ನವದೆಹಲಿ:ತಮ್ಮ ದುಬಾರಿ ಕಾರಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಕೋರಿರುವ ತಮಿಳು ಚಿತ್ರನಟ ವಿಜಯ್​ಗೆ ಮದ್ರಾಸ್ ಹೈಕೋರ್ಟ್​ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ತೆರಿಗೆ ವಿನಾಯಿತಿ ಕೋರಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಂ ವಜಾಗೊಳಿಸಿದ್ದಾರೆ.
ವಿಜಯ್​ ಇಂಗ್ಲೆಂಡ್​ನಿಂದ ಆಮದು ಮಾಡಿಕೊಂಡಿರುವ ಸುಮಾರು 7ರಿಂದ 8 ಕೋಟಿ ರೂ. ಮೌಲ್ಯದ ರೋಲ್ಸ್ ರೋಯ್ಸ್​ ಘೋಸ್ಟ್​ ಕಾರಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ನೀಡುವಂತೆ 2012ರಲ್ಲೇ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಮೂರ್ತಿ ಈ ಆದೇಶ ನೀಡಿದ್ದಾರೆ.
ಇದನ್ನೂ ಓದಿ:ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!
ಸಿನಿಮಾಗಳಲ್ಲಿ ಸಮಾಜಸೇವೆಯ ಚಾಂಪಿಯನ್ ಎಂಬಂತೆ ಹಾಗೂ ಭ್ರಷ್ಟಾಚಾರದ ವಿರೋಧಿಯಂತೆ ಕಾಣಿಸಿಕೊಳ್ಳುವ ನಟ ಪ್ರವೇಶ ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ. ತೆರಿಗೆ ಪಾವತಿಸುವುದು ಪ್ರತಿ ನಾಗರಿಕನ ಕರ್ತವ್ಯ ಹಾಗೂ ಅದು ಕಡ್ಡಾಯ ಎಂದಿರುವ ನ್ಯಾಯಮೂರ್ತಿಯವರು, ದಂಡದ ಮೊತ್ತವನ್ನು ತಮಿಳುನಾಡು ಮುಖ್ಯಮಂತ್ರಿಯವರ ಕೋವಿಡ್ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಿದ್ದಾರೆ. (ಏಜೆನ್ಸೀಸ್)
ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
