ಗೌಹಾಟಿ :ಅಸ್ಸಾಂನ ನಾಗಾವೊನ್​ ಮತ್ತು ಹೊಜಾಯಿ ನಗರಗಳಲ್ಲಿ ಕಳ್ಳಸಾಗಾಣಿಕೆದಾರರಿಂದ ‘ಜಪ್ತಿಪಡಿಸಿಕೊಳ್ಳಲಾದ ಮಾದಕ ವಸ್ತುಗಳ ವಿಲೇವಾರಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಇಂದು ಭಾಗವಹಿಸಿದರು. ಕಳೆದ ಕೆಲವು ತಿಂಗಳಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಅಸ್ಸಾಂ ಪೊಲೀಸರು ಜಪ್ತಿಪಡಿಸಿಕೊಂಡಿದ್ದ ಸುಮಾರು 170 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ನಾಶಪಡಿಸುವುದಕ್ಕಾಗಿ ನೆಲದ ಮೇಲೆ ಜೋಡಿಸಿಟ್ಟಿದ್ದ ಕಾಫ್ ಸಿರಪ್​ನಂಥ ಮಾದರಿಯ ಮಾದಕ ವಸ್ತುಗಳ ಮೇಲೆ, ಖುದ್ದು ಸಿಎಂ ಸರ್ಮ ಅವರೇ ಬುಲ್ಡೋಜರ್​ ಓಡಿಸಿದರು. ಈ ಕುರಿತಾದ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆ ಪ್ರಕಟಿಸಿದೆ.
#WATCH| Assam Chief Minister Himanta Biswa Sarma drives a bulldozer during a programme on 'Seized Drugs Disposal' in Nagaon.pic.twitter.com/3iNc3Ud3BY
— ANI (@ANI)July 18, 2021

ಜಪ್ತಿಗೊಂಡ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ಬೆಂಕಿ ಹತ್ತಿಸಿ ಸುಡುವ ಕಾರ್ಯಕ್ರಮಕ್ಕೂ ಸಿಎಂ ಸರ್ಮ ಚಾಲನೆ ನೀಡಿದರು. ರಾಜ್ಯ ಸಚಿವರಾದ ಪಿಯೂಶ್​ ಹಜಾರಿಕ, ಕೇಶಬ್ ಮಹಂತ ಮತ್ತು ಇತರ ಶಾಸಕರು ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಪ್ರೇಕ್ಷಕರಾಗಿದ್ದರು.
Fight Against Drugs
These are defining images! The blazing flames of seized drugs display our government's commitment of Drugs Mukta Assam.
We shall not tolerate#Assambeing used as a transit route for psychotropic substances & our youths falling prey to contraband drugs. 1/5pic.twitter.com/09dsFHFb3j
— Himanta Biswa Sarma (@himantabiswa)July 18, 2021

ರಾಜ್ಯದ ಯುವಜನರನ್ನು ಡ್ರಗ್ಸ್​ ವಿಷಜಾಲದಿಂದ ರಕ್ಷಿಸುವ ಮತ್ತು ಡ್ರಗ್ಸ್​ ಕಳ್ಳಸಾಗಣೆಯನ್ನು ನಿಲ್ಲಿಸುವ ಹೋರಾಟ ಮುಂದುವರಿಯುವುದು ಎಂದು ಟ್ವೀಟ್​ ಮಾಡಿರುವ ಸರ್ಮ ಅವರು, ರಾಜ್ಯ ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಜಪ್ತಿಯಾದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಎರಡು ದಿನಗಳ ಬಹಿರಂಗ ಕಾರ್ಯಕ್ರಮ ನಡೆಸಿ ನಾಶಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಈ ಐಎಎಸ್​ ಅಧಿಕಾರಿ!

ಸಂಸತ್​ ಅಧಿವೇಶನದಲ್ಲಿ 30 ಮಸೂದೆಗಳು; ಯಾವುದೇ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
