ಕೊಲ್ಕತಾ :ಕರೊನಾ ಬಗೆಗಿನ ಆತಂಕದ ನಡುವೆಯೂ ದೇಶದ ನಾಲ್ಕು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಸಿದ್ಧತೆ ಭರದಿಂದ ಸಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಂಬರುವ ಚುನಾವಣೆಗೆ ಎಲ್ಲಾ ಪಕ್ಷಗಳೂ ಭಾರೀ ಮಟ್ಟದಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿವೆ.
ಬಿಜೆಪಿ ಪರ ಸ್ಟಾರ್ ಕಾಂಪೇನರ್​ ಆದ ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಬಂಗಾಳದ ಬಂಕುರಾದಲ್ಲಿ ಅಂಥದ್ದೊಂದು ಬೃಹತ್ ರಾಲಿಯಲ್ಲಿ ಭಾಗವಹಿಸಲು ತೆರಳಿದಾಗ, ನೆರೆದಿದ್ದ ಜನಸ್ತೋಮವನ್ನು ನೋಡಿ ಮೂಕವಿಸ್ಮಿತರಾಗಿರುವ ಮೋದಿ, ಆ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಜನಸಾಗರ : ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಇಂದು ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕಾಯುತ್ತಿದ್ದ ಜನಸಾಗರ. ಹೆಚ್ಚಿನ ವಿವರಗಳಿಗೆhttps://t.co/0xT1xMCCZYನೋಡಿ#NarendraModi#PrimiMinister#People#Bengalpic.twitter.com/glB1Gjtt63
— Vijayavani (@VVani4U)March 21, 2021

ಸಾವಿರಾರು ಜನರು ಚುನಾವಣಾ ಸಭೆಯಲ್ಲಿ ಮೋದಿ ಅವರ ಆಗಮನವನ್ನು ಕಾಯುತ್ತಿರುವುದು, ಕಾರ್ಯಕ್ರಮದ ಸ್ಥಳಕ್ಕೆ ದೂರದೂರದಿಂದ ತಂಡೋಪತಂಡವಾಗಿ ಜನರು ನಡೆದು ಬರುತ್ತಿರುವುದು ಹೆಲಿಕಾಪ್ಟರ್​ನಿಂದ ತೆಗೆದಿರುವ ವಿಡಿಯೋ ತುಣುಕಿನಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ‘ಬಂಕುರಾ ರಾಲಿಯ ಕೆಲವು ಕ್ಷಣಗಳ ಮುನ್ನ… ಈ ಉತ್ಸಾಹದಿಂದ ನಾನು ವಿನಮ್ರಗೊಂಡಿದ್ದೇನೆ’ ಎಂದು ಟಿಪ್ಪಣಿ ಬರೆದು, ಪ್ರಧಾನಿ ಮೋದಿ ಶೇರ್ ಮಾಡಿದ್ದಾರೆ.(ಏಜೆನ್ಸೀಸ್)
“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

ಮಾಲ್​ಗೆ ಹೋಗುವ ಮಂದಿಗೆ ಕರೊನಾ ಬರೆ ! ದುಡ್ಡು ತೆತ್ತು ಪರೀಕ್ಷೆ ಮಾಡಿಸಿಕೊಳ್ಳಿ !

ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
