ಲಂಡನ್:ಲಂಡನ್ ಅಥವಾ ಭಾರತದಲ್ಲಿ ಪ್ರಕರಣದ ಕಾನೂನು ಶುಲ್ಕಗಳನ್ನು ಭರಿಸಲು ಹಾಗೂ ತಿಂಗಳ ಜೀವನ ವೆಚ್ಚ -22 ಲಕ್ಷ ರೂ. ಭರಿಸಲು ತನ್ನ ಬಳಿ ಹಣವಿಲ್ಲ. ಹೀಗಾಗಿ ಫ್ರಾನ್ಸ್ ನಿಂದ ವಶಪಡಿಸಿಕೊಳ್ಳಲಾಗಿರುವ ತನ್ನ ಆಸ್ತಿಯ ಮಾರಾಟದಿಂದ-14 ಕೋಟಿ ರೂ.ವನ್ನು ಬಿಡುಗಡೆ ಮಾಡಿ ಎಂದು ಪರಾರಿಯಾದ ಆರ್ಥಿಕ ಅಪರಾಧಿ, ಉದ್ಯಮಿ ವಿಜಯ್ ಮಲ್ಯ ಬ್ರಿಟನ್ ಕೋರ್ಟ್ ಫಂಡ್​ಗೆ ಅರ್ಜಿ ಸಲ್ಲಿಸಿದ್ದಾರೆ.
ಬ್ರಿಟನ್​ನ ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯ (ಐಸಿಸಿ) ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದೆ. ವಕೀಲರಿಗೆ ಸದ್ಯ 5.50 ಲಕ್ಷ ಪೌಂಡ್ ಹಣ ಪಾವತಿಸಬೇಕಿದೆ, ಇಲ್ಲದಿದ್ದರೆ ಕಾನೂನು ಹೋರಾಟ ಮುಂದುವರಿಸಲು ತನ್ನ ಬಳಿ ಹಣವಿಲ್ಲ ಎಂದು ಮಲ್ಯ ಅರ್ಜಿಯಲ್ಲಿ ತಿಳಿಸಿದ್ದಾರೆ.
ಮಲ್ಯ ಪರ ಹಾಜರಾಗಿದ್ದ ವಕೀಲ ಫಿಲಿಪ್ ಮಾರ್ಷಲ್ ಕ್ಯೂಸಿ ಕೂಡ, ತನಗೆ ಬಾಕಿ ಇರುವ ಶುಲ್ಕ ಪಾವತಿಸದಿದ್ದರೆ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಹಾಗೂ ಡಿ.18 ರ ವಿಚಾರಣೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ. ಈ ಮೊದಲು ಮಲ್ಯ ತಮ್ಮ ಕನ್ಸಲಟೆನ್ಸಿ ಪೇಮೆಂಟ್ಸ್ ಹಾಗೂ ಇನ್ನಿತರ ಮೂಲಗಳಿಂದ ಹಣ ಪಡೆಯುತ್ತಿದ್ದರು. ಆದರೆ, ಅಕ್ಟೋಬರ್​ನಿಂದ ಆ ಆದಾಯ ಸ್ಥಗಿತವಾಗಿರುವುದರಿಂದ ಮಲ್ಯ ತಮ್ಮ ಆಸ್ತಿಗಳ ಮಾರಾಟದ ಹಣವನ್ನು ಆಶ್ರಯಿಸಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
