ಹೈದರಾಬಾದ್​​:ನಟ ವಿಜಯ್ ದೇವರಕೊಂಡ ಸೂಪರ್​ ಹಿಟ್​​ ಸಿನಿಮಾಗಳನ್ನು ನೀಡುತ್ತಾ ಸ್ಟಾರ್​​ ನಟರಲ್ಲಿ ಇವರು ಒಬ್ಬರಾಗಿದ್ದಾರೆ.  ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಲೇ ಮಿಂಚುತ್ತಿದ್ದಾರೆ. ವಿಜಯ್ ಯಾವಾಗಲೂ ಸಿಂಪಲ್ ಮತ್ತು ಸ್ಟೈಲಿಶ್ ಆಗಿ ಎಲ್ಲರ ಗಮನ ಸೆಳೆಯುತ್ತಾರೆ.ಈವೆಂಟ್​​​ಗಳಲ್ಲಿ ವಿಜಯ್ ಅವರ ಸ್ಟೈಲ್ ಮತ್ತು ಫ್ಯಾಶನ್ ವಿಶೇಷ ಆಕರ್ಷಣೆಯಾಗುತ್ತವೆ.
ಇತ್ತೀಚೆಗಷ್ಟೇ ತೆಲಂಗಾಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗುರುವಾರ ಮತದಾನ ಮಾಡಲು ಹೋದಾಗ ಸಖತ್​ ಸ್ಟೈಲಿಶ್ ಆಗಿ  ಕಾಣಿಸಿಕೊಂಡು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದರು. ವಿಜಯ್ ಜುಬಿಲಿ ಹಿಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ವೈಟ್ ಹೂಡಿ ಸೆಟ್  ಧರಿಸಿದ್ದ ವಿಜಯ್​​ ದೇವರಕೊಂಡಾ ಅವರು givenchy sunglasses ಐಷಾರಾಮಿ ಬ್ರಾಂಡ್ ಗಿವೆಂಚಿ ಕನ್ನಡಕವನ್ನು ಧರಿಸಿದ್ದರು. ಇನ್​ಸ್ಟಾಗ್ರಾಮ್ ಪೇಜ್ ಸೆಲೆಬ್ರಿಟಿ ಔಟ್ ಫಿಟ್ಸ್ ವಿಜಯ್ ಧರಿಸಿರುವ ಸ್ಟೈಲಿಶ್ ಕನ್ನಡಕ ಬೆಲೆ 1.58 ಲಕ್ಷ ರೂ. ಆಗಿದೆ ಎಂದು ತಿಳಿಸಿದೆ.
A post shared by Celebrities Outfit Decode (@celebrities_outfit_decode)
ಕೇವಲ ಕನ್ನಡಕಗಳು ಒಂದು ಲಕ್ಷಕ್ಕೂ ಹೆಚ್ಚು ಎಂದು ನೆಟಿಜನ್‌ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ, ವಿಜಯ್ ಅವರ ಹೊಸ ಲುಕ್.. ಸ್ಟೈಲಿಶ್ ಕನ್ನಡಕಗಳ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿಜಯ್ ಮತ್ತು ಮೃಣಾಲ್ ಅಭಿನಯದ ಫ್ಯಾಮಿಲಿ ಸ್ಟಾರ್  ಸಿನಿಮಾದಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಈ ಸಿನಿಮಾದ ಶೂಟಿಂಗ್ ನಲ್ಲಿ ರಶ್ಮಿಕಾ ಭಾಗವಹಿಸಿದ್ದರು ಎಂಬ ಮಾತು ಕೇಳಿಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
