ನವದೆಹಲಿ:ಗ್ಯಾಂಗ್​ಸ್ಟರ್ ವಿಕಾಸ್​ ದುಬೆ ಜೈಲಿನಲ್ಲಿದ್ದುಕೊಂಡೇ ಎಲ್ಲ ರೀತಿಯ ಅಪರಾಧ ಕೃತ್ಯಗಳಿಗೂ ಸ್ಕೆಚ್ ಹಾಕುತ್ತಿದ್ದ. ರಾಜಕೀಯವಾಗಿಯೂ ದುಬೆ ಬಹಳ ಪ್ರಭಾವಿ. ಹೀಗಾಗಿ ಅನೇಕ ರಾಜಕೀಯ ಕೊಲೆ ಪ್ರಕರಣಗಳಲ್ಲಿ ಈತ ನೇರವಾಗಿ ಭಾಗಿಯಾಗಿದ್ದ. ಸಮಾಜದ ಅನೇಕ ಗಣ್ಯರ ಹತ್ಯೆಗೆ ಸ್ಕೆಚ್​ ಕೂಡ ಹಾಕಿದ್ದ ಎಂಬುದು ಅನೇಕ ಸಂದರ್ಭಗಳಲ್ಲಿ ಬಹಿರಂಗವಾಗಿದೆ.
ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರ ಇದ್ದಾಗ 2002ರಲ್ಲಿ ವಿಕಾಸ್ ದುಬೆ ಕಾನ್ಪುರದ ಬಿಲ್​ಹಾರ್ಮ್ ಶಿವರಾಜ್​ಪುರ, ಚೌಬೇಪುರ, ರಾಣಿಯಾ ಪ್ರದೇಶಗಳಲ್ಲಿ ಬಹಳ ಮುಕ್ತವಾಗಿ ಓಡಾಡಿಕೊಂಡಿದ್ದ. ಈ ಅವಧಿಯಲ್ಲಿ ಈತ ಅಕ್ರಮವಾಗಿ ಸಾಕಷ್ಟು ಆಸ್ತಿ ಸಂಪಾದಿಸಿದ್ದ ಆರೋಪವಿದೆ.
ಇದನ್ನೂ ಓದಿ:8 ಪೊಲೀಸರ ಹತ್ಯೆಗೈದ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಯಾರು?
ಶಿವರಾಜ್​ಪುರದಿಂದ ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ. ಆ ಸಂದರ್ಭದಲ್ಲಿ ದುಬೆ ಜೈಲಿನಲ್ಲೇ ಇದ್ದ. ಬಿಎಸ್​ಪಿಯ ಹಿರಿಯ ನಾಯಕರೊಬ್ಬರಿಗೂ ಬಹಳ ಆಪ್ತನಾಗಿ ಕಾಣಿಸಿಕೊಂಡಿದ್ದ. ಇದೂ ಅಲ್ಲದೆ, 1990ರ ದಶಕದಲ್ಲಿ ಜನತಾ ದಳದಲ್ಲಿದ್ದ ಅಂದಿನ ಶಾಸಕ ಹರಿಕಿಶನ್ ಶ್ರೀವಾಸ್ತವ ಅವರ ಆಪ್ತನಾಗಿದ್ದ. ಶ್ರೀವಾಸ್ತವ ನಂತರದಲ್ಲಿ ಬಿಎಸ್​ಪಿ ಸೇರಿದ್ದರು. ಈ ಅವಧಿಯಲ್ಲಿ ಶ್ರೀವಾಸ್ತವ ಅವರ ಪ್ರತಿಸ್ಪರ್ಧಿ ಸಂತೋಷ್ ಶುಕ್ಲಾರನ್ನು ದುಬೆ ಪೊಲೀಸ್ ಠಾಣೆಯಲ್ಲೇ ಹತ್ಯೆಗೈದಿದ್ದ.
ಸೋದರ ಸಂಬಂಧಿ ಅನುರಾಗ್ ಹತ್ಯೆಗೆ ಮಾಟಿ ಜೈಲಿನಲ್ಲಿದ್ದುಕೊಂಡೇ 2018ರಲ್ಲಿ ಸ್ಕೆಚ್ ರೂಪಿಸಿದ್ದ. ಇದನ್ನು ಅನುರಾಗ್​ ಪತ್ನಿ ಆರೋಪಿಸಿದ್ದು, ದೂರಿನಲ್ಲಿ ವಿಕಾಸ್​ ದುಬೆ ಮತ್ತು ನಾಲ್ವರ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. 2000ನೇ ಇಸವಿಯಲ್ಲಿ ರಾಮಬಾಬು ಯಾದವ್ ಎಂಬಾತನ ಹತ್ಯೆಗೂ ಸ್ಕೆಚ್ ಹಾಕಿ ಯಶಸ್ವಿಯಾಗಿದ್ದ. 2004ರಲ್ಲಿ ಕೇಬಲ್ ಟಿವಿ ಮಾಲೀಕ ದಿನೇಶ್ ದುಬೆ ಎಂಬಾತನನ್ನೂ ಹತ್ಯೆ ಮಾಡಿದ್ದ. (ಏಜೆನ್ಸೀಸ್)
ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
