ರಾಯಪುರ :ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್​ನಲ್ಲಿ ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತದ ತಂಡ ಜಯ ಸಾಧಿಸಿತು. ಈ ಪಂದ್ಯದಲ್ಲಿ ಉತ್ತಮ ಆಟ ಆಡಿದ ಯುವರಾಜ್ ಸಿಂಗ್​ರಿಗೆ ಹೋಟೆಲ್​​ಗೆ ವಾಪಸಾದಾಗ ವಿಶೇಷ ಸ್ವಾಗತ ಲಭಿಸಿದೆ.
ನಿನ್ನೆ ರಾಯಪುರದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಲ್ಕು ಸಿಕ್ಸರ್​ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಭಾರತದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದರು. ಭಾರತ ಗೆದ್ದ ಮೇಲೆ ತಾವು ತಂಗಿದ್ದ ಹೊಟೆಲ್​ಗೆ ಯುವಿ ವಾಪಸ್​ ಹೋದಾಗ, ಅಲ್ಲಿನ ಸಿಬ್ಬಂದಿ ಅವರಿಗೆ ಗಾರ್ಡ್ ಆಫ್​ ಆನರ್​ ರೀತಿಯಲ್ಲಿ ಬಾಹುಬಲಿ ಚಿತ್ರದ ಹಾಡು ಹಾಕಿ ಸ್ವಾಗತ ಕೋರಿದ್ದಾರೆ.
A post shared by Yuvraj Singh (@yuvisofficial)

ಉದ್ದ ಹ್ಯಾಂಡಲ್ ಪ್ಯಾನ್​ಗಳನ್ನು ಕತ್ತಿಗಳಂತೆ ಮೇಲೆತ್ತಿ ನೀಡಲಾದ ಸ್ವಾಗತಕ್ಕೆ ಯುವರಾಜ್​ ಅಷ್ಟೇ ಸ್ಫೂರ್ತಿಯಿಂದ ಹೆಜ್ಜೆ ಹಾಕಿ ಪ್ರತಿಕ್ರಿಯಿಸಿದ್ದಾರೆ. ನಂತರ ಹಿಂದಿನಿಂದ ತೆಗೆಯಲಾಗಿರುವ ವಿಡಿಯೋ ತುಣುಕೊಂದನ್ನು ಯುವರಾಜ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಒಂದು ಕಾಲಿಗೆ ಕ್ರೇಪ್ ಬ್ಯಾಂಡೇಜ್ ಹಾಕಿಕೊಂಡು ಪ್ಯಾಂಟನ್ನು ಮೇಲಕ್ಕೇರಿಸಿರುವ ಯುವಿ, ಹಾಡಿಗೆ ಹೆಜ್ಜೆ ಹಾಕುತ್ತಿರುವ ತಮ್ಮ ವಿಡಿಯೋಗೆ ಬ್ರೋಕನ್ ಬಾಹುಬಲಿ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ!(ಏಜೆನ್ಸೀಸ್)
ಆಟದ ನಡುವೆ ಪೆಟ್ಟಿಗೆ ಒಳಕ್ಕೆ ಜಿಗಿದ ಮುಗ್ಧ ಮಕ್ಕಳು… ಅಲ್ಲಿ ಕಾಯುತ್ತಿದ್ದ ಜವರಾಯ !
ಕಲ್ಯಾಣ ಕರ್ನಾಟಕ : ಬಿಜೆಪಿ ವಿರುದ್ಧ ಟ್ವಿಟರ್ ವಾರ್​ಗೆ ಮುಂದಾದ ಕಾಂಗ್ರೆಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 10 =
Remember me
