ಮುಂಬೈ :ಉರಿ ಸಿನಿಮಾದ ಖ್ಯಾತಿಯ ವಿಕಿ ಕೌಶಲ್ ತಮ್ಮ ಹೊಸ ಲುಕ್​ಅನ್ನು ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. ಬಿಳಿಯ ಅಂಗಿ ತೊಟ್ಟು ಕೂದಲಿಗೆ ಹೊಸ ಬಣ್ಣ ಮತ್ತು ಶೈಲಿ ನೀಡಿರುವ ಕೌಶಲ್​ರ ಈ ಚಿತ್ರಗಳಿಗೆ ಅವರ ಲಕ್ಷಾಂತರ ಅಭಿಮಾನಿಗಳು ಲೈಕುಗಳ ಸುರಿಮಳೆಗೈದಿದ್ದಾರೆ.
ತಾವು ನಟಿಸುವ ಚಿತ್ರಗಳಿಗೆ ಭರಪೂರ ತಯಾರಿ ನಡೆಸುವ ವಿಕಿ ಕೌಶಲ್ ತಮ್ಮ ಮುಂದಿನ ಚಿತ್ರ ‘ದ ಇಮ್ಮಾರ್ಟಲ್ ಅಶ್ವತ್ಥಾಮ’ಕ್ಕಾಗಿ ಹಲವಾರು ಹೊಸ ತರಬೇತಿಗಳನ್ನು ಪಡೆಯುತ್ತಿದ್ದಾರೆ. ತಮ್ಮ ನಿತ್ಯದ ವರ್ಕೌಟ್​ನೊಂದಿಗೆ ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಾರೆ. ಇದೀಗ ದಂಡವನ್ನು ಆಡಿಸುವ ಪಾರಂಪರಿಕ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
A post shared by Vicky Kaushal (@vickykaushal09)

ನಿರಾಯಾಸವಾಗಿ ದಂಡವನ್ನು ಆಡಿಸುತ್ತಿರುವ ತಮ್ಮ ವಿಡಿಯೋ ಒಂದನ್ನು ವಿಕಿ ಕೌಶಲ್ ಇನ್ಸ್​​ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ “ಪರ್ವತದಂತೆ ಸ್ಥಿರವಾಗಿ ನಿಲ್ಲಿ, ನದಿಯಂತೆ ಹರಿಯುತ್ತಾ ಹೋಗಿ …ನಿಜವಾಗಿ ದಂಡದಿಂದ ಹೊಡೆತ ತಿನ್ನುವವರೆಗೆ!” ಎಂದು ತಮಾಷೆಯ ಶೀರ್ಷಿಕೆ ಕೊಟ್ಟಿದ್ದಾರೆ.(ಏಜೆನ್ಸೀಸ್)
ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಈಗ ಮದ್ಯ ಖರೀದಿಸಲು 21 ವರ್ಷ ತುಂಬಿದ್ದರೆ ಸಾಕು
ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 4 =
Remember me
