ಕರೊನಾ ಕಾರಣದಿಂದಾಗಿ ಬಹುತೇಕ ಎಲ್ಲ ವಲಯಗಳು ತೊಂದರೆಯಲ್ಲಿರುವುದು ಗೊತ್ತಿರುವಂಥದೇ. ಈಗೇನೋ ಕೆಲ ರಂಗಗಳು ತುಸು ಚೇತರಿಕೆಯ ಹಾದಿಯಲ್ಲಿವೆಯಾದರೂ, ಕರೊನಾಪೂರ್ವದ ಸ್ಥಿತಿಗೆ ಬರಲು ಇನ್ನೂ ಬಹಳ ಸಮಯ ಬೇಕು. ಇಂಥ ಸನ್ನಿವೇಶದಲ್ಲಿ ಸರ್ಕಾರಗಳು ನೆರವಿಗೆ ಬರಬೇಕು ಎಂಬುದು ಸಹಜ ನಿರೀಕ್ಷೆ ಮತ್ತು ಇದು ಸರ್ಕಾರಗಳ ಕರ್ತವ್ಯ ಕೂಡಾ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವು ಸುತ್ತಿನ ನೆರವು ನೀಡಿವೆ.ಇದೀಗ ಕೇಂದ್ರ ಸರ್ಕಾರ ಮತ್ತೊಂದು ಪ್ಯಾಕೇಜ್​ ಘೋಷಿಸಿದ್ದು, ಇದರಿಂದ ದೂರಸಂಪರ್ಕ, ವಾಹನೋದ್ಯಮ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಪ್ರಯೋಜನವಾಗಲಿದೆ. ದೂರಸಂಪರ್ಕ ಕಂಪನಿಗಳು ಬಾಕಿ ಪಾವತಿಯನ್ನು ನಾಲ್ಕು ವರ್ಷದವರೆಗೆ ವಿಳಂಬವಾಗಿ ಜಮೆ ಮಾಡುವ ಅನುಕೂಲ ಕಲ್ಪಿಸಲಾಗಿದೆ ಮತ್ತು ಈ ಕ್ಷೇತ್ರದಲ್ಲಿ ಶೇ. 100 ವಿದೇಶಿ ನೇರ ಹೂಡಿಕೆಗೆ ಅವಕಾಶವೀಯಲಾಗಿದೆ. ಆಟೋಮೊಬೈಲ್​, ಡ್ರೋನ್​ ತಯಾರಿಕೆ, ಆರೋಗ್ಯ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಂತಹ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.ದೂರಸಂಪರ್ಕ ಕಂಪನಿಗಳು ಬಹುಕಾಲದಿಂದ ಬಾಕಿ ಉಳಿಸಿಕೊಂಡಿರುವ ತರಂಗಾಂತರ ಹಂಚಿಕೆ ಮತ್ತು ಪರವಾನಗಿಯ ಶುಲ್ಕದ ಪಾವತಿಗೆ ನಾಲ್ಕು ವರ್ಷಗಳ ಮಾರಟೋರಿಯಂ ಅವಕಾಶವನ್ನು ಸರ್ಕಾರ ನೀಡಿದೆ. ವೊಡಾೋನ್​, ಐಡಿಯಾ, ಭಾತಿರ್ ಏರ್​ಟೆಲ್​, ರಿಲಯನ್ಸ್​ ಕಮ್ಯುನಿಕೇಷನ್ಸ್​ ಕಂಪನಿಗಳ ಪರವಾನಗಿ ಬಾಬ್ತು 92,000 ಕೋಟಿ ಬಾಕಿ ಇದ್ದು, ಸ್ಪೆಕ್ಟ್ರಂ ಬಳಕೆ ಶುಲ್ಕ 41,000 ಕೋಟಿ ರೂ ಇದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿವೆ.ಇದರ ಜತೆಗೆ,ಈ ವಲಯದಲ್ಲಿ ಶೇ.100 ವಿದೇಶಿ ನೇರ ಹೂಡಿಕೆಗೂ (ಎ್​ಡಿಐ) ಕೇಂದ್ರ ಸಂಪುಟ ಸಮ್ಮತಿಸಿದೆ. ಈವರೆಗೆ ಸ್ವಯಂಚಾಲಿತ ಮಾರ್ಗದಲ್ಲಿ ಶೇ.49 ಎ್​ಡಿಐಗೆ ಅವಕಾಶ ಇತ್ತು. ಆದರೆ, ಪಾಕಿಸ್ತಾನ ಮತ್ತು ಚೀನಾ ಮೂಲದ ಹೂಡಿಕೆದಾರರು ಅಥವಾ ಕಂಪನಿಗಳಿಗೆ ನಿರ್ಬಂಧ ವಿಧಿಸಿರುವುದು ಸರಿಯಾದ ಕ್ರಮ ಎನ್ನಬಹುದು. “ದೂರಸಂಪರ್ಕ ರಂಗದಲ್ಲಿ ಶೇ. 100ರಷ್ಟು ಎ್​ಡಿಐಗೆ ಅವಕಾಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಪಿಎಲ್​ಐ ಯೋಜನೆಯಿಂದ ಅಟೋಮೊಬೈಲ್​ ಮತ್ತು ಡ್ರೋನ್​ ತಯಾರಿಕಾ ವಲಯದಲ್ಲಿ ಉದ್ಯೋಗ ಸೃಷ್ಟಿಯ ಉದ್ದೇಶ ಇದೆ’ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್​ ಹೇಳಿದ್ದಾರೆ. ಎಲೆಕ್ಟ್ರಿಕಲ್​ ಮತ್ತು ಜಲಜನಕ (ಹೈಡ್ರೋಜನ್​) ಆಧಾರಿತ ವಾಹನಗಳ ತಯಾರಿಕೆಯನ್ನು ಉತ್ತೇಜಿಸಲು ಆಟೋಮೊಬೈಲ್​ ವಲಯಕ್ಕೆ ಸುಮಾರು 26,000 ಕೋಟಿ ರೂಪಾಯಿ ಉತ್ಪಾದನಾ ಆಧಾರಿತ ಪ್ರೋತ್ಸಾಹ (ಪಿಎಲ್​ಐ) ಯೋಜನೆಯನ್ನು ಸಹ ಕೇಂದ್ರ ಘೋಷಿಸಿದೆ. ಈ ಯೋಜನೆಯಿಂದ 7.50 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯಿದೆ.ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್​ ಯೋಜನೆಗೆ 64,000 ಕೋಟಿ ರೂಪಾಯಿ ಅನುದಾನ ಒದಗಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಆರೋಗ್ಯ ರಂಗದಲ್ಲಿ ಒಂದಷ್ಟು ಸುಧಾರಣೆ ನಿರೀಸಬಹುದಾಗಿದೆ. ಈ ನೆರವಿನ ಘೋಷಣೆಗಳು ಸರಿಯಾದ ಸಮಯಕ್ಕೆ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು ಸಹ ಮುಖ್ಯ. ಹಾಗೇ, ಆಟೊಮೊಬೈಲ್​ ಹಾಗೂ ಟೆಲಿಕಾಂ ಕಂಪನಿಗಳು ಜನರಿಗೂ ಈ ಲಾಭ ದಾಟಿಸುವ ನಿಟ್ಟಿನಲ್ಲಿ ಆಲೋಚಿಸಬೇಕು.







ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
