ಲಖನೌ:ಅಂದು ಕಾನ್ಪುರದಲ್ಲಿ ಎಂಟು ಪೊಲೀಸ್​ರನ್ನು ವಿಕಾಸ್​ ದುಬೆ ಹತ್ಯೆ ಮಾಡಿದಾಗ, ಆತನ ತಾಯಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.
ನನ್ನ ಮಗ ಮಾಡಿದ್ದು ಅಪರಾಧ. ಒಂದೊಮ್ಮೆ ಅವನು ಶರಣಾಗದೆ ಇದ್ದರೆ ಕೊಂದುಬಿಡಿ ಎಂದು ಪೊಲೀಸರಿಗೆ ಹೇಳಿದ್ದರು.ಇದೀಗ ಅವರ ಎರಡನೇ ಮಗ, ವಿಕಾಸ್​ ದುಬೆ ಸೋದರ ದೀಪ್​ ಪ್ರಕಾಶ್​ ದುಬೆ ತಲೆ ಮರೆಸಿಕೊಂಡಿದ್ದಾನೆ. ತನ್ನ ಅಣ್ಣನ ಅಕ್ರಮಗಳಲ್ಲಿ ಆತನ ಪಾಲೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ದೀಪ್​ ಪ್ರಕಾಶ್​ ದುಬೆ ತಲೆಗೆ ಉತ್ತರ ಪ್ರದೇಶ ಸರ್ಕಾರ 20 ಸಾವಿರ ರೂ.ಘೋಷಿಸಿದೆ.
ಇದೀಗ ಮತ್ತೆ ತಾಯಿ ಸರಳಾ ದೇವಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಿರಿಯ ಮಗನ ಬಳಿ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ:PHOTOS: ನಟ ಜೈ ಜಗದೀಶ್​ ಪುತ್ರಿ ವೈಭವಿ ಮಾದಕ ಫೋಟೋಶೂಟ್​
ದೀಪ್ ಪ್ರಕಾಶ್​ ದುಬೆ ಶರಣಾಗದಿದ್ದರೆ ವಿಕಾಸ್​ ದುಬೆಗೆ ಎದುರಾದ ಪರಿಸ್ಥಿತಿಯೇ ಅವನಿಗೂ ಬರುತ್ತದೆ. ಹಾಗಾಗಿ ಎಲ್ಲಿದ್ದರೂ ಬಂದು ಶರಣಾಗು ಎಂದು ಹೇಳಿದ್ದಾರೆ.
ದೀಪ್​ ಪ್ರಕಾಶ್​ ದಯವಿಟ್ಟು ಬಂದು ಶರಣಾಗು. ಇಲ್ಲದಿದ್ದರೆ ಪೊಲೀಸರು ನಿನ್ನ ಮತ್ತು ನಿನ್ನ ಕುಟುಂಬವನ್ನು ಕೊಲ್ಲುತ್ತಾರೆ. ಶರಣಾದರೆ ಪೊಲೀಸರು ರಕ್ಷಣೆ ಕೊಡುತ್ತಾರೆ. ನೀನೇನೂ ಮಾಡಿಲ್ಲ ಎನ್ನುವುದು ನನಗೆ ಗೊತ್ತು. ವಿಕಾಸ್​ ದುಬೆಯ ತಮ್ಮ ಎಂಬ ಒಂದೇ ಕಾರಣಕ್ಕೆ ನೀನು ಅಡಗಿದ್ದೀಯಾ ಎಂಬುದು ನನಗೆ ತಿಳಿದಿದೆ ಎಂದು ಸರಳಾದೇವಿ ಹೇಳಿದ್ದಾರೆ. (ಏಜೆನ್ಸೀಸ್​)
ರಾಮ ರಾಜ್ಯ ಸ್ಥಾಪನೆಯ ಭರವಸೆ ನೀಡಿ ಗೂಂಡಾ ರಾಜ್ಯ ನಿರ್ಮಾಣ ಮಾಡಿದ್ದಾರೆ…: ರಾಹುಲ್ ಗಾಂಧಿ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:14 + eight =
Remember me
