ಚಂಡೀಗಡ :ಮಿತಿಮೀರಿದ ಧಗೆಯ ಕಾಲದಲ್ಲಿ ಪಂಜಾಬ್​​ ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಿರುವ ವಿರುದ್ಧ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೊಹಾಲಿ ಮನೆಯ ಹೊರಗೆ ನೂರಾರು ಆಮ್ ಆದ್ಮಿ ಪಕ್ಷ(ಎಎಪಿ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ವಾಟರ್​ ಕಾನನ್​ಗಳನ್ನು ಚಲಾಯಿಸಿ ಪ್ರಯತ್ನಿಸಿದರು. ನಂತರ ಈರ್ವರು ನಾಯಕರನ್ನು ವಶಕ್ಕೆ ಪಡೆದರು.
ಅಮರಿಂದರ್​ ಸಿಂಗ್​ ಅವರ ನಿವಾಸ, ಸಿಸ್ವಾನ್​ ಫಾರ್ಮ್​ ಹೌಸ್​ನ ಹೊರಗಡೆ ಇಂದು ಮಧ್ಯಾಹ್ನ ಗುಂಪು ಸೇರಿದ ಪಂಜಾಬ್​ ಎಎಪಿ ಮುಖ್ಯಸ್ಥ ಭಗವಂತ್​ ಮನ್ ಮತ್ತು ಇತರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ನಂತರ ಸಿಎಂ ಮನೆಯ ಕಡೆಗೆ ನುಗ್ಗಲು ಆರಂಭಿಸಿದರು. ಇದನ್ನು ತಡೆಯಲು ಪೊಲೀಸರು ನೀರಿನ ಫಿರಂಗಿಗಳನ್ನು ಬಳಸಿದರು.
#WATCH| Police use water cannons to disperse Aam Aadmi Party workers who are protesting near Punjab CM Amarinder Singh's 'Siswan Farm House', in view of power crisis in the State.pic.twitter.com/RreKmirjzr
— ANI (@ANI)July 3, 2021

ರಾಜ್ಯದಲ್ಲಿ ತೀವ್ರ ವಿದ್ಯುತ್​ ಅಭಾವ ಉಂಟಾಗಿದ್ದು, ರೈತರಿಗೆ, ಕೈಗಾರಿಕೆಗಳಿಗೆ ಮತ್ತು ನಗರವಾಸಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಎಎಪಿ ಹೇಳಿದೆ. ಎಎಪಿ ಸಂಸದರಾಗಿರುವ ಭಗವಂತ್​ ಮನ್​ ಮತ್ತು ಶಾಸಕ ಹರಪಾಲ್​ ಸಿಂಗ್​ ಚೀಮ ಅವರನ್ನು ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್)
ಉತ್ತರಾಖಂಡದ ಹೊಸ ಸಿಎಂ: ಶಾಸಕ ಪುಷ್ಕರ್​ ಸಿಂಗ್​ ಧಾಮಿ

ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seven =
Remember me
