ಕಾನ್ಪುರ:ಎಂಟು ಪೊಲೀಸರ ಹತ್ಯೆಗೈದಿರುವ ಗ್ಯಾಂಗ್​ಸ್ಟರ್​ ವಿಕಾಸ್ ದುಬೆ ಮತ್ತು ತಂಡವನ್ನು ಬಂಧಿಸುವುದಕ್ಕೆ ಉತ್ತರ ಪ್ರದೇಶ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. 100 ತಂಡವನ್ನು ಇದಕ್ಕಾಗಿ ಪೊಲೀಸ್ ಇಲಾಖೆ ನಿಯೋಜಿಸಿದೆ.
ಪೊಲೀಸರ ಕಾರ್ಯಾಚರಣೆ ಚುರುಕುಗೊಂಡ ಬೆನ್ನಿಗೇ, ಬಂಧನವನ್ನು ತಪ್ಪಿಸಿಕೊಳ್ಳುವ ಸಲುವಾಗಿ ದುಬೆ ನೇಪಾಳಕ್ಕೆ ಪಲಾಯನಗೈಯುವ ಸಾಧ್ಯತೆ ಇದೆ. ಅಥವಾ ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ನೇಪಾಳದ ಗಡಿ ಭಾಗದ ಲಖಿಂಪುರ ಖೇರಿ ಸೇರಿ ಅಯಕಟ್ಟಿನ ಎಲ್ಲ ಪ್ರದೇಶಗಳನ್ನೂ ಪೊಲೀಸರು ಬಂದ್ ಮಾಡಿದ್ದಾರೆ.
ಇದನ್ನೂ ಓದಿ:ಗಣ್ಯರ ಹತ್ಯೆಗೂ ಸ್ಕೆಚ್ ಹಾಕಿದ್ದ ದುಬೆ!
ಪೊಲೀಸರು ನೀವಡಾ ಗ್ರಾಮದಲ್ಲಿ ದುಬೆ ಮನುಷ್ಯರಿರುವುದನ್ನು ಖಚಿತ ಪಡಿಸಿಕೊಂಡು ಆ ಪ್ರದೇಶವನ್ನು ಶುಕ್ರವಾರ ಸುತ್ತುವರಿದಿದ್ದರು. ಅಲ್ಲಿ ಮತ್ತೆ ಮುಖಾಮುಖಿ ಘರ್ಷಣೆ ಸಂಭವಿಸಿದ್ದು, ಗುಂಡಿನ ದಾಳಿಗೆ ದುಬೆ ಬೆಂಬಲಿಗರಾದ ಪ್ರೇಮ್ ಪ್ರಕಾಶ್ ಮತ್ತು ಅತುಲ್ ದುಬೆಯನ್ನು ಹತ್ಯೆಗೈದಿದ್ದಾರೆ. ಪೊಲೀಸರಿಂದ ಅವರು ಕಸಿದುಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಮರುವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ: ಗುರುವಾರ ತಡರಾತ್ರಿ- ಶುಕ್ರವಾರ ನಸುಕಿನ ವೇಳೆ 15-16 ಪೊಲೀಸರ ತಂಡ ಕಾನ್ಪುರ ಸಮೀಪದ ಬಿಕ್ರು ಗ್ರಾಮಕ್ಕೆ ದುಬೆಯನ್ನು ಬಂಧಿಸಲು ತೆರಳಿದ ವೇಳೆ, ದುಬೆ ಬೆಂಬಲಿಗರು ಏಕಾಕಿ ಪೊಲೀಸರನ್ನು ತಡೆದರು. ಅಲ್ಲದೆ, ಗ್ರಾಮ ಪ್ರವೇಶಿಸದಂತೆ ತಡೆದು ಹಿಮ್ಮೆಟ್ಟಿಸಲು ಪ್ರಯತ್ನಿಸಿದರಲ್ಲದೆ. ಗುಂಡಿನ ದಾಳಿ ಶುರು ಮಾಡಿದರು. ಹೀಗಾಗಿ ಎಂಟು ಪೊಲೀಸರು ಮೃತಪಟ್ಟರು. ಮೃತರು ಮತ್ತು ಗಾಯಗೊಂಡವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನೂ ದುಬೆ ಬೆಂಬಲಿಗರು ಹೊತ್ತೊಯ್ದಿದ್ದಾರೆ. (ಏಜೆನ್ಸೀಸ್)
ದುಬೆಗೆ- ದಾಳಿಯ ಸುಳಿವು ಪೊಲೀಸರೇ ಕೊಟ್ರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
