ನವದೆಹಲಿ:ಇತ್ತೀಚೆಗೆ ಒಂದು ವಿಡಿಯೋ ಭಾರಿ ವೈರಲ್​ ಆಗಿತ್ತು. ಮದುವೆ ಮಂಟಪದಲ್ಲಿ ವಧುವಿನ ಮುಖವನ್ನು ಫೋಟೋಗ್ರಾಫರ್​ ಮುಟ್ಟಿದನೆಂದು ವರ ಹೊಡೆಯುವ ವಿಡಿಯೋವದು. ಆ ವಿಡಿಯೋದ ಅಸಲಿಯತ್ತು ಇದೀಗ ಹೊರಬಿದ್ದಿದೆ.
ಆ ವಿಡಿಯೋದ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್​ ಮಾಡಿದ್ದರು. ಫೋಟೋಗ್ರಾಫರ್​ಗೆ ಈ ರೀತಿ ಅವಮಾನಿಸಬಾರದು, ಇದು ಫೇಕ್​ ವಿಡಿಯೋ ಅದು ಇದು ಎಂದು ಅನೇಕ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು. ಇದೀಗ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಧುವೇ ವಿಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಆ ವಿಡಿಯೋ ನಿಜವಾದ ಮದುವೆಯದ್ದಲ್ಲವಂತೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಧು ಚತ್ತೀಸಗಢದ ನಟಿ ಅನಿಕೃತಿ ಚೌಹಾಣ್​. ಅದು ಒಂದು ಸಿನಿಮಾ ಚಿತ್ರೀಕರಣದ ವಿಡಿಯೋವಾಗಿದೆ. ನಟಿ ಅನಿಕೃತಿ ಇದೀಗ ‘ಡಾರ್ಲಿಂಗ್​ ಪ್ಯಾರ್​ ಜುಕ್ತಾ ನಹೀಂ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ವಿಡಿಯೋ ಆ ಚಿತ್ರೀಕರಣದ ವೇಳೆಯೇ ತೆಗೆದಿರುವಂತೆ. ಅದೇನೇ ಇರಲಿ, ಈ ರೀತಿಯ ಕಾಮಿಡಿ ಸನ್ನಿವೇಶಗಳು ಹಲವಾರು ಫೋಟೋಗ್ರಾಫರ್​ಗಳ ಬದುಕಲ್ಲಿ ಆಗಿರುವುದಂತೂ ಸುಳ್ಳಲ್ಲ. (ಏಜೆನ್ಸೀಸ್​)
ಯುವಕನ ಸ್ಟೇಟಸ್​ ನೋಡಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್​! ಮೊಬೈಲ್​ನಲ್ಲಿದಿಯಾ ಆ ರಹಸ್ಯ?

ಮನೆಯ ಗೋಡೆಯಲ್ಲಿ ಕೇಳುತ್ತೆ ವಿಚಿತ್ರ ಶಬ್ಧ! 20 ದಿನಗಳಿಂದ ಭಯದಲ್ಲೇ ಬದುಕುತ್ತಿದೆ ಈ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
