ಲಖನೌ:ನಿನ್ನೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಬಂಧಿಸುತ್ತಿದ್ದಂತೆ ಇತ್ತ ಲಖನೌದಲ್ಲಿ ಆತನ ಪತ್ನಿ, ಮಗನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಇಂದು ಉತ್ತರ ಪ್ರದೇಶ ಪೊಲೀಸರು ದುಬೆಯನ್ನು ಎನ್​ಕೌಂಟರ್ ಮಾಡಿ ಕೊಂದಿದ್ದಾರೆ. ಆತನ ಅಂತ್ಯಕ್ರಿಯೆ ವೇಳೆ ಪತ್ನಿ ತುಂಬ ಭಾವುಕರಾದರು.
ವಿಕಾಸ್​ ದುಬೆ ಅಂತಿಮ ಸಂಸ್ಕಾರವನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮದವರು ಆಕೆಯ ಬಳಿ, ನಿಮ್ಮ ಪತಿಗೆ ಇಂಥದ್ದೊಂದು ಅಂತ್ಯ ಎದುರಾಗಿದ್ದು ನ್ಯಾಯವಾ? ಇಂಥ ಸಾವಿಗೆ ಅವರು ಯೋಗ್ಯರು ಎಂದು ನಿಮಗೆ ಅನ್ನಿಸುತ್ತಿದೆಯಾ ಎಂದು ಪ್ರಶ್ನೆ ಕೇಳಿದಾಗ ಆವೇಶದಿಂದಲೇ ಉತ್ತರ ನೀಡಿದ್ದಾರೆ.ಇದನ್ನೂ ಓದಿ:ವಿಕಾಸ್​ ದುಬೆ ಎನ್​ಕೌಂಟರ್​ಗೆ ಮರುಗಿದ ಟಿಎಂಸಿ ಸಂಸದೆ; ನ್ಯಾಯವನ್ನೇ ಕೊಲ್ಲುತ್ತಿದ್ದಾರೆ ಯೋಗಿ ಜಿ ಎಂದ ಮಾಹುವಾ
ಹೌದು..ಹೌದು..ಎಂದು ಮೂರು ಬಾರಿ ಕೂಗಿದ ಆಕೆ, ಇಂಥದ್ದೊಂದು ಸಾವಿಗೆ ವಿಕಾಸ್​ ದುಬೆ ಯೋಗ್ಯನಾಗಿದ್ದಾನೆ. ಅವನ ಹಣೆಬರಹದಂತೆ ಆಗಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ನೀವೆಲ್ಲ ಈ ಜಾಗದಿಂದ ಹೊರಟು ಹೋಗಿ ಎಂದು ಮಾಧ್ಯಮದವರ ಎದುರು ಕೂಗಾಡಿದ್ದಾರೆ ಎನ್ನಲಾಗಿದೆ.ವಿಕಾಸ್​ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಎದೆಗೆ ನಾಲ್ಕು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಮೃತದೇಹಕ್ಕೆ ಪೋಸ್ಟ್​ ಮಾರ್ಟಮ್​ ಕೂಡ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. (ಏಜೆನ್ಸೀಸ್​)
ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 3 =
Remember me
