ನವದೆಹಲಿ:ಇಂಡೋ ಟಿಬೇಟನ್​ ಬಾರ್ಡರ್ ಪೊಲೀಸ್​ (ಐಟಿಬಿಪಿ) ಆಯೋಜಿಸಿರುವ ಮೂರು ದಿನಗಳ ಫಿಟ್​ ಇಂಡಿಯಾ ವಾಕಥಾನ್​ಗೆ ಪವರ್​ ಫುಲ್ ಚಾಲನೆ ಸಿಗಲಿದೆ. ಆ ಮೂಲಕ ವಾಕಥಾನ್​ ಭರ್ಜರಿಯಾಗಿಯೇ ಆರಂಭವಾಗಲಿದೆ.
ಅಕ್ಟೋಬರ್ 31ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆಯುವ ಈ 200 ಕಿಲೋಮೀಟರ್ ಫಿಟ್​ ಇಂಡಿಯಾ ವಾಕಥಾನ್​ಗೆ ಚಿತ್ರನಟ ವಿದ್ಯುತ್​ ಜಮ್ವಾಲ್​ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಹಸಿರು ನಿಶಾನೆ ತೋರಲಿದ್ದಾರೆ.
ಈ ವಾಕಥಾನ್​ನಲ್ಲಿ ಯೋಧರಷ್ಟೇ ಅಲ್ಲದೆ ಕೇಂದ್ರ ವಿವಿಧ ಸಶಸ್ತ್ರ ಪಡೆಯ ಸಿಬ್ಬಂದಿ ಕೂಡ ಭಾಗವಹಿಸಲಿದ್ದು, 200 ಕಿ.ಮೀ. ದೂರ ಮಾರ್ಚ್​ ಫಾಸ್ಟ್ ಮಾಡಲಿದ್ದಾರೆ. ಅರ್ಹನಿಶಿ ನಡೆಯಲಿರುವ ಈ ವಾಕಥಾನ್​ ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಇರುವ ಥಾರ್ ಮರುಭೂಮಿಯಲ್ಲಿ ಹಾದುಹೋಗಲಿದೆ. ಪ್ರಧಾನಿ ಮೋದಿ ಅವರ ಕರೆಯಂತೆ ಯುವಜನರಲ್ಲಿ ಫಿಟ್​ನೆಸ್​ ಕುರಿತು ಜಾಗೃತಿ ಮೂಡಿಸಲು, ಅದರ ಮಹತ್ವ ತಿಳಿಸಲು ಇದನ್ನು ಆಯೋಜಿಸಲಾಗಿದೆ ಎಂದು ಕಿರೆಣ್​ ರಿಜಿಜು ಹೇಳಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × three =
Remember me
