ನವದೆಹಲಿ :ರೈಲ್ವೆ ವ್ಯವಸ್ಥೆಯ ವಿದ್ಯುತೀಕರಣ ಯೋಜನೆಯ ಅಂಗವಾಗಿ ಉತ್ತರ ಪ್ರದೇಶದ ಭಾಡಯಿ ಮತ್ತು ಇಟಾವಾ ನಿಲ್ದಾಣಗಳ ನಡುವೆ ಮೊದಲ ಎಲೆಕ್ಟ್ರಿಕ್ ಟ್ರೈನಿನ ಸಂಚಾರವನ್ನು ಇಂದು ಆರಂಭಿಸಲಾಯಿತು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ, ವಿದ್ಯುತ್ ಚಾಲಿತ ರೈಲಿನ ವಿಡಿಯೋ ತುಣುಕನ್ನು ಶೇರ್ ಮಾಡಿದ್ದಾರೆ.
देश में तेजी से किये जा रहे रेलवे के विद्युतीकरण के क्रम में उत्तर प्रदेश के भांडई और इटावा के बीच पहली इलेक्ट्रिक ट्रेन का संचालन किया गया।इससे ट्रेनों की गति तेज होगी, साथ ही पर्यावरण की सुरक्षा, और डीज़ल तथा विदेशी मुद्रा की बचत भी होगी।pic.twitter.com/WGCnIico5G— Piyush Goyal (@PiyushGoyal)March 28, 2021
देश में तेजी से किये जा रहे रेलवे के विद्युतीकरण के क्रम में उत्तर प्रदेश के भांडई और इटावा के बीच पहली इलेक्ट्रिक ट्रेन का संचालन किया गया।इससे ट्रेनों की गति तेज होगी, साथ ही पर्यावरण की सुरक्षा, और डीज़ल तथा विदेशी मुद्रा की बचत भी होगी।pic.twitter.com/WGCnIico5G

“ಭಾರತದ ರೈಲ್ವೆ ವ್ಯವಸ್ಥೆಯನ್ನು ತ್ವರಿತವಾಗಿ ವಿದ್ಯುತೀಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ರೈಲುಗಳ ವೇಗ ಹೆಚ್ಚಲಿದೆ. ಜೊತೆಗೆ ಪರಿಸರ ಸಂರಕ್ಷಣೆಯಾಗುವುದಲ್ಲದೆ, ಡೀಸಲ್ ಹಾಗೂ ವಿದೇಶೀ ಮುದ್ರಾಂಕದ ಉಳಿತಾಯವಾಗುತ್ತದೆ” ಎಂದು ಗೋಯಲ್ ಹೇಳಿದ್ದಾರೆ.
ಪ್ರಸ್ತುತವಾಗಿ ಬಳಸಲಾಗುತ್ತಿರುವ ಡೀಸೆಲ್ ಟ್ರೇನ್​ಗಳ ಬದಲಿಗೆ, ಹೊಗೆರಹಿತವಾದ ವಿದ್ಯುತ್ ರೈಲುಗಳನ್ನು ಅಳವಡಿಸಲು ರೈಲ್ವೆ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಗೋಯಲ್​ ಅವರು 2024 ನೇ ಇಸವಿಯ ವೇಳೆಗೆ ಶೇ.100 ರಷ್ಟು ವಿದ್ಯುತೀಕರಣ ಮಾಡುವ ಉದ್ದೇಶವಿದೆ ಎಂದು ಈ ಮುನ್ನ ಹೇಳಿಕೆ ನೀಡಿದ್ದರು.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
