
ರಾಘವ ಶರ್ಮನಿಡ್ಲೆ,ಡೆಹರಾಡೂನ್​ (ಉತ್ತರಾಖಂಡ)
“ಕಳೆದೈದು ವರ್ಷಗಳಲ್ಲಿಉತ್ತರಾಖಂಡ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳು ಬಂದಿರಬಹುದು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳೆಲ್ಲವೂ ಜನರನ್ನು ತಲುಪುತ್ತಿವೆ. 2014ರವರೆಗೆ ನಾವು ಘೋಷಣೆಗಳನ್ನಷ್ಟೇ ಕೇಳುತ್ತಿದ್ದೆವು. ಆದರೆ, ಆರೇಳು ವರ್ಷಗಳಲ್ಲಿ ಬದಲಾವಣೆಗಳನ್ನು ಕಂಡಿದ್ದೇವೆ. ಹೀಗಾಗಿ, ಈ ಸರ್ಕಾರವೇ ಮುಂದುವರಿಯಬೇಕು’ ಎನ್ನುತ್ತಾರೆ ಡೆಹರಾಡೂನ್​ನ ಜಾಲಿಗ್ರ್ಯಾಂಟ್​ ಹಳ್ಳಿಯ ನಿವಾಸಿ 65ರ ಆಸುಪಾಸಿನ ಸುಶೀಲ್​ ಕುಮಾರ್​ ಗೊದಿಯಾಲ್​. ಪ್ರಧಾನಿ ನರೇಂದ್ರ ಮೋದಿಯವರಿಗೇ ನಮ್ಮ ಮತ. ಸಿಎಂ ಧಾಮಿ, ಶಾಸಕರನ್ನು ನೋಡಿ ಮತ ಹಾಕುತ್ತಿಲ್ಲ. ಮೋದಿ ಹೆಡ್​ ಮಾಸ್ಟರ್​ ಆಗಿರುವಾಗ ರಾಜ್ಯದಲ್ಲಿ ಕೆಲಸ ಆಗಲೇಬೇಕು ಎನ್ನುತ್ತಾರೆ ಅವರು.
ಉತ್ತರಪ್ರದೇಶದಲ್ಲಿ ಪಿಎಂ ಮೋದಿಯವರಂತೆ ಸಿಎಂ ಯೋಗಿ ಕೂಡ ಜನಪ್ರಿಯರು. ಆದರೆ, ಉತ್ತರಾಖಂಡದಲ್ಲಿ ಹಾಗಿಲ್ಲ. ಪದ ಪೋಸ್ಟರ್​ಗಳಿಂದ ಹಿಡಿದು ಎಲ್ಲೆಡೆ ಮೋದಿಯೇ ರಾರಾಜಿಸುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಮೋದಿ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿರುವುದೂ ಜನರಲ್ಲಿ ವಿಶ್ವಾಸ ವೃದ್ಧಿಸಿದೆ. ಹೀಗಾಗಿ ಈ ಚುನಾವಣೆಯನ್ನು ಮೋದಿ ವರ್ಸಸ್​ ಕಾಂಗ್ರೆಸ್​ ಎನ್ನಲಡ್ಡಿಯಿಲ್ಲ.
ಉತ್ತರಾಖಂಡದ ಮೇಲ್ಭಾಗದ ಕುಮಾವುನ್​ ಬೆಟ್ಟಸಾಲುಗಳಲ್ಲಿ ಬರುವ ಹಳ್ಳಿಯಿಂದ ಉದ್ಯೋಗ ನಿಮಿತ್ತ ಕೆಳಭಾಗದ ಹರಿದ್ವಾರಕ್ಕೆ ವಲಸೆ ಬಂದಿರುವ ಶಂಕರ್​ ನೇಗಿ ಮಾತ್ರ ಗೊದಿಯಾಲ್​ ಮಾತನ್ನು ಒಪ್ಪುವುದಿಲ್ಲ. “ಹಳ್ಳಿಯಲ್ಲಿ ಯುವಕರಿಗೆ ಉದ್ಯೋಗವಿಲ್ಲ, ಮೂಲಸೌಕರ್ಯ ವೃದ್ಧಿಯಾಗಿಲ್ಲ. ಮನೆ ಸಾಮಗ್ರಿ ತರಬೇಕೆಂದರೆ 2-3 ಕಿಮೀ ನಡೆದುಕೊಂಡು ಬರಬೇಕು. ಹೀಗಾಗಿ, ಯುವಕರೆಲ್ಲರೂ ನಗರಗಳತ್ತ ವಲಸೆ ಬರುತ್ತಿದ್ದಾರೆ. ಹಳ್ಳಿಗಳು ಖಾಲಿಯಾಗುತ್ತಿವೆ’ ಎಂದು ವಿವರಿಸಿದರು. ಆದರೆ ಹಳ್ಳಿಗೆ ವಾಪಸಾಗಬೇಕೆಂಬ ಮನಸ್ಥಿತಿ ನಗರ ನಿವಾಸಿಗರಲ್ಲಿ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಕ್ರಮ ಕೈಗೊಂಡಲ್ಲಿ ಹಳ್ಳಿಗಳಿಗೆ ಜನರು ವಾಪಸಾಗುವಂತೆ ಮಾಡಬಹುದೂ ಎಂದೂ ನೇಗಿ ಸಲಹೆ ನೀಡುತ್ತಾರೆ. ರಾಜ್ಯದಲ್ಲಿ ವಲಸೆ ತಡೆಯಲು 2017ರಲ್ಲಿ, ಅಂದಿನ ಸಿಎಂ ತ್ರಿವೇಂದ್ರ ಸಿಂಗ್​ ರಾವತ್​ 10 ವರ್ಷಗಳಲ್ಲಿನ ವಲಸೆ ಪ್ರಮಾಣ ಕುರಿತ ಅಧ್ಯಯನಕ್ಕಾಗಿ ವಲಸೆ (ಪಲಾಯನ್​) ಆಯೋಗವನ್ನು ರಚಿಸಿದ್ದರು. 2011ರಿಂದ ರಾಜ್ಯದಲ್ಲಿ ಇನ್ನೂ 734 ಹಳ್ಳಿಗಳು ಜನವಸತಿ ರಹಿತವಾಗಿವೆ ಎಂದು ವರದಿ ತಿಳಿಸಿತ್ತು.
ಕಾಂಗ್ರೆಸ್​ ನಿರುದ್ಯೋಗ, ಬೆಲೆ ಏರಿಕೆ ಸೇರಿ ಸ್ಥಳಿಯ ಸಮಸ್ಯೆಗಳನ್ನು ಮುಂದಿಟ್ಟು ಬಿಜೆಪಿಯನ್ನು ಗುರಿಯಾಗಿಸಿದೆ. ಮಾಜಿ ಸಿಎಂ ಹರೀಶ್​ ರಾವತ್​ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೂ,ಅವರನ್ನು ಸಿಎಂ ಅಭ್ಯರ್ಥಿ ಎಂದು ೂಷಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಹಿಂದು ಮಂದಿರಗಳ ಅಭಿವೃದ್ಧಿಗೆ ನೀಡಿರುವ ಆದ್ಯತೆ, ಕರೊನಾ ಸಂಕಟ ಕಾಲದಲ್ಲಿ ಬಡ ಜನರಿಗೆ ರೇಷನ್​ ಸಾಮಗ್ರಿಗಳು ತಲುಪಿರುವುದು ಬಿಜೆಪಿ ಮೇಲಿನ ಒಲವನ್ನು ಹೆಚ್ಚಿಸಿದೆ. ಆದರೆ, ಸ್ಥಳಿಯ ಸಮಸ್ಯೆಗಳಿಂದಾಗಿ ಜನಪ್ರತಿನಿಧಿಗಳ ಮೇಲೆ ಆಕ್ರೋಶ ಸ್ವಲ್ಪಮಟ್ಟಿಗೆ ಪಕ್ಕೆ ಡ್ಯಾಮೇಜ್​ ಮಾಡಬಲ್ಲದು ಎನ್ನುವುದನ್ನು ಸ್ಥಳಿಯ ಬಿಜೆಪಿ ಮುಖಂಡರು ಒಪ್ಪಿಕೊಂಡರೂ, 70 ಸೀಟುಗಳಲ್ಲಿ 38-42 ಗೆದ್ದು ಅಧಿಕಾರಕ್ಕೇರಲಿದ್ದೇವೆ ಎಂಬ ವಿಶ್ವಾಸ ಕಾಣುತ್ತಿದೆ.
ಆಮ್​ ಆದ್ಮಿ ಪಾಟಿರ್(ಆಪ್​) ಉತ್ತರಾಖಂಡ ಚುನಾವಣಾ ಕಣಕ್ಕೆ ಧುಮುಕಿರುವುದರಿಂದ ಈ ಎರಡೂ ರಾಷ್ಟ್ರೀಯ ಪಗಳ ಒಂದಿಷ್ಟು ಮತಗಳನ್ನು ಅದು ಸೆಳೆದುಕೊಳ್ಳಲಿದೆ. 70 ೇತ್ರಗಳಲ್ಲೂ ಆಮ್​ ಆದ್ಮಿ ಅಭ್ಯಥಿರ್ಗಳು ಕಣದಲ್ಲಿದ್ದು ಒಂದೆರಡು ಸೀಟು ಗೆದ್ದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. “ಆಪ್​ ಕಾಂಗ್ರೆಸ್​ಗೆ ಡ್ಯಾಮೇಜ್​ ಮಾಡಲಿದೆ. ಆಪ್​ನಿಂದ ಬಿಜೆಪಿಗೆ ಯಾವುದೇ ತೊಂದರೆಯಾಗದು’ ಎನ್ನುತ್ತಾರೆ ಉತ್ತರಾಖಂಡದ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಲ್ಹಾದ್​ ಜೋಶಿ. ಇಲ್ಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಅದು ಜೋಶಿ ರಾಜಕೀಯ ಗ್ರಾಫನ್ನು ಮತ್ತಷ್ಟು ಏರಿಸಬಹುದು.
ಒಟ್ಟು ನಾಲ್ಕು ವಿಧಾನಸಭೆ ಚುನಾವಣೆಗಳಿಗೆ ಸಾಯಾಗಿರುವ ಉತ್ತರಾಖಂಡ ಫೆ.14ರಂದು 5ನೇ ಚುನಾವಣೆಗೆ ಸಾಯಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಇಲ್ಲಿ ಸರ್ಕಾರ ಬದಲಾಗಿದೆ. ಆದರೆ, ಮೋದಿ ಜನಪ್ರಿಯತೆ, ಹಿಂದು ಮಂದಿರಗಳ ಅಭಿವೃದ್ಧಿ, ಚಾರ್​ಧಾಮ್​ ಹೆದ್ದಾರಿ ನಿರ್ಮಾಣ, ಹೃಷಿಕೇಶ-ಕರ್ಣಪ್ರಯಾಗ ರೈಲ್ವೆ ಯೋಜನೆ, ಮೂಲಸೌಕರ್ಯ ಯೋಜನೆಗಳು ಮತ್ತು ಮುಖ್ಯವಾಗಿ ಕರೊನಾ ಬಿಕ್ಕಟ್ಟಿನಿಂದಾಗಿ ಗರೀಬ್​ ಕಲ್ಯಾಣ್​ ಯೋಜನೆ ಅಡಿಯಲ್ಲಿ ರೇಷನ್​ ನೀಡುತ್ತಿರುವುದು ಮತದಾರನನ್ನು ಬಿಜೆಪಿ ಪರ ವಾಲಿಸಿದರೂ ಅಚ್ಚರಿ ಇಲ್ಲ.
ಏಕರೂಪ ನಾಗರಿಕ ಸಂಹಿತೆರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ ಎಂದು ಚುನಾವಣೆಗೆ 48 ಗಂಟೆಗೆ ಮುನ್ನ ಸಿಎಂ ಪುಷ್ಕರ್​ ಸಿಂಗ್​ ಧಾಮಿ ೂಷಿಸಿರುವುದು ಸಂಚಲನ ಸೃಷ್ಟಿಸಿದೆ. ಈ ಸಂಹಿತೆಯ ಕರಡನ್ನು ಸಿದ್ಧಪಡಿಸಲು ಸೂಚಿಸಲಾಗುವುದು. ಇದರಿಂದ ರಾಜ್ಯದ ಎಲ್ಲ ನಾಗರಿಕರಿಗೂ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿ ವಿಚಾರದಲ್ಲಿ ಜಾತಿ, ಧರ್ಮಾತೀತವಾಗಿ ಒಂದೇ ಕಾನೂನು ಇರುತ್ತದೆ ಎಂದಿದ್ದಾರೆ.
ಹಿಜಾಬ್​ ಮತ್ತು ಕೇಸರಿ ಶಾಲುಗಳ ವಿವಾದ ಶುರುವಾದ ಬೆನ್ನಿಗೆ, ಕೇಂದ್ರ ಸಚಿವ ಗಿರಿರಾಜ್​ ಸಿಂಗ್​, ಸಮಾನ ನಾಗರಿಕ ಸಂಹಿತೆಯ ಜಾರಿಗೆ ಇದು ಸಕಾಲ ಎಂದು ಶುಕ್ರವಾರವಷ್ಟೆ ಹೇಳಿದ್ದರು.
ಉತ್ತರಾಖಂಡದಲ್ಲಿ ಲಾಂತರ ಮಂದಿರಗಳಿದ್ದು, ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಪ್ರಶಸ್ತ ತಾಣ. ಏಕರೂಪ ನಾಗರಿಕ ಸಂಹಿತೆ ಬಿಜೆಪಿಯ ಮೂಲ ಅಜೆಂಡಾ ಆಗಿದ್ದರೂ, ಹಿಂದು ಜನಸಂಖ್ಯೆ ಹೆಚ್ಚಿರುವ ರಾಜ್ಯದಲ್ಲೆ ಘೋಷಿಸಿ, ಚುನಾವಣೆ ಲಾಭದ ಲೆಕ್ಕಾಚಾರ ಹಾಕಿದೆ. ಮೇಲಾಗಿ, ಪಕ್ಕದ ಉತ್ತರಪ್ರದೇಶದ ಮೇಲೂ ಇದು ಹೆಚ್ಚು ಪರಿಣಾಮ ಬೀರಲಿದೆ. ಏತನ್ಮಧ್ಯೆ, ಉತ್ತರಾಖಂಡದ ಕೆಳ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ಏರುತ್ತಿದೆ. ಕೆಲ ದಿನಗಳ ಹಿಂದೆ ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸದ್​ನಲ್ಲಿ ಮುಸ್ಲಿಮರ ವಿರುದ್ಧ ಮಾಡಲಾದ ದ್ವೇಷ ಭಾಷಣಕ್ಕೂ ಏಕರೂಪ ನಾಗರಿಕ ಸಂಹಿತೆ ಘೋಷಣೆಗೂ ಸಂಬಂಧವಿದೆ ಎನ್ನುತ್ತಾರೆ ಹರಿದ್ವಾರದಲ್ಲಿ ಸಣ್ಣ ಹನುಮಾನ್​ ಗುಡಿಯ ಅರ್ಚಕ ನಿರಂಜನ ಮಿಶ್ರಾ. “ಇದು ಹಿಂದುರಾಷ್ಟ್ರ, ಇಲ್ಲಿ ನಾವು ಹೇಳಿದ್ದೇ ನಡೆಯಬೇಕು’ ಎನ್ನುತ್ತಾರೆ ಅವರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 8 =
Remember me
