ಅಹಮದಾಬಾದ್​:ಗುಜರಾತ್​ನ ಮುಖ್ಯಮಂತ್ರಿ ವಿಜಯ ರೂಪಾಣಿಯವರು ಭಾನುವಾರದಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಹೆಲಿಕಾಫ್ಟರ್​ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇದೀಗ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವಿಜಯ ರೂಪಾಣಿ ಅವರು ಅಹಮದಾಬಾದ್​ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಸರ್ಕಾರದ ಯೋಜನೆಗಳ ಕುರಿತಾಗಿ ಭಾಷಣ ಮಾಡುತ್ತಿದ್ದರು. ನಮ್ಮ ಸರ್ಕಾರವು ಲವ್​ ಜಿಹಾದ್​ ವಿರುದ್ಧ ಕಾನೂನು ತರಲು ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ಹೇಳುತ್ತಿದ್ದರು. ಹಾಗೆ ಹೇಳುತ್ತಲೇ ಮಾತು ನಿಲ್ಲಿಸಿ ಅವರು ಅಲ್ಲಿಯೇ ಕುಸಿಯಲಾರಂಭಿಸಿದ್ದಾರೆ. ಅವರ ಅಕ್ಕ ಪಕ್ಕದಲ್ಲಿದ್ದವರು ತಕ್ಷಣ ಅವರನ್ನು ಹಿಡಿದುಕೊಂಡಿದ್ದಾರೆ. ಅವರಿಗೆ ಬಿಪಿ ಮತ್ತು ಶುಗರ್​ ಲೆವೆಲ್​ ಕಡಿಮೆಯಾಗಿದ್ದರಿಂದಾಗಿ ಈ ರೀತಿ ಆಗಿರುವುದಾಗಿ ತಿಳಿಸಲಾಗಿದೆ.
ರೂಪಾಣಿ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. 24 ಗಂಟೆಗಳ ಕಾಲ ಅವಲೋಕನದಲ್ಲಿಡಲಾಗುವುದು ಎಂದು ಡಾಕ್ಟರ್​ ಆರ್.ಕೆ.ಪಟೇಲ್ ತಿಳಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಸೇರಿ ಅನೇಕ ನಾಯಕರು ರೂಪಾಣಿ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)
वडोदरा में चुनावी सभा में भाषण करते वक्त@CMOGuj@vijayrupanibjpमंच पे गिर पड़े बताया जा रहा अचानक रुपानी को चककर आ गयाविजय रुपाणी की तबियत अब ठीक बताई जा रही है उनका इलाज कर रहे डॉक्टर्स के अनुसार लगातार स्ट्रेस के कारण उनका BP लो हो गया था@indiatvnewspic.twitter.com/TkPKn0jXIY
— Nirnay Kapoor (@nirnaykapoor)February 14, 2021

ಆರೋಗ್ಯದಲ್ಲಿ ಏರುಪೇರು: ವೇದಿಕೆಯಲ್ಲೇ ಕುಸಿದುಬಿದ್ದ ಗುಜರಾತ್​ ಸಿಎಂ

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
