ಬೆಂಗಳೂರು:ಆಗಸ್ಟ್​ 5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವನ್ನು ಇಟ್ಟ ಬೆಳಗಾವಿಯ ಪಂಡಿತ್​ ಎನ್​.ಆರ್​.ವಿಜಯೇಂದ್ರ ಶರ್ಮ ಅವರಿಗೆ ಆಪತ್ತು ಎದುರಾಗಿದೆ.
ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ ಕರೆ ಬಂದಿದ್ದು, ಸದ್ಯ ಅವರ ಮನೆಗೆ ಈಗ ಭದ್ರತೆಗಾಗಿ ಓರ್ವ ಪೊಲೀಸ್​ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಪಂಡಿತ್ ಶರ್ಮಾ ಅವರು ಬೆಳಗಾವಿಯ ನಿವಾಸಿ. ರಾಮ ಮಂದಿರ ಭೂಮಿ ಪೂಜೆಗೆ ಬೇರೆ ಮುಹೂರ್ತವನ್ನು ಇಡಿ. ಇಲ್ಲದಿದ್ದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಹಲವು ಫೋನ್​ ಕರೆಗಳು ಬರುತ್ತಿವೆ ಎಂದು ಶರ್ಮಾ ತಿಳಿಸಿದ್ದಾರೆ.
ನೀವ್ಯಾಕೆ ಆಗಸ್ಟ್​ 5ರಂದೇ ಭೂಮಿಪೂಜೆಗೆ ಮುಹೂರ್ತವನ್ನು ಇಟ್ಟಿದ್ದೀರಿ. ಈ ಸಮಾರಂಭದಲ್ಲಿ ನೀವ್ಯಾಕೆ ಪಾಲ್ಗೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಯಾರೂ ತಮ್ಮ ಹೆಸರನ್ನು ಹೇಳುತ್ತಿಲ್ಲ. ಬೈಯುತ್ತಾರೆ, ಕಠಿಣವಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಸಹೋದರನಿಗೆ ಶ್ರೀರಕ್ಷೆ ಬಂಧಿಸುವ ಕನಸು ಕಂಡ ಬಾಲಕಿಯನ್ನು ರಕ್ಷಿಸಲಿಲ್ಲ ವೈದ್ಯರು
ಬೆಳಗಾವಿಯ ತಿಲಕ್​​ವಾದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಕೊಲೆ ಬೆದರಿಕೆಯಂತಹ ಫೋನ್​ ಕರೆಗಳು ಬಂದಿಲ್ಲ ಎಂದೂ ತಿಳಿಸಿದ್ದಾರೆ.
ಪಂಡಿತ್​ ಶರ್ಮಾ ಅವರು ಮೊದಲು ಏಪ್ರಿಲ್​​ನಲ್ಲಿ ಅಕ್ಷಯ ತೃತೀಯಕ್ಕೆ ಸರಿಯಾಗಿ ಮುಹೂರ್ತ ಇಟ್ಟಿದ್ದರು. ಆದರೆ ನಂತರ ಲಾಕ್​ಡೌನ್​ ಹೇರಲ್ಪಟ್ಟಿದ್ದರಿಂದ ಮುಹೂರ್ತವನ್ನು ಬದಲಾವಣೆ ಮಾಡಿ, ಆಗಸ್ಟ್​ 5ಕ್ಕೆ ಇಟ್ಟಿದ್ದಾರೆ. (ಏಜೆನ್ಸೀಸ್​)
ಸುಶಾಂತ್​ ಸಿಂಗ್​ ಕೇಸ್​ ಸಿಬಿಐಗೆ: ಬಿಹಾರ ಸಿಎಂ ನಿತೀಶ್​ ಕುಮಾರ್ ಕಡೆಯಿಂದ ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 12 =
Remember me
