ನವದೆಹಲಿ :ದೆಹಲಿ ಮೆಟ್ರೋ ಟ್ರೈನಿನಲ್ಲಿ ಮಂಗವೊಂದು ಪ್ರಯಾಣ ಮಾಡುತ್ತಿರುವ ಕುತೂಹಲಕಾರಿ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಕೋಚ್​​ನ ಎಲ್ಲೆಡೆ ಪರದಾಡುವ ಕೋತಿ ಕೊನೆಗೆ ಸೀಟೊಂದರಲ್ಲಿ ಪ್ರಯಾಣಿಕರ ಪಕ್ಕ ಹೋಗಿ ಕುಳಿತುಕೊಂಡು ಸಭ್ಯವಾಗಿ ನಡೆದುಕೊಳ್ಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಅಜಯ್ ತೋಮರ್ ಎಂಬುವರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. “ದೆಹಲಿ ಮೆಟ್ರೋದಲ್ಲಿ ಆನಂದ್ ವಿಹಾರ್​ನಿಂದ ದ್ವಾರಕಾವಾಲಿ ಟ್ರೈನ್​ನಲ್ಲಿ ಕೋತಿಯೊಂದು ನುಗ್ಗಿಬಂದಿತು. ಕೋತಿಯ ಪ್ರಯಾಣದ ನೋಟ ನೋಡಿ” ಎಂದು ಟಿಪ್ಪಣಿ ಬರೆದಿದ್ದಾರೆ. ಶನಿವಾರದಿಂದ ಹರಿದಾಡುತ್ತಿರುವ ಈ ತುಣುಕಲ್ಲಿ ವ್ಯಕ್ತಿಯೊಬ್ಬರು ಹಿಂದಿಯಲ್ಲಿ ‘ಮಂಗಕ್ಕೂ ಮಾಸ್ಕ್​ ಹಾಕಿಬಿಡಿ’ ಎನ್ನುವುದೂ ಕೇಳುತ್ತದೆ.
#दिल्लीमेट्रो में आनन्द विहार से द्वारका वाली में बन्दर घुस आया। बन्दर का शानदार सफर।#delhimetro@OfficialDMRC@delhimetrofan@ShamsherSLive👇pic.twitter.com/gIJTvnHGw9
— Ajay Tomar | अजय तोमर (@ajay_tomar1)June 19, 2021

ವಿಡಿಯೋ ನಡುವೆ ಒಬ್ಬರು ಯಮುನಾ ಬ್ಯಾಂಕ್​ ಸ್ಟೇಷನ್ ಅಂತ ಹೇಳುವುದು ಕೇಳಿಸುತ್ತದೆ. ಸದರಿ ಸ್ಟೇಷನ್ ದೆಹಲಿ ಮೆಟ್ರೋನ ಬ್ಲೂ ಲೈನ್​ನಲ್ಲಿ ಬರುವುದರಿಂದ ಇದರ ಬಗ್ಗೆ ನೆಟ್ಟಿಗರು ನಗರದ ಮೆಟ್ರೋ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇದಕ್ಕೆ ಮೆಟ್ರೊ ಅಧಿಕಾರಿಗಳು ‘ಕೋಚ್​ ನಂಬರ್ ಮತ್ತು ಹಾಲಿ ಸ್ಟೇಷನ್ ಮಾಹಿತಿ ನೀಡಿ’ ಎಂದು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್)
ಕಳ್ಳತನದ ಕೇಸಲ್ಲಿ ಬಂಧನಕ್ಕೊಳಗಾದ ಮಹಿಳೆ, ಮರಳಿ ಬಂದದ್ದು ಶವವಾಗಿ!

ಡ್ಯೂಟಿಗೆ ಹಾಜರಾಗಲು ಸರ್ಕಾರಿ ನೌಕರರಿಗೆ ಬುಲಾವ್​; ಗರ್ಭಿಣಿಯರಿಗೆ, ಅಂಗವಿಕಲರಿಗೆ ಮಾತ್ರ ವಿನಾಯಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
