ಮಹಿಳೆಯರ ಸಾಧನಾಶಿಖರಕ್ಕೆ ಮತ್ತೊಂದು ಹೊಸ ಗರಿ ಮೂಡಿದೆ. ಬಹುತೇಕ ಎಲ್ಲ ರಂಗಗಳಲ್ಲೂ ಕಾರ್ಯಕ್ಷಮತೆಯಿಂದ ಸೈ ಎನಿಸಿಕೊಂಡಿರುವ ಸ್ತ್ರೀಶಕ್ತಿ ಪ್ರಸಕ್ತ ಭಾರತೀಯ ಸೇನೆಗೂ ಬಲ ತುಂಬಲಿದೆ. ಸೇನೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಲಿಲ್ಲ ಎಂದೇನಲ್ಲ. ಆದರೆ, ಆಯಕಟ್ಟಿನ ಹುದ್ದೆಗಳನ್ನು ಹೊಂದುವುದು, ಶಾಶ್ವತ ನೇಮಕಾತಿಯ ಪ್ರಕ್ರಿಯೆಗಳು ಮಾತ್ರ ನನೆಗುದಿಗೆ ಬಿದ್ದಿದ್ದವು. ಈಗ ಆ ಎಲ್ಲ ಅಡ್ಡಿಗಳು ದೂರವಾಗಿ, ಮಹಿಳಾ ಸೇನಾಧಿಕಾರಿಗಳ ಹಲವು ದಶಕಗಳ ಬೇಡಿಕೆ ಈಡೇರಿದೆ. ನೌಕಾಪಡೆಯಲ್ಲಿ ಮಹಿಳೆಯರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ಇದೇ ಮೊದಲ ಬಾರಿಗೆ ಯುದ್ಧನೌಕೆ ಕಾರ್ಯಾಚರಣೆಗೆ ಮಹಿಳೆಯರನ್ನು ನಿಯೋಜಿಸಲಾಗಿದೆ. ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಸೋಮವಾರ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದು, ಐತಿಹಾಸಿಕ ಕ್ಷಣವೇ ಸರಿ. ಅತ್ಯಾಧುನಿಕ ಎಂಎಚ್-60 ಆರ್ ಹೆಲಿಕಾಪ್ಟರ್​ಗಳನ್ನೂ ಇವರು ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲ, ನೂತನವಾಗಿ ಸೇರ್ಪಡೆಯಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲಿರುವ ಗೋಲ್ಡನ್ ಆರೋಸ್ ಸ್ಕಾ್ವಡ್ರನ್​ಗೆ ಶೀಘ್ರದಲ್ಲೇ ವಾಯುಪಡೆಯ ಮಹಿಳಾ ಪೈಲಟ್ ಸೇರ್ಪಡೆ ಆಗಲಿದ್ದಾರೆ. ಈ ನಿಟ್ಟಿನಲ್ಲಿ ಅವರು ತರಬೇತಿ ಪಡೆಯುತ್ತಿದ್ದಾರೆ.
ವಾಯುಪಡೆಯಲ್ಲಿ ಯುದ್ಧ ವಿಮಾನಗಳನ್ನು ಕಾರ್ಯಾಚರಿಸಬಲ್ಲ 10 ಮಹಿಳಾ ಪೈಲಟ್​ಗಳಿದ್ದು, 18 ಮಹಿಳಾ ನ್ಯಾವಿಗೇಟರ್​ಗಳು ಇದ್ದಾರೆ. ವಾಯುಪಡೆಯಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಭೂಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಪೂರ್ಣಾವಧಿ ನೇಮಕಾತಿ (ಪರ್ಮನೆಂಟ್ ಕಮಿಷನ್) ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದ್ದು, ಸೇನೆಯ ಒಟ್ಟು 10 ವಿಭಾಗಗಳಿಗೆ ಮಹಿಳಾ ಅಧಿಕಾರಿಗಳ ಸೇವೆಯನ್ನು ಪೂರ್ಣಕಾಲಿಕವಾಗಿಸಲು ನಿರ್ಧರಿಸಲಾಗಿದೆ. ಮಹಿಳಾ ಅಧಿಕಾರಿಗಳ ಸೇವಾಜ್ಯೇಷ್ಠತೆ, ಅರ್ಹತೆ ಇನ್ನಿತರ ಮಾನದಂಡಗಳನ್ನು ಪರಿಗಣಿಸಿ ಅವರಿಗೆ ಈ ಹುದ್ದೆ ನೀಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದ್ದು, ಇದು ಪ್ರಕ್ರಿಯೆಗಳನ್ನು ಆರಂಭಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸೇನೆ ಈ ಕ್ರಮ ಕೈಗೊಡಿದೆ. ಈ ಮೂಲಕ ದೀರ್ಘ ಹೋರಾಟವೊಂದು ಸುಖಾಂತ್ಯ ಕಂಡಂತಾಗಿದೆ.ಇದನ್ನೂ ಓದಿ:ದೀಪಿಕಾ ಪಡುಕೋಣೆ ಡಿಪ್ರೆಷನ್​ಗೆ ಕಾರಣ ಹುಡುಕಿದ ಕಂಗನಾ ರಣಾವತ್!
ಏರ್ ಡಿಫೆನ್ಸ್, ಸಿಗ್ನಲ್ ವ್ಯವಸ್ಥೆ ವಿಭಾಗ, ಇಂಜಿನಿಯರಿಂಗ್ ವಿಭಾಗ, ಸೇನೆಯ ವಾಯುಯಾನ, ಸರಕು ಸಾಗಾಣಿಕೆ, ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ಇಂಜಿನಿಯರಿಂಗ್, ಆರ್ವಿು ಸರ್ವೀಸ್ ಕೋರ್ (ಎಎಸ್​ಸಿ), ಆರ್ವಿು ಆರ್ಡಿನನ್ಸ್ ಕೋರ್ (ಎಒಸಿ), ಸೇನೆಯ ಗುಪ್ತಚರ ದಳಕ್ಕೆ ನೇಮಕಾತಿ ನಡೆಯಲಿದೆ. 1990ರ ದಶಕದಿಂದಲೇ ಸೇನೆಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದರೂ, ಅವರನ್ನು ಪೂರ್ಣಕಾಲಿಕ ಸಿಬ್ಬಂದಿ ಎಂದು ಪರಿಗಣಿಸುತ್ತಿರಲಿಲ್ಲ. ಈಗಲಾದರೂ, ಆ ಕೊರತೆಗಳು ನಿವಾರಣೆ ಆಗುತ್ತಿರುವುದು ಉತ್ತಮ ಬೆಳವಣಿಗೆ. ಭೂಸೇನೆ, ವಾಯುಪಡೆ, ನೌಕಾಪಡೆ-ಮೂರೂ ಕಡೆಗಳಲ್ಲೂ ಕ್ರಮೇಣ ಮಹಿಳಾ ಬಲ ಹೆಚ್ಚಲಿದೆ. ದೇಶ ಗಡಿ ಬಿಕ್ಕಟ್ಟು ಮತ್ತು ಆಂತರಿಕ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿರುವಾಗ ಸೇನೆಯ ಈ ಶಕ್ತಿವರ್ಧನೆ ಖಂಡಿತವಾಗಿಯೂ ಎಲ್ಲರ ಮನೋಬಲವನ್ನು ಹೆಚ್ಚಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಸಂಪಾದಕೀಯ|ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಅರಿವು ಹೆಚ್ಚಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
