ಕರೊನಾ ಕರಿನೆರಳಿನ ನಡುವೆಯೇ ಸಂಸತ್​ನ ಮಳೆಗಾಲದ ಅಧಿವೇಶನ ಇಂದು, ಸೆ.14ರಂದು ಆರಂಭವಾಗಲಿದೆ. ಕರೊನಾ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿರುವ ಕಾರಣ, ಆಸನ ವ್ಯವಸ್ಥೆ ಸೇರಿದಂತೆ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಇದೇ ಪ್ರಥಮ ಬಾರಿಗೆ ಸಂಸತ್ ಅಧಿವೇಶನ ಪಾಳಿಯಲ್ಲಿ ನಡೆಯಲಿದೆ. ಅಲ್ಲದೆ, ಸಂಸದರಿಗೆ ಕರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಹಲವು ಸಂಸದರಿಗೆ ಕರೊನಾ ದೃಢಪಟ್ಟಿದೆ. ಕರೊನಾ ನಿಯಂತ್ರಣಕ್ಕೆಂದು ಮಾರ್ಚ್​ನಲ್ಲಿ ಲಾಕ್​ಡೌನ್ ಹೇರಿಕೆಗೆ ಕೆಲ ದಿನಗಳ ಮುಂಚೆ ಬಜೆಟ್ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ನಂತರದಲ್ಲಿ ನಡೆಯುತ್ತಿರುವ ಅಧಿವೇಶನ ಇದಾಗಿದೆ. ಈ ಬಾರಿ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿದ್ದು, ಈ ಬಗ್ಗೆ ವಿಪಕ್ಷಗಳು ಆಕ್ಷೇಪವನ್ನೂ ವ್ಯಕ್ತಪಡಿಸಿವೆ. ಆದರೆ, ಹೆಚ್ಚಿನ ಜನರು ಏಕಕಾಲಕ್ಕೆ ಸೇರಬಾರದೆಂಬ ಕಾರಣಕ್ಕೆ ಹೀಗೆ ಮಾಡಲಾಗುವುದೆಂದು ಪ್ರತಿಪಕ್ಷಗಳಿಗೆ ಮುಂಚಿತವಾಗಿಯೇ ತಿಳಿಸಿ ಅವರ ಒಪ್ಪಿಗೆ ಮೇರೆಗೇ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಸಂಸದರಿಗೆ ಪ್ರಶ್ನೆ ಕೇಳಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಇದೇನೇ ಇದ್ದರೂ, ಕರೊನಾ, ಆರ್ಥಿಕ ಪರಿಸ್ಥಿತಿ, ಚೀನಾ ಗಡಿ ತಂಟೆ ಮೊದಲಾದ ವಿಚಾರಗಳಲ್ಲಿ ಸರ್ಕಾರಕ್ಕೆ ಬಿಸಿಮುಟ್ಟಿಸಲು ಸಜ್ಜಾಗಿದ್ದ ಪ್ರತಿಪಕ್ಷಗಳಿಗೆ ನಿರಾಸೆಯಾಗಿರಬಹುದು. ಹಾಗಂತ ಪ್ರಶ್ನೋತ್ತರ ಅವಧಿ ರದ್ದಾಗಿರುವುದು ಇದೇ ಮೊದಲೇನಲ್ಲ; ಹಿಂದೆಯೂ ಹಲವು ಬಾರಿ ಆಗಿದೆ. ಈ ಅವಧಿ ಇದ್ದಾಗಲೂ ಎಷ್ಟರಮಟ್ಟಿಗೆ ಫಲಪ್ರದವಾಗಿ ಬಳಕೆಯಾಗಿದೆ ಎಂಬುದರ ಅವಲೋಕವನ್ನೂ ಮಾಡಬೇಕಾಗುತ್ತದೆ. 2014-19ರ ಅವಧಿಯ ಕಲಾಪದಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯ ಬಹುತೇಕ ಭಾಗ ವ್ಯರ್ಥವಾಗಿದೆ ಎಂಬುದನ್ನು ಗಮನಿಸಬೇಕು.
ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನು ರ್ಚಚಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಜತೆಗಿನ ಉದ್ವಿಗ್ನತೆ ಕುರಿತು ಸರ್ಕಾರ ಅಧಿವೇಶನದಲ್ಲಿ ಹೇಳಿಕೆ ನೀಡುವ ಸಾಧ್ಯತೆಯಿದೆ. ಸುಮಾರು 23 ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸಂಸತ್ ಅಧಿವೇಶನ ಎಂಬುದು, ಆಡಳಿತ ಹಾಗೂ ವಿಪಕ್ಷಗಳು ಇಬ್ಬರಿಗೂ ಒಂದು ಉತ್ತಮ ಅವಕಾಶ. ಸರ್ಕಾರಕ್ಕೆ ತನ್ನ ನೀತಿನಿಲುವುಗಳನ್ನು ಮಂಡಿಸಲು ವೇದಿಕೆಯಾದರೆ, ಪ್ರತಿಪಕ್ಷಗಳಿಗೆ ಸರ್ಕಾರದ ವೈಫಲ್ಯಗಳನ್ನು, ದೇಶದ ಪ್ರಸಕ್ತ ಪರಿಸ್ಥಿತಿಯನ್ನು ತೆರೆದಿಡಲು ವೇದಿಕೆ. ಜತೆಗೆ, ಮಸೂದೆಗಳ ಬಗ್ಗೆ ಚಿಂತನಮಂಥನ ನಡೆಸಬಹುದು. ಸಂಸದರು ಉತ್ತಮ ಸಂಸದೀಯ ಪಟುವಾಗಲು ಬೇಕಾದ ತಾಲೀಮು ಇಲ್ಲಿ ಸಿಗುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ವಿವೇಕ ಮತ್ತು ಜಾಣ್ಮೆಯನ್ನು ತೋರಬೇಕಷ್ಟೆ. ಕರೊನಾ ಕಾರಣದಿಂದಾಗಿ ವಿಶ್ವ ನಾನಾ ಬಗೆಯ ಸಂಕಷ್ಟ ಎದುರಿಸುತ್ತಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ಆರ್ಥಿಕತೆ ಕುಸಿತ, ಉದ್ಯೋಗನಷ್ಟ, ಒಟ್ಟಾರೆ ಜನಜೀವನದ ಮೇಲೆ ದುಷ್ಪರಿಣಾಮ… ಹೀಗೆ ಹಲವು ತೊಂದರೆಗಳು ದೇಶದ ಎದುರಿಗಿದ್ದು, ಇವನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಶಾಸನಸಭೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ, ವಿಚಾರವಿನಿಮಯ ನಡೆಯಬೇಕಾಗುತ್ತದೆ. ಇದೊಂದು ಸಾಮೂಹಿಕ ಹೊಣೆಗಾರಿಕೆ. ಸಂಸತ್ ಕಲಾಪದಲ್ಲಿ ಈ ವಿಷಯಗಳು ಚರ್ಚೆಯಾಗಿ, ದೇಶದ ಪರಿಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ದಿಕ್ಸೂಚಿಯಾಗಬಲ್ಲ ಉತ್ತಮ ನಿರ್ಣಯಗಳು ಹೊಮ್ಮಲಿ, ಸಂಸದರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಲಿ ಎಂಬುದು ಜನರ ನಿರೀಕ್ಷೆ.
ಈ ಮೂವರು ಐಪಿಎಸ್​ ಅಧಿಕಾರಿಗಳು ಒಡಹುಟ್ಟಿದವರಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 2 =
Remember me
