ಮುಂಬೈ:ನಟ-ನಟಿಯರು ಜಿಮ್, ವರ್ಕೌಟ್ ಗಳನ್ನು ನಿತ್ಯದ ಜೀವನದ ಭಾಗ ಮಾಡಿಕೊಂಡಿದ್ದಾರೆ. ಕೆಲವು ನಟರಂತೂ ಹೆಚ್ಚಿನ ಸಮಯವನ್ನು ಜಿಮ್​ನಲ್ಲಿ ಕಳೆಯುತ್ತಾರೆ ಅದರಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಸಹ ಒಬ್ಬರು. ಇವರ ವರ್ಕೌಟ್ ವಿಡಿಯೋ ಚರ್ಚೆಗೆ ಕಾರಣವಾಗಿದೆ.
ನಟ ವಿದ್ಯುತ್ ಜಮ್ವಾಲ್ ಇದೀಗ ತಮ್ಮ ವರ್ಕೌಟ್​ನ ಹೊಸ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಹಲವರು ಗಾಬರಿಯಾಗಿದ್ದಾರೆ. ಏಕೆಂದರೆ ಅಷ್ಟು ಅಪಾಯಕಾರಿವಾದ ವರ್ಕೌಟ್ ಅನ್ನು ವಿದ್ಯುತ್ ವಿಡಿಯೋದಲ್ಲಿ ಮಾಡಿದ್ದಾರೆ.
ಇದನ್ನೂ ಓದಿ:ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾನೆ; ರಾಜಕಾರಣಿ ವಿರುದ್ಧ ದೂರು ನೀಡಿದ ಸೂರ್ಯವಂಶ ನಟಿ ವಿಜಯಲಕ್ಷ್ಮಿ
ತಮ್ಮ ಕತ್ತಿನ ಭಾಗದ ಸ್ನಾಯುಗಳನ್ನು ಗಟ್ಟಿಕೊಳಿಸಲು ಹಾಗೂ ಕತ್ತು ಸೂಕ್ತವಾದ ಶೇಪ್​ಗೆ ಬರಲೆಂದು ಭಿನ್ನವಾದ ವರ್ಕೌಟ್ ಅನ್ನು ಮಾಡಿದ್ದಾರೆ. ಆಕಾಶ ನೋಡುವಂತೆ ತಲೆಯನ್ನು ಮೇಲಕ್ಕೆತ್ತಿ, ಹಣೆಯ ಮೇಲೆ ಬರೋಬ್ಬರಿ 30 ಕೆಜಿಯ ಡಂಬಲ್ ಅನ್ನು ಇರಿಸಿಕೊಂಡಿದ್ದಾರೆ. ನೆಲದ ಮೇಲೆ ಮಲಗಿ ಕಪಾಳ ಹಾಗೂ ತಲೆಯ ಮೇಲೆ ತೂಕದ ವ್ಯಕ್ತಿಯೊಬ್ಬನನ್ನು ನಿಲ್ಲಿಸಿಕೊಂಡಿದ್ದಾರೆ. ವಿದ್ಯುತ್​ರ ಈ ವರ್ಕೌಟ್ ನೋಡಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಕಠಿಣವಾದ ವರ್ಕೌಟ್ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ಭೇಷ್ ಎಂದಿದ್ದಾರೆ. ಇನ್ನು ಕೆಲವರು ಇದೆಲ್ಲ ಬಹಳ ಅಪಾಯಕಾರಿ ಎಂದಿದ್ದಾರೆ.
A post shared by Vidyut Jammwal (@mevidyutjammwal)
ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರು, ತಮ್ಮ ದೇಹದಾಢ್ಯ ಹಾಗೂ ಸ್ಟಂಟ್​ಗಳಿಂದ ಪ್ರತ್ಯೇಕ ಅಭಿಮಾನಿ ವರ್ಗ ಹೊಂದಿರುವ ಬಾಲಿವುಡ್ ನಟರಲ್ಲಿಯೇ ಅತ್ಯಂತ ಕಠಿಣವಾದ ವರ್ಕೌಟ್ ಮಾಡುವ, ಮಾರ್ಷಲ್ ಆರ್ಟ್ಸ್ ತರಬೇತಿ ಪಡೆವ ನಟ.

Sign in to your account
Please enter an answer in digits:5 × four =
Remember me
