ಶ್ರೀನಗರ:ಛಾಯಾ ಸಮರ ನಡೆಸುತ್ತಿರುವ ಪಾಕಿಸ್ತಾನ ಮತ್ತು ಚೀನಾಗಳಿಗೆ ಕಾಶ್ಮೀರಿಗಳು ನೇರ ಮತ್ತು ಸ್ಪಷ್ಟ ಸಂದೇಶವನ್ನು ರವಾನಿಸಿದ್ದು, ಎಚ್ಚರಿಕೆಯನ್ನೂ ನೀಡಿದ್ದಾರೆ. ಚೀನಾದ ಸೇನಾ ಪಡೆ ಲಡಾಕ್​ನಲ್ಲಿ ಭಾರತೀಯ ಸೇನಾಪಡೆಯೊಂದಿಗೆ ನಡೆದುಕೊಂಡ ರೀತಿ ಮತ್ತು ಗಡಿ ಒತ್ತುವರಿ ಮಾಡುತ್ತಿರುವುದನ್ನು ಖಂಡಿಸಿರುವ ಕಾಶ್ಮೀರಿಗಳು ಭಾನುವಾರ ಪ್ರತಿಭಟನೆಯನ್ನು ನಡೆಸಿದರು.
ಚೀನಾದವರು ಹಿಂಬಾಗಿಲ ಯುದ್ಧ ನಡೆಸಿ ಭಾರತೀಯ ಯೋಧರು ಹುತಾತ್ಮರಾಗುವುದಕ್ಕೆ ಕಾರಣರಾಗಿದ್ದಾರೆ. ಅವರಿಗೆ ಕಡಕ್ ಉತ್ತರ ಕೊಡಬೇಕಾಗಿದೆ. ಆ ಉತ್ತರ ಹೇಗಿರಬೇಕು ಎಂದರೆ ಅವರೆಂದೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು ಭವಿಷ್ಯದಲ್ಲಿ. ಚೀನಾ, ಪಾಕಿಸ್ತಾನಗಳಿಗೆ ಎಚ್ಚರಿಕೆ ಸಂದೇಶ ಇದು. ಭಾರತ ಹಿಂದಿನಂತೆ ಇಲ್ಲ ಈಗ. ಬದಲಾಗಿದೆ. ಎಚ್ಚರದಿಂದ ವರ್ತಿಸದೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರೆ ಅದರ ಪರಿಣಾಮವನ್ನೂ ಅವರು ಅನುಭವಿಸಬೇಕಾದೀತು.
ಇದನ್ನೂ ಓದಿ:ಶೀತಜ್ವರವಿದ್ದ 103 ಜನರಿಗೆ ಕರೊನಾ ಪಾಸಿಟಿವ್
ನಿನ್ನೆ ಉರಿ ಭಾಗದಲ್ಲಿ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿವೆ. ಪಾಕಿಸ್ತಾನವೂ ತಿಳಿದುಕೊಳ್ಳಬೇಕಾದ ಸಮಯವಿದು. ಈಗಿನ ಕಾಶ್ಮೀರ ಹಿಂದನಂತಿಲ್ಲ. ಕಾಶ್ಮೀರಿಗಳೆಲ್ಲರೂ ಭಾರತದವರೊಂದಿಗೆ ಇದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ನಾವೆಲ್ಲರೂ ಒಟ್ಟಾಗಿ ನಮ್ಮ ಭೂಮಿಯನ್ನು ಉಳಿಸುತ್ತೇವೆ ಎಂದು ಕಾಶ್ಮೀರಿ ಜನ ಎಚ್ಚರಿಸಿದ್ದಾರೆ. (ಏಜೆನ್ಸೀಸ್)
Message to ch!na and Pakistan from kashmiri Awam.pic.twitter.com/otpFK5MWUe
— TEAM BHARAT (@TeamBharat_)June 21, 2020

ಧನಾತ್ಮಕ ಅನುಭವದಿಂದ ಯೋಗ ಉಳಿವು: ರಾಷ್ಟ್ರೋತ್ಥಾನ ಪರಿಷತ್​ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿಸೂರ್ಯ

Sign in to your account
Please enter an answer in digits:four × 2 =
Remember me
