ಮುಂಬೈ:ಎಂಟು ಪೊಲೀಸರ ಹತ್ಯೆಗೆ ಕಾರಣನಾಗಿದ್ದ ವಿಕಾಸ್​ ದುಬೆಯನ್ನೂ ನಿನ್ನೆ ಉತ್ತರ ಪ್ರದೇಶ ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಂದಿದ್ದಾರೆ. ದುಬೆಯ ಅಂತ್ಯಕ್ರಿಯೆಯೂ ಆಗಿದೆ.
ಅದರ ಬೆನ್ನಲ್ಲೇ ಇಂದು ವಿಕಾಸ್​ ದುಬೆಯ ಇನ್ನೋರ್ವ ಸಹಚರನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆ ಪ್ರಕರಣದಲ್ಲಿ ಈತನೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ದುಬೆ ಸಹಚರ ಅರವಿಂದ್​ ಅಕಾ ಗುಡ್ಡನ್​ ತ್ರಿವೇದಿ ಹಾಗೂ ಅವನ ಚಾಲಕ ಸೋನು ತಿವಾರಿ ಇಬ್ಬರೂ ಥಾಣೆಯ ಸುತ್ತಲಿನ ಪ್ರದೇಶದಲ್ಲಿಯೇ ಅಡಗಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಜುಹು ಭಯೋತ್ಪಾದನಾ ನಿಗ್ರಹ ದಳ, ಅವರ ಪತ್ತೆ ಕಾರ್ಯಾಚರಣೆ ನಡೆಸಿತ್ತು.ಇದನ್ನೂ ಓದಿ:‘ನಾನು ಕೊವಿಡ್​-19 ತಪಾಸಣೆ ಮಾಡಿಸಿಕೊಂಡೆ…ನೀವೂ ತಪ್ಪದೆ ಟೆಸ್ಟ್​ಗೆ ಒಳಗಾಗಿ!’
ಗುಡ್ಡನ್​ ದುಬೆಯೊಂದಿಗೆ ಸೇರಿ ಹಲವು ಕ್ರೈಂಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿದೆ. 2001ರಲ್ಲಿ ನಡೆದ ಉತ್ತರ ಪ್ರದೇಶ ಸಚಿವ ಸಂತೋಷ್​ ಶುಕ್ಲಾ ಅವರ ಹತ್ಯೆಯಲ್ಲೂ ಈತನ ಕೈವಾಡ ಇತ್ತು ಎಂದು ವರದಿಯಾಗಿದೆ.ಗುಡ್ಡನ್​ನನ್ನು ಬಂಧಿಸಿದ ಎಟಿಎಸ್​ಗೆ ಉತ್ತರ ಪ್ರದೇಶ ಸರ್ಕಾರ ಬಹುಮಾನವನ್ನೂ ಘೋಷಿಸಿದೆ. (ಏಜೆನ್ಸೀಸ್​)
ವಿಕಾಸ್​ ದುಬೆ ಅಂತ್ಯಕ್ರಿಯೆ ವೇಳೆ ಆವೇಶಗೊಂಡ ಪತ್ನಿ; ‘ಅವನಿಗೆ ಇಂಥ ಸಾವು ಬಂದಿದ್ದು ಯೋಗ್ಯವಾಗಿದೆ’ ಎಂದು ಕೂಗಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
