ಹೈದರಾಬಾದ್:ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಕೆಳ ಮಟ್ಟದ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಮಂಡಿಗಾಲಿನ ಎತ್ತರದವರೆಗೆ ಜಲಾವೃತಗೊಂಡಿದ್ದವು.
#WATCH| Telangana: Rainwater entered a restaurant in Old City after incessant rains lashed Hyderabad, yesterdaypic.twitter.com/ACLKd1Vb19
— ANI (@ANI)October 9, 2021

ನಗರದಲ್ಲಿ ನಿನ್ನೆ ಸಂಜೆ 8.30 ರಿಂದ 11 ಗಂಟೆವರೆಗೆ 10 ರಿಂದ 12 ಸೆಂಟಿಮೀಟರ್​ನಷ್ಟು ಧಾರಾಕಾರ ಮಳೆಯಾಗಿದೆ. ಓಲ್ಡ್​ ಸಿಟಿಯ ಒಂದು ರೆಸ್ಟೊರೆಂಟಿನಲ್ಲಿ ಆಹಾರ ಸೇವಿಸುತ್ತಿದ್ದ ಗ್ರಾಹಕರ ಕಾಲಿನ ಮಟ್ಟಕ್ಕೆ ಮಳೆನೀರು ತುಂಬಿರುವ ಚಿತ್ರಣ ಹೊರಬಿದ್ದಿದೆ.
#WATCH| Telangana: Lanes, roads submerged following incessant rainfall in Hyderabad. Visuals from the Old city. (08.10)pic.twitter.com/5XCGtsmIwt
— ANI (@ANI)October 8, 2021

ಈ ನಡುವೆ, ವನಸ್ಥಲೀಪುರಂನಿಂದ ಇಬ್ಬರು ವ್ಯಕ್ತಿಗಳು ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಈವರೆಗೆ ಪತ್ತೆಯಾಗಿಲ್ಲ. ಅವರ ಹುಡುಕಾಟ ಕಾರ್ಯ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದಿನ ಓಲ್ಡ್​ ಸಿಟಿ ಪ್ರದೇಶದಲ್ಲಿ ಮಳೆಯ ಆರ್ಭಟದಿಂದ ಜಲಪ್ರವಾಹ ಉಂಟಾಗಿರುವ ರಸ್ತೆಯಲ್ಲಿ, ನಿಲ್ಲಿಸಿದ್ದ ಮಿನಿ ಟ್ರಕ್​ ಒಂದು ಕೊಚ್ಚಿಹೋಗುತ್ತಿರುವ ದೃಶ್ಯವನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವಿಟರ್​ನಲ್ಲಿ ಶೇರ್ ಮಾಡಿದೆ.(ಏಜೆನ್ಸೀಸ್)
ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್​ರೇಪ್​: ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ

ಕರೊನಾ: 7 ತಿಂಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣಗಳು

ರಸ್ತೆಯಿಂದ ಇಳಿದು ಗದ್ದೆಗೆ ನುಗ್ಗಿದ ಸರ್ಕಾರಿ ಬಸ್; ವಿದ್ಯಾರ್ಥಿಗಳೇ ತುಂಬಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
