ತಿರುವನಂತಪುರ:ಘೋಷಿತ ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​ ( ಐಯುಎಂಎಲ್​ ) ಶಾಸಕ ಕೆ.ಎಂ.ಶಾಜಿ ವಿರುದ್ಧ ತನಿಖೆಗೆ ವಿಜಿಲೆನ್ಸ್ ಕೋರ್ಟ್ ಸೋಮವಾರ ಆದೇಶ ನೀಡಿದೆ. ಕೋಳಿಕ್ಕೋಡ್​ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಬ್ಯೂರೋ ಎಸ್​ಪಿಗೆ ಕೋರ್ಟ್​ ಈ ಆದೇಶ ನೀಡಿದ್ದು, ಶಾಸಕರ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶ ಕೆ.ವಿ.ಜಯಕುಮಾರ್​ ನಿರ್ದೇಶಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ವಕೀಲ ಎಂ.ಆರ್.ಹರೀಶ್​ ಸಲ್ಲಿಸಿದ ದೂರು ಅರ್ಜಿ ಆಧರಿಸಿ ವಿಜಿಲೆನ್ಸ್ ಕೋರ್ಟ್​ ಈ ನಿರ್ದೇಶನ ನೀಡಿದೆ. ಕೆ.ಎಂ.ಶಾಜಿ ಅಜಿಕೋಡ್ ಶಾಸಕರಾಗಿದ್ದು, ವಯನಾಡು, ಕಣ್ಣೂರು, ಕೋಳಿಕ್ಕೋಡ್​ ಜಿಲ್ಲೆಗಳಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಅಂಶ ದೂರಿನಲ್ಲಿದೆ.
ಇದನ್ನೂ ಓದಿ:ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಬಗ್ಗೆ ರುದ್ರಪ್ಪ ಲಮಾಣಿಯ ಎಕ್ಸ್​ಕ್ಲೂಸಿವ್​ ಹೇಳಿಕೆ ಇಲ್ಲಿದೆ
ಶಾಜಿ ವಿರುದ್ಧ ಸಾಗರೋತ್ತರ ಹಣಕಾಸು ವಹಿವಾಟಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಕಣ್ಣೂರಿನ ಚಿರಕ್ಕಲ್​ನಲ್ಲಿರುವ ಶಾಜಿಯ ಮನೆಯಲ್ಲಿ ಶೋಧ ನಡೆಸಿತ್ತು. ಕೆಲವೇ ದಿನಗಳ ಹಿಂದೆ ಐಯುಎಂಎಲ್​ನ ಇನ್ನೊಬ್ಬ ಶಾಸಕ ಎಂ.ಸಿ.ಕಮರುದ್ದೀನ್​ ವಿರುದ್ಧ ಚಿನ್ನದ ವ್ಯಾಪಾರದಲ್ಲಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. (ಏಜೆನ್ಸೀಸ್)
‘ಕೈ..ಕಾಲು..ಪಕ್ಕೆಲುಬು ಮುರಿಯುತ್ತೇವೆ…ಸ್ಮಶಾನಕ್ಕೆ ಕಳಿಸುತ್ತೇವೆ’: ಬಿಜೆಪಿ ನಾಯಕನ ಖಡಕ್​ ವಾರ್ನಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 13 =
Remember me
