ಬೆಂಗಳೂರು:ಉದ್ಯಮಿ ವಿಜಯ್ ಮಲ್ಯ ಸಾಲದ ಶೂಲಕ್ಕೆ ಸಿಕ್ಕು ಭಾರತದಿಂದ ವಿದೇಶಕ್ಕೆ ಹೋಗಿದ್ದರೂ ಅಲ್ಲಿಯೂ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಟ್ವಿಟರ್​ನಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿರುವ ಅವರು ಈ ವರ್ಷ ಮಾಡಿದ ಮೊದಲೆರಡು ಟ್ವೀಟ್​ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಕಳೆದ ವರ್ಷ ಕ್ರಿಸ್​ಮಸ್​ಗೆ ಟ್ವಿಟರ್​ನಲ್ಲಿ ಶುಭಾಶಯ ಕೋರಿದ್ದ ವಿಜಯ್ ಮಲ್ಯ ಆ ನಂತರ ಯಾವುದೇ ಟ್ವೀಟ್ ಮಾಡಿರಲಿಲ್ಲ. ಆದರೆ ಈ ವರ್ಷದ ಮೊದಲ ಟ್ವೀಟ್ ಎಂಬಂತೆ ಅವರು ಮಕರ ಸಂಕ್ರಾಂತಿ ಹಾಗೂ ಪೊಂಗಲ್​ಗೆ ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಯಾರಾದರೂ ಹಬ್ಬದ ವಿಷ್​ ಮಾಡಿದರೆ ವಿಷ್​ ಯೂ ದ ಸೇಮ್ ಎನ್ನಲಾಗುತ್ತದೆ ಅಥವಾ ಪ್ರತಿಯಾಗಿ ಶುಭಾಶಯ ಕೋರಲಾಗುತ್ತದೆ. ಆದರೆ ಸಂಕ್ರಾಂತಿಯ ಶುಭಾಶಯ ಕೋರಿದ ವಿಜಯ್ ಮಲ್ಯ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಲ್ಯರ ಶುಭಾಶಯಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಲೆಳೆದಿದ್ದು, ಕೆಲವರಂತೂ ನಗೆಯುಕ್ಕಿಸುವ ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ. ‘ಒಬ್ಬರು ಭಾರತಕ್ಕೆ ಬಂದ್ಬಿಟ್ರಾ?’ ಎಂದು ಕೇಳಿದರೆ, ಇನ್ನೊಬ್ಬರು ‘ಕ್ಯಾಲೆಂಡರ್ ಬಿಡುಗಡೆ ಆಯ್ತಾ?’ ಎಂದು ಕೇಳಿದ್ದಾರೆ. ಇನ್ನೊಬ್ಬರು ‘ಎಸ್​ಬಿಐನವರು ನಿಮ್ಮ ಲೊಕೇಷನ್ ಹುಡುಕುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಇಂಥ ಹಲವಾರು ಪ್ರತಿಕ್ರಿಯೆಗಳು ರಿಪ್ಲೈ ಮತ್ತು ಕೋಟ್​ ಟ್ವೀಟ್ಸ್​ ಮೂಲಕ ವ್ಯಕ್ತವಾಗಿವೆ.
ಪ್ರತಿಕ್ರಿಯೆಗಳನ್ನು ಈ ಕೆಳಗಿನ ಲಿಂಕ್​ನಲ್ಲಿ ವೀಕ್ಷಿಸಿ..
Happy Sankranti to all— Vijay Mallya (@TheVijayMallya)January 14, 2022
Happy Sankranti to all
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 3 =
Remember me
