| ಕೆ. ಸುಮಂಗಲಾ ಅಡೂರು, ಸುಳ್ಯ
ಶ್ವಾಸವೆಂದರೆ ಉಸಿರು. ಇದು ಎಲ್ಲರೂ ತಿಳಿದಿರುವ ವಿಷಯ. ಶ್ವಾಸ ನಿಂತುಹೋದರೆ ಆ ವ್ಯಕ್ತಿ ಮೃತಪಟ್ಟ ಎಂದರ್ಥ. ಮನುಷ್ಯ ಬದುಕಿರಬೇಕಾದರೆ ಶ್ವಾಸ ಎಷ್ಟು ಮುಖ್ಯವೋ ಮನುಷ್ಯನಂತೆ ಆತ ಬಾಳಬೇಕಾದರೆ ಅಷ್ಟೇ ಮುಖ್ಯವಾದುದು ವಿಶ್ವಾಸ. ವಿಶ್ವಾಸದಿಂದ ವಿಶ್ವವನ್ನೇ ಗೆಲ್ಲಬಹುದು ಎಂಬ ಮಾತಿದೆ. ಹೀಗೆ ಶ್ವಾಸ ಇರುವವರೆಗೂ ಮನುಷ್ಯ ತನ್ನ ಆತ್ಮವಿಶ್ವಾಸವನ್ನು ಉಳಿಸಿಕೊಂಡಿರಬೇಕು. ಅಭಿಮನ್ಯು ಎಂಬ ಹದಿನೈದು ವರ್ಷ ಪ್ರಾಯದ ಬಾಲಕ ತನ್ನ ಆತ್ಮವಿಶ್ವಾಸದಿಂದ ಕೌರವನ ಬಲುದೊಡ್ಡ ಸೇನೆಯನ್ನು ಎದುರಿಸಿದ ಉಲ್ಲೇಖ ನಮ್ಮ ಪುರಾಣಗಳಲ್ಲಿ ಇದೆ. ಆತನನ್ನು ಸೋಲಿಸಲು ಯಾರಿಗೂ ಸಾಧ್ಯವಾಗದೆ ಕೊನೆಗೆ ಮೋಸದಿಂದ ಕೊಲ್ಲಬೇಕಾಯಿತು. ಧ್ರುವನೆಂಬ ಐದು ವರ್ಷಗಳ ಬಾಲಕ ತನ್ನ ದೃಢಭಕ್ತಿಯಿಂದ ಪರಮಾತ್ಮನನ್ನು ಒಲಿಸಿಕೊಂಡ ನಿದರ್ಶನ ಇದೆ.
ಇದು ಆತ್ಮವಿಶ್ವಾಸದ ಮಾತಾದರೆ ಪರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ತನ್ನ ಬಗ್ಗೆ ಇತರರಲ್ಲಿ ವಿಶ್ವಾಸ ಮೂಡಿಸಿ ಅದನ್ನು ಉಳಿಸಿಕೊಳ್ಳುವುದು ಇನ್ನೊಂದು. ಉದಾಹರಣೆಗೆ, ಮಹಾಭಾರತದಲ್ಲಿ ಶ್ರೀಕೃಷ್ಣನು ಪಾಂಡವ-ಕೌರವರ ನಡುವೆ ಯುದ್ಧವಾಗುವುದನ್ನು ತಪ್ಪಿಸುವ ಸಲುವಾಗಿ ಕರ್ಣನನ್ನು ಏಕಾಂತದಲ್ಲಿ ಕಂಡು ಆತನ ಜನ್ಮರಹಸ್ಯವನ್ನು ಅರುಹಿ ಪಾಂಡವರ ಪಕ್ಷಕ್ಕೆ ಆತ ಬಂದರೆ ಯುದ್ಧ ನಿಂತು ಕರ್ಣನಿಗೆ ಪಟ್ಟಾಭಿಷೇಕವಾಗುತ್ತದೆ. ಆತನ ಎಡಬಲಗಳಲ್ಲಿ ಪಾಂಡವ-ಕೌರವರು ನಿಂತಿರುತ್ತಾರೆ ಎಂದು ಹೇಳಿದರೂ ಕರ್ಣನು ಒಪ್ಪಲಿಲ್ಲ. ಯಾಕೆಂದರೆ ಅದು ತನ್ನನ್ನೇ ನಂಬಿದ ತನ್ನ ಸ್ವಾಮಿಯಾದ ಕೌರವನಿಗೆ ವಿಶ್ವಾಸದ್ರೋಹ ಮಾಡಿದಂತಾಗುತ್ತದೆ ಎಂಬ ಕಾರಣದಿಂದ. ಇಂತಹ ಗುಣಗಳಿಂದಲೇ ಕರ್ಣನು ಇಂದಿಗೂ ಸ್ಮರಣೀಯನಾಗಿದ್ದಾನೆ.
ವಿಶ್ವಾಸದಿಂದ ಕೆಟ್ಟವರನ್ನು ಒಳ್ಳೆಯವರನ್ನಾಗಿಸಲು ಸಾಧ್ಯವಿದೆ. ಪ್ರೀತಿ, ವಿಶ್ವಾಸದಿಂದ ಒಂದು ತುಂಟಮಗುವನ್ನು ದಾರಿಗೆ ತರಬಹುದು. ಕೆಲವೊಮ್ಮೆ ಕ್ರೂರ ಪ್ರಾಣಿಗಳು ಕೂಡ ಕ್ರೌರ್ಯ ಮರೆತು ಪ್ರೀತಿಗೆ ಶರಣಾಗುತ್ತವೆ. ಹೀಗೆ ಸೃಷ್ಟಿಯಲ್ಲಿ ಪ್ರೀತಿ, ವಿಶ್ವಾಸದಿಂದ ಎಲ್ಲವನ್ನೂ ಗಳಿಸಲು ಸಾಧ್ಯ. ನಮ್ಮ ನಡೆನುಡಿಗಳು ವಿಶ್ವಾಸ, ಪ್ರೀತಿಗಳಿಂದ ತುಂಬಿರಲಿ. ನೋಡುವ ದೃಷ್ಟಿ ಪ್ರೀತಿ, ಸ್ನೇಹದಿಂದ ಕೂಡಿರಲಿ. ಹೀಗಿದ್ದಲ್ಲಿ ಬಾಳು ಸುಂದರವಾಗಿ ಇರುತ್ತದೆ. ಒಟ್ಟಿನಲ್ಲಿ ವಿಶ್ವಾಸದ್ರೋಹದಂಥ ಪಾಪ ಬೇರಿಲ್ಲ. ವಿಶ್ವಾಸವೇ ಜೀವನದಲ್ಲಿ ನಮ್ಮ ಉಸಿರು (ಶ್ವಾಸ) ಆಗಿರಲಿ.
(ಲೇಖಕರು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ:[email protected])
10 ರಾಜ್ಯ, 55 ಸ್ಥಳಗಳಲ್ಲಿ ಎನ್‌ಐಎ ಶೋಧ, ಬೆಂಗಳೂರಿನಲ್ಲಿ 10 ಮಂದಿ ಸೇರಿ 44 ಬಾಂಗ್ಲಾ ಪ್ರಜೆಗಳು ಸೆರೆ

ಮ್ಯಾಕ್ಸಿ ದ್ವಿಶತಕ ಆಫ್ಘಾನ್​ಗೆ ಆಘಾತ​: ಸಂಕಷ್ಟ ಸಮಯದಲ್ಲಿ ಆಪತ್ಬಾಂಧವ ಆಟ, ಆಸಿಸ್​ ಸಮೀಸ್​ ಪ್ರವೇಶ ಖಚಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
