‘ಸಂಸತ್ತು ಪ್ರಜಾಪ್ರಭುತ್ವದ ಮಂದಿರ. ನಾವೆಲ್ಲ ಸ್ಥಾನಮಾನಕ್ಕಾಗಿ ಇಲ್ಲಿಗೆ ಬಂದಿಲ್ಲ. 125 ಕೋಟಿ ಭಾರತೀಯರ ಆಶಾಭಾವ ಹಾಗೂ ನಿರೀಕ್ಷೆಯನ್ನು ಹೊತ್ತು ಬಂದಿದ್ದೇವೆ. ಯಾವುದೇ ಕಚೇರಿ ಅಥವಾ ಅಧಿಕಾರ ಮುಖ್ಯವಲ್ಲ. ಜವಾಬ್ದಾರಿ ಮುಖ್ಯ. ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ನಾವೆಲ್ಲರೂ ನಮ್ಮನ್ನೇ ಸಮರ್ಪಿಸಿಕೊಳ್ಳಬೇಕು’-ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಶಾಸಕಾಂಗ ಪಕ್ಷದ ನಾಯಕರಾಗಿ ನರೇಂದ್ರ ಮೋದಿಯವರು ಹೇಳಿದ ಮಾತುಗಳಿವು. ಕಾಲದ ಓಟದಲ್ಲಿ ಆರು ವರ್ಷಗಳು ಸರಿದಿವೆ. 2019ರ ಲೋಕಸಭಾ ಚುನಾವಣೆಯಲ್ಲೂ ಸ್ಪಷ್ಟ ಬಹುಮತದೊಂದಿಗೆ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ತುಂಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಉನ್ನತ ಸ್ಥಾನ ಅಲಂಕರಿಸಿದ್ದು ನಮ್ಮ ಪ್ರಜಾಪ್ರಭುತ್ವದ ಸೊಗಸಾದರೆ, ಆ ಸ್ಥಾನದ ಘನತೆಯನ್ನು ತಮ್ಮ ಕಾರ್ಯಗಳ ಮುಖೇನ ಹೆಚ್ಚಿಸಿದ ಮೋದಿ ಅಪೂರ್ವ ನಾಯಕ ಎನಿಸಿಕೊಂಡಿದ್ದಾರೆ.
ಜಗತ್ತು ಭಾರತವನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಇಲ್ಲಿನ ಶಕ್ತಿ, ಉತ್ಸಾಹವನ್ನು, ಅಭಿವೃದ್ಧಿಯ ಓಟವನ್ನು ಅಂತಾರಾಷ್ಟ್ರೀಯ ವಲಯ ಗಮನಿಸುತ್ತಿದೆ. ಒಂದೊಂದೇ ರಂಗಗಳನ್ನು ಸ್ವಾವಲಂಬಿಗೊಳಿಸುವ, ಸಶಕ್ತಗೊಳಿಸುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆದಿದೆ. ದೇಶದ ನೇತೃತ್ವ ಸಮರ್ಥವಾಗಿದ್ದರೆ ಅದ್ಭುತ ಬದಲಾವಣೆಗಳನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದಕ್ಕೆ ಈ ಕಾಲಘಟ್ಟ ಸಾಕ್ಷಿ. ಹಾಗಂತ ಮೋದಿಯವರಿಗೆ ಸವಾಲುಗಳು ಇರಲಿಲ್ಲ ಅಂತೇನಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ ಮೇಲೆ ಆಡಳಿತಶೈಲಿಯನ್ನು ಸಮರ್ಥವಾಗಿ ಅರ್ಥೈಸಿಕೊಂಡದ್ದು ಮಾತ್ರವಲ್ಲದೆ, ಅಧಿಕಾರಶಾಹಿಯನ್ನು ಚುರುಕುಗೊಳಿಸಿದರು. ಭ್ರಷ್ಟಾಚಾರದ ಕಳಂಕವನ್ನು ದೂರವಿರಿಸಿದರು. ಘೋಷಿಸಿದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಂಡರು. ಯೋಜನೆಗಳ ಫಲಾನುಭವಿಗಳೊಂದಿಗೆ ತಾವೇ ಕುಳಿತು ಮಾತನಾಡಿದರು.
ಸಂಕೀರ್ಣ ಮತ್ತು ದೀರ್ಘಾವಧಿ ಸಮಸ್ಯೆಗಳನ್ನು ಪರಿಹರಿಸಿದ್ದಲ್ಲದೆ ಆಂತರಿಕ ಭದ್ರತೆ, ಸೇನಾ ಆಧುನೀಕರಣಕ್ಕೆ ಒತ್ತು ನೀಡಿದ ಕ್ರಮ ಸುಧಾರಣೆ ಹಾದಿಯ ಪ್ರಮುಖ ಮೈಲಿಗಲ್ಲುಗಳಾದವು. ವಿದೇಶಾಂಗ ನೀತಿಗೆ ಹೊಸ ದಿಕ್ಕು, ನೂತನ ಶಿಕ್ಷಣ ನೀತಿ, ಮೂಲಸೌಕರ್ಯ ವಿಸ್ತರಣೆಗೆ ಆದ್ಯತೆ ಹೀಗೆ ದೇಶವನ್ನು ಎಲ್ಲ ನಿಟ್ಟಿನಲ್ಲಿಯೂ ಬಲಿಷ್ಠಗೊಳಿಸುವಂಥ ಪ್ರಯತ್ನಗಳನ್ನು ಮೋದಿ ಹೆಚ್ಚು ಶ್ರಮವಹಿಸಿ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ದೇಶದ ಪ್ರಶ್ನೆ ಬಂದಾಗ ರಾಜಕೀಯ ಗೌಣವಾಗಬೇಕು. ಆಡಳಿತದಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವುದು ಪ್ರತಿಪಕ್ಷಗಳ ಕರ್ತವ್ಯ. ಹಾಗಂತ, ವಿರೋಧಕ್ಕಾಗಿ ವಿರೋಧಿಸುವ ನೀತಿ ಬೇಡ. 70 ವರ್ಷಗಳನ್ನು ಪೂರೈಸಿರುವ ಮೋದಿ ಮೊದಲಿನ ಉತ್ಸಾಹದಲ್ಲೇ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದು, ಮಹಾಶಕ್ತಿಯಾಗಿಸಲಿ.
ಹಿಂದೂಧರ್ಮದಲ್ಲಿ ಆಲೋಚನೆಗಿದೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
