ಹೈದರಾಬಾದ್​:ತೆರೆಯ ಮೇಲೆ ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನು ಮೋಡಿ ಮಾಡುವ ವಿಜಯ್ ದೇವರಕೊಂಡ ರೀಲ್ ಮಾತ್ರವಲ್ಲ, ರಿಯಲ್ ಜೀವನದಲ್ಲಿಯೂ ಹೀರೋ ಎಂದು ಸಾಬಿತು ಮಾಡಿದ್ದಾರೆ. ತಮ್ಮ ನಟನೆಯ ಖುಷಿ ಸಿನಿಮಾದಿಂದ ಸಿಗುವ 1 ಕೋಟಿ ರೂ. ಹಣವನ್ನು ಬಡವರಿಗೆ ನಿಡುವುದಾಗಿ ಘೋಷಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಕಾಯರ್ಕ್ರಮವೊಂದರಲ್ಲಿ ಮಾತನಾಡಿ, ‘ಖುಷಿ’ ಚಿತ್ರ ಗಳಿಕೆಯಲ್ಲಿ 1 ಕೋಟಿ ರೂ. ಹಣವನ್ನು ಬಡ ಕುಟುಂಬಗಳಿಗೆ ಹಂಚಲಾಗುವುದು. ಅರ್ಹ 100 ‘ದೇವರ ಕುಟುಂಬ’ಗಳಿಗೆ ತಲಾ 1 ಲಕ್ಷ ರೂ. ಹಣವನ್ನು ಚೆಕ್ ಮೂಲಕ ವಿತರಿಸಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅರ್ಜಿ ಹರಿ ಬಿಟ್ಟು, ಆಯ್ಕೆಯಾಗುವ ಅರ್ಹ ಕುಟುಂಬಗಳಿಗೆ ವಾರದೊಳಗೆ ಹಣ ವಿತರಿಸಲಾಗುವುದು ಎಂದಿದ್ದಾರೆ. ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಜಯ್ ದೇವರಕೊಂಡ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖುಷಿ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಸಕ್ಸಸ್​​ನ ಸಂಭ್ರಮಾಚರಣೆಗೆ ಚಿತ್ರ ತಂಡ ಕಾರ್ಯಕ್ರಮ ಆಯೋಜಿಸಿತ್ತು. ಈ ಸಮಯದಲ್ಲಿ “ಖುಷಿ ಸಿನಿಮಾದಲ್ಲಿ ಗಳಿಸಿರುವ ಹಣವನ್ನು ದೇವರ ಕುಟುಂಬಗಳಿಗೆ ಸಣ್ಣ ಆರ್ಥಿಕ ಸಹಾಯ ನೀಡಲು ಬಳಸುವುದು ನಿಜವಾದ ಯಶಸ್ಸು ಎಂದು ನಟ ವಿಜಯ್ ಹೇಳಿದ್ದಾರೆ.
ಖುಷಿ ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ ಬರೋಬ್ಬರಿ 50 ಕೋಟಿ ರೂ. ಗಳಿಸಿದೆ. ಕಾಮಿಡಿ, ರೊಮ್ಯಾಂಟಿಕ್ ಕಥಾಹಂದರವನ್ನು ಹೊಂದಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶವಿದೇಶಗಳಲ್ಲಿಯೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಟೀಂ ಇಂಡಿಯಾ ನಹಿ ಟೀಂ ಭಾರತ್: ತಂಡದ ಹೆಸರನ್ನು ಬದಲಾಯಿಸಲು ಬಿಸಿಸಿಐಗೆ ವೀರೇಂದ್ರ ಸೆಹ್ವಾಗ್ ಮನವಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
