ಲೇಹ್​​:ಸ್ವಾತಂತ್ರ್ಯದಿನದ ಅಮೃತಮಹೋತ್ಸವದ ಅಂಗವಾಗಿ ಹಾಗೂ ಇಂದಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಖಾದಿಯಿಂದ ತಯಾರಾದ ಅತಿದೊಡ್ಡ ಭಾರತ ಧ್ವಜವನ್ನು ಲಡಾಖ್​ನಲ್ಲಿ ಅನಾವರಣಗೊಳಿಸಲಾಯಿತು. 225 ಅಡಿ ಉದ್ದ ಮತ್ತು 150 ಅಡಿ ಅಗಲ ಇರುವ ತ್ರಿವರ್ಣ ಧ್ವಜವನ್ನು ಲೇಹ್​ನ ವಿಶಾಲ ಶಿಖರವೊಂದರ ಮೇಲೆ ಸ್ಥಾಪಿಸಲಾಗಿದೆ.
ಈ ತ್ರಿವರ್ಣ ಧ್ವಜವು 1,000 ಕೆಜಿ ತೂಕ ಇದ್ದು, ಮುಂಬೈನ ಖಾದಿ ಡೈಯರ್ಸ್​ ಅಂಡ್​ ಪ್ರಿಂಟರ್ಸ್​ನವರು ಇದನ್ನು ತಯಾರಿಸಿದ್ದಾರೆ. ಲೇಹ್​ನಲ್ಲಿ ಕಾರ್ಯನಿರ್ವಹಿಸುವ 57 ಇಂಜಿನಿಯರ್ಸ್​ ರೆಜಿಮೆಂಟ್​ನವರು ಇದನ್ನು ಮುಂಬೈನಿಂದ ಲಡಾಖ್​ಗೆ ತಂದು ಶಿಖರ ಮೇಲೆ ಸ್ಥಾಪಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
https://youtu.be/h7qLRFqzY9M
ಈ ಧ್ವಜದ ಅನಾವರಣಕ್ಕಾಗಿ ಇಂದು ಬೆಳಿಗ್ಗೆ ಲೇಹ್​ ಪಟ್ಟಣದ ಫೈರ್​ ಅಂಡ್ ಫ್ಯೂರಿ ಕೋರ್​ ಪ್ರಾಂಗಣದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಲಡಾಖ್​ನ ಉಪರಾಜ್ಯಪಾಲ ಆರ್​.ಕೆ.ಮಾಥುರ್​ ಅವರು ವೇದಿಕೆಯಿಂದ ಬಟನ್​ ಒತ್ತಿ ಈ ಧ್ವಜದ ವಿದ್ಯುಕ್ತ ಅನಾವರಣ ಮಾಡಿದರು. ವಾಯುಸೇನೆಯ ಹೆಲಿಕಾಪ್ಟರ್​ಗಳಿಂದ ಧ್ವಜದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಭಾರತೀಯ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಣೆ ಮತ್ತು ಹಿರಿಯ ಸೇನಾಧಿಕಾರಿಗಳು ಭಾಗವಹಿಸಿದರು.(ಏಜೆನ್ಸೀಸ್)
ಮತ್ತೆ ಏರಿತು ಇಂಧನ ಬೆಲೆ; ಪೆಟ್ರೋಲ್​-ಡೀಸೆಲ್ ಇನ್ನೂ ದುಬಾರಿ

VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 17 =
Remember me
