ಬೆಂಗಳೂರು:ವಿಜಯ ಬ್ಯಾಂಕ್​ನ ಚೇರ್ಮನ್ ಆಗಿದ್ದ ಕೆ. ಸದಾನಂದ ಶೆಟ್ಟಿ ಅವರು ನಿಧನರಾದರು. ಸೋಹಂ ಗ್ರೂಪ್ ಆಫ್ ಕಂಪನೀಸ್​ ಸಂಸ್ಥಾಪಕ ಹಾಗೂ ಚೇರ್ಮನ್ ಕೂಡ ಆಗಿದ್ದ ಅವರು ಇಂದು ಫ್ರಾನ್ಸ್​ನಲ್ಲಿ ಕೊನೆಯುಸಿರೆಳೆದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಸದಾನಂದ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಿದ್ದು, ಇಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಶೆಟ್ಟಿ ಅವರು 1937ರ ಮೇ 6ರಂದು ಮಂಗಳೂರಿನ ಕೊಡಿಯಾಲ್​ಬೈಲ್​ನಲ್ಲಿ ಜನಿಸಿದ್ದರು. ಅವರು ಪತ್ನಿ ಸುಜಾತ ಶೆಟ್ಟಿ, ಪುತ್ರರಾದ ಸಂಜಿತ್ ಶೆಟ್ಟಿ ಮತ್ತು ಸುಚಿಂದ್ರ ಶೆಟ್ಟಿ ಅವರನ್ನು ಅಗಲಿದ್ದಾರೆ.
ಈಗ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಂಡಿರುವ ವಿಜಯ ಬ್ಯಾಂಕ್​ಗೆ 1983ರಿಂದ 90ರ ವರೆಗೆ ಸದಾನಂದ ಶೆಟ್ಟಿ ಚೇರ್ಮನ್ ಆಗಿದ್ದರು. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​ನ ಉಪಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಏರ್ ಇಂಡಿಯಾ, ಇಂಡಸ್ಟ್ರಿಯಲ್ ರಿಕನ್​ಸ್ಟ್ರಕ್ಷನ್​ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿಯಲ್ಲೂ ಅವರು ಒಬ್ಬರಾಗಿದ್ದರು.
ರಿನೀವೇಬಲ್ ಎನರ್ಜಿ ಡೆವಲಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಈಗಿನ ಅಧ್ಯಕ್ಷರಾಗಿಯೂ ಅವರು ಅಧಿಕಾರದಲ್ಲಿದ್ದರು. 2004ರಲ್ಲಿ ಅವರು ಸೋಹಂ ರಿನೀವೇಬಲ್ ಎನರ್ಜಿ ಗ್ರೂಪ್ ಆಫ್ ಕಂಪನೀಸ್ ಸ್ಥಾಪನೆ ಮಾಡಿದ್ದರು.
ಕುಂದಾಪುರದ ಫ್ಲೈಓವರ್​ನಲ್ಲಿ ಕೈ ಇಟ್ಟಲ್ಲೆಲ್ಲ ಕರೆಂಟ್!; ವಿದ್ಯುತ್ ಸೋರಿಕೆ, ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ

ಸಾಯಲೆಂದು ನದಿಗೆ ಹಾರಲು ಯತ್ನಿಸಿದವನನ್ನು ಹಿಡಿದು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ ಸಾರ್ವಜನಿಕರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
