ಇಂದೋರ್​:ಚುನಾವಣೆ ಸ್ಪರ್ಧೆಗೆ ಪಕ್ಷದ ಲಿಸ್ಟ್​ನಲ್ಲಿ ಹೆಸರಿಲ್ಲದಿದ್ದರೆ ಅಸಮಾಧಾನ ಹೊರಹಾಕುವವರನ್ನು ಕಾಣಬಹುದು, ಆದರೆ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಲಿಸ್ಟ್​ನಲ್ಲಿ ಹೆಸರಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯವರ್ಗೀಯ ಈ ವಯಸ್ಸಲ್ಲಿ ಮತದಾರರಿಗೆ ನಾನು ಕೈ ಮುಗಿದು ಮತ ಬೇಡಬೇಕಾ ಎಂದು ಪ್ರಶ್ನಿಸುವ ಮೂಲಕ ತನಗೆ ಸ್ಪರ್ಧೆಗೆ ಆಸಕ್ತಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಸರಿ, ತಪ್ಪು ಅರಿಯುವ ಶಕ್ತಿ ಬೆಳೆಸಿಕೊಳ್ಳಿ: ವಿದ್ಯಾರ್ಥಿನಿಯರಿಗೆ ಮೈಸೂರು ಡಿಸಿ ರಾಜೇಂದ್ರ ಕರೆ
ಇಂದೋರ್​ 1 ಕ್ಷೇತ್ರದಿಂದ ಅವರ ಹೆಸರು ಪಟ್ಟಿಯಲ್ಲಿದೆ. ಲಿಸ್ಟ್​ನಲ್ಲಿ ತನ್ನ ಹೆಸರು ಕಂಡು ಅಚ್ಚರಿಯಾಯಿತು. ಹಿರಿಯ ನಾಯಕನಾಗಿ ಸಭೆಗಳಲ್ಲಿ ಮಾತ್ರ ಮಾತನಾಡುವ ನನಗೆ ಸ್ಪರ್ಧೆಗೆ ಆಸಕ್ತಿ ಇರಲಿಲ್ಲ. ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧನಿರಬೇಕಿರುತ್ತದೆ. ಗೆಲುವಿಗೆ ಪೂರ್ವಸಿದ್ಧತೆಯೂ ಅಗತ್ಯವಿರುತ್ತದೆ. ಆದರೆ ಇದಾವುದೂ ಇಲ್ಲದಿರುವುದರಿಂದ ನನಗೆ ಸ್ಪರ್ಧೆಗೆ ಆಸಕ್ತಿಯಿಲ್ಲ. ಮೇಲಾಗಿ ಹಿರಿಯನಾದ ನಾನು ನಿಮ್ಮನ್ನೆಲ್ಲ ಕೈಮುಗಿದು ಮತ ಕೇಳಬೇಕಾ ಎಂದು ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಭೆಗಳಲ್ಲಿ ಭಾಷಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ. 5 ಸಮಾವೇಶಗಳಿಗೆ ಹೆಲಿಕಾಪ್ಟರ್ ನಲ್ಲಿ​, 3 ಕ್ಕೆ ಕಾರ್​ನಲ್ಲಿ ಪ್ರಯಾಣಿಸಬೇಕಿದೆ. ಆದರೆ ನಾವು ಅಂದುಕೊಳ್ಳುವುದು ಒಂದು, ನಡೆಯುವುದು ಮತ್ತೊಂದು ಎನ್ನುವಂತಾಗಿದೆ. ಆದರೂ ಸಹ ಪಕ್ಷ ನಿಯೋಜಿಸಿರುವ ಕಡೆ ತೆರಳಿ ನ್ಯಾಯ ಒದಗಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಚೀನಾ ಪ್ಲಸ್ ಒನ್ ಕಾರ್ಯತಂತ್ರ; ಐಎಂಎಫ್ ಗಮನಸೆಳೆಯಲು ಪ್ರಯತ್ನ
ವಿಜಯವರ್ಗೀಯ ಇಂದೋರ್​ ನಗರಕ್ಕೆ ಮೇಯರ್​ ಆಗಿದ್ದವರು. ಕೇಂದ್ರ ಸಚಿವರೂ ಆಗಿದ್ದವರು. ಪ್ರಸ್ತುತ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಪುತ್ರ ಇಂದೋರ್​ 3 ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + fifteen =
Remember me
