ತಿರುವನಂತಪುರ:ದೇವರ ನಾಡು ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಐದು ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜಲಾವೃತಗೊಂಡ ರಸ್ತೆಯಲ್ಲಿ ಬಸ್​ ಒಂದು ಭಾಗಶಃ ಮುಳುಗಡೆಯಾಗಿದ್ದು, ಪ್ರಯಾಣಿಕರು ಬಸ್​ನಿಂದ ಹೊರಗಡೆ ಬರಲು ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನೊಂದು ವೈರಲ್​ ವಿಡಿಯೋದಲ್ಲಿ ಕೊಟ್ಟಾಯಂ ಗ್ರಾಮೀಣ ಭಾಗದಲ್ಲಿ ಸುರಿದ ಭಾರೀ ಮಳೆಗೆ ಇಡೀ ಏರಿಯಾ ನದಿಯಂತಾಗಿದ್ದು, ಕೊಚ್ಚಿ ಹೋಗುತ್ತಿರುವ ಕಾರನ್ನು ತಡೆಯುವ ಪ್ರಯತ್ನವನ್ನು ಜನರು ಮಾಡುತ್ತಿರುವುದನ್ನು ಕಾಣಬಹುದು. ಅಂದಹಾಗೆ ರೆಡ್​ ಅಲರ್ಟ್​ ಘೋಷಣೆ ಆಗಿರುವ 5 ಜಿಲ್ಲೆಗಳಲ್ಲಿ ಕೊಟ್ಟಾಯಂ ಕೂಡ ಒಂದು. ಕೇರಳದಲ್ಲಿ ಈ ರೀತಿಯ ಘಟನೆ ಭಾರೀ ಮಳೆಯಿಂದಾಗಿ ಸಾಮಾನ್ಯವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಹಾಗೂ ತ್ರಿಶೂರ್​ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಇದೆ. ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಲಕ್ಕಾಡ್​, ಮಲಪ್ಪುರಂ, ಕೋಯಿಕ್ಕೋಡ್​ ಮತ್ತು ವಯನಾಡಿನಲ್ಲಿ ಆರೆಂಜ್​ ಘೋಷಣೆ ಆಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಕಚೇರಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದಿರುವಂತೆ ಜನರಲ್ಲಿ ಕೇರಳ ಸರ್ಕಾರ ಮನವಿ ಮಾಡಿದೆ.
Dramatic visuals of people being evacuated from a KSRTC bus in Poonjar, rural#Kottayam. No loss of life reported, confirm officials. IMD issues red alert for the district.pic.twitter.com/YtOMKHWIc5
— NDTV (@ndtv)October 16, 2021

ಕೇರಳ ಕರವಾಳಿಯ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗುತ್ತಿದೆ. ಅಕ್ಟೋಬರ್​ 17, 18 ಮತ್ತು 19ರವರೆಗೆ ಕೇರಳದಲ್ಲಿ ಭೀಕರ ಮಳೆ ಆಗಲಿದೆ. ಈ ಸಮಯದಲ್ಲಿ ಚಂಡಮಾರುತ ಗಂಟೆಗೆ 60 ಕಿ.ಮೀ. ವೇಗದಲ್ಲಿ ಕೇರಳ ಕರಾವಳಿ ಪ್ರದೇಶದಲ್ಲಿ ಬೀಸಲಿದ್ದು, ಯಾರೊಬ್ಬರು ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಮನವಿ ಮಾಡಿದೆ.(ಏಜೆನ್ಸೀಸ್​)
ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಆಗಲಿದ್ದಾರೆ, ರಾಹುಲ್​ ದ್ರಾವಿಡ್​

ಬಡಿಗೆ ಹಿಡಿದು ಬಡಿದಾಡಿಕೊಂಡ ಭಕ್ತರು! ಆಂಧ್ರ ಗಡಿಯ ಜಾತ್ರೆಯಲ್ಲಿ 80 ಜನರಿಗೆ ಗಾಯ

ತಲೈವಿ ದತ್ತು ಮಗ ಸುಧಾಕರನ್​ಗೆ​ ಜೈಲಿಂದ ಬಿಡುಗಡೆ ಭಾಗ್ಯ

ಹೆರಿಗೆ ಆದಾಗ ಹೆಣ್ಣು ಮಗು, ಕೊನೆಗೆ ಕೊಟ್ಟದ್ದು ಗಂಡು ಮಗು! ಆಸ್ಪತ್ರೆ ಎಡವಟ್ಟಿಗೆ ಪಾಲಕರು ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 6 =
Remember me
