ ನಿನ್ನೆ ನಡೆದಿದೆ. ಭೋಪಾಲ್​ನ ವಿಧಾನಸಭಾ ಕಟ್ಟಡದಲ್ಲಿ ನಡೆದ ‘ಭುಟ್ಟಾ ಪಾರ್ಟಿ’ಯಲ್ಲಿ, “ಯೇ ದೋಸ್ತಿ ಹಂ ನಹೀ ಛೋಡೇಂಗೆ…” ಹಾಡನ್ನು ಪರಸ್ಪರ ಕೈಹಿಡಿದು ಹಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.
Musical show of unity@ChouhanShivraj&@KailashOnlinejoined voices to sing "Yeh dosti hum nahi todenge” at a “bhutta party” at the Assembly building.MLAs from both the ruling party and@INCMPattended the party including Leader of the Opposition@OfficeOfKNath@ndtv@ndtvindiapic.twitter.com/4EallbzYNx
— Anurag Dwary (@Anurag_Dwary)August 11, 2021

ಈ ವಿಡಿಯೋ ತುಣುಕನ್ನು ಸಿಎಂ ಚೌಹಾನ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಈ ಬಾಲಿವುಡ್​ ಗೀತೆಯ ಅಸಲಿ ಜೋಡಿ ಕಲಾವಿದರಾದ ಅಮಿತಾಭ್​ ಬಚ್ಚನ್ ಮತ್ತು ಧರ್ಮೇಂದ್ರ ಅವರನ್ನು ತಮ್ಮ ಟ್ವೀಟ್​​ಗೆ ಟ್ಯಾಗ್​ ಮಾಡಿದ್ದಾರೆ. ವಿಜಯವರ್ಗೀಯ ಅವರೂ ಈ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ತಾವು ಬಿಜೆಪಿ ಯುವ ಮೋರ್ಚಾದಲ್ಲಿದ್ದ ದಿನಗಳಲ್ಲಿ ಈ ಹಾಡನ್ನು ಜೊತೆಯಾಗಿ ಹಾಡುತ್ತಿದ್ದ ನೆನಪುಗಳು ಮರುಕಳಿಸಿದವು ಎಂದು ಬರೆದಿದ್ದಾರೆ.
ये दोस्ती हम नहीं तोड़ेंगे…@SrBachchan@aapkadharampic.twitter.com/coBPaN1hP1
— Shivraj Singh Chouhan (@ChouhanShivraj)August 11, 2021

ರಾಜ್ಯದ ವಿವಿಧ ಸಚಿವರು, ವಿರೋಧಪಕ್ಷದ ನಾಯಕ ಕಮಲ್​ನಾಥ್​, ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಶಾಸಕರು, ಪತ್ರಕರ್ತರು ಈ ಭುಟ್ಟಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಚಿವ ಬ್ರತ್ಯ ಬಸು ವಿರುದ್ಧ ಕೇಸ್​!

ಸೊಂಟ ಮತ್ತು ಬೆನ್ನು ನೋವು ತಡೆಯಲು ಈ ಯೋಗಾಸನ ಉಪಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
