ಲಖನೌ:ಕಾನ್ಪುರದಲ್ಲಿ ಉತ್ತರ ಪ್ರದೇಶ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, 8 ಸಿಬ್ಬಂದಿಯನ್ನು ಹತ್ಯೆ ಮಾಡಿದ ಸ್ಥಳೀಯ ರೌಡಿ ವಿಕಾಸ್​ ದುಬೆ ಹಿಂಬಾಲಕರು ನಕ್ಸಲರ ರೀತಿ ವಿಕೃತಿ ಮೆರೆದಿರುವ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ಸತ್ತ ಪೊಲೀಸರ ಶವಗಳ ರುಂಡ-ಮುಂಡವನ್ನು ಕೊಡಲಿಯಿಂದ ಕಡಿದು ಹಾಕಿದ್ದಲ್ಲದೆ, ದೇಹವನ್ನು ಛಿದ್ರಗೊಳಿಸಿ ಕೆಂಪು ಉಗ್ರರ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬುದು ಮರಣೋತ್ತರ ವರದಿ ಬಹಿರಂಗಪಡಿಸಿದೆ.
ಡಿಎಸ್​ಪಿ ದರ್ಜೆಯ ಸರ್ಕಲ್​ ಆಫೀಸರ್ ದೇವೇಂದ್ರ ಮಿಶ್ರಾ ಅವರ ತಲೆ ಮತ್ತು ಕಾಲ್ಬೆರಳುಗಳನ್ನು ಕೊಡಲಿಯಿಂದ ಕೊಚ್ಚಿ ತುಂಡರಿಸಲಾಗಿದ್ದರೆ, ದೇಹವನ್ನು ಛಿದ್ರಗೊಳಿಸಲಾಗಿದೆ. ತುಂಬಾ ಹತ್ತಿರದಿಂದ ಗುಂಡಿನ ಸುರಿಮಳೆಗೈದು ಸಬ್​ಇನ್​ಸ್ಪೆಕ್ಟರ್​ ಒಬ್ಬರ ದೇಹಾದ್ಯಂತ ತೂತುಗಳು ಕಾಣುವಂತೆ ಮಾಡಲಾಗಿದೆ. ಪೊಲೀಸರ ಬಳಿಯಿದ್ದ ಎಕೆ-47 ಅನ್ನು ಕಸಿದುಕೊಂಡು, ಅದರಿಂದಲೇ ಗುಂಡು ಸಿಡಿಸಿ ಪೊಲೀಸ್​ ಪೇದೆಯನ್ನು ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ:ಪೆಟ್ಟು ತಿಂದರೂ ಸುಮ್ಮನಾಗದ ಚೀನಾ, ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ್ಯಾಗನ್ ಕಬಂಧಬಾಹು
ಮರಣೋತ್ತರ ಪರೀಕ್ಷೆ ನಡೆಸುವಾಗ ವೈದ್ಯರು ಸಬ್​ಇನ್​ಸ್ಪೆಕ್ಟರ್​ ಅನೂಪ್​ ಸಿಂಗ್​ ಅವರ ದೇಹದಿಂದ 7 ಗುಂಡುಗಳನ್ನು ಹೊರತೆಗೆದರೆ, ಶಿವರಾಜ್​ಪುರ ಸ್ಟೇಷನ್​ ಆಫೀಸರ್​ ಮಹೇಶ್​ ಯಾದವ್​ ಅವರ ಮುಖ, ಎದೆ ಮತ್ತು ಹೆಗಲಿನ ಭಾಗದ ತುಂಬೆಲ್ಲಾ ಗುಂಡುಗಳಿದ್ದವು. ಪೇದೆ ಜಿತೇಂದ್ರ ಪಾಲ್​ ದೇಹ ಎಕೆ-47 ಗುಂಡಿನ ದಾಳಿಯಲ್ಲಿ ಛಿದ್ರಛಿದ್ರವಾಗಿದ್ದರೆ, ಪೇದೆಗಳಾದ ರಾಹುಲ್​, ಬಬ್ಲು ಮತ್ತು ಸುಲ್ತಾನ್​ ಅವರು .315 ಬೋರ್ ರೈಫಲ್​ನಿಂದ ಸಿಡಿದ ಗುಂಡುಗಳಿಗೆ ಬಲಿಯಾಗಿದ್ದಾರೆ.​
ವಿಕಾಸ್​ ದುಬೆಯ 60 ಮಂದಿ ಬಾಲಬಡುಕರು ಪೊಲೀಸರನ್ನು ಸುತ್ತುವರಿದ ರೀತಿ ಕೆಂಪು ಉಗ್ರರ ದಾಳಿಯ ಮಾದರಿಯನ್ನು ಹೋಲುತ್ತದೆ ಎಂದು ಪ್ರಕರಣದ ತನಿಖೆ ಮಾಡುತ್ತಿರುವವರು, ವಿಧಿವಿಜ್ಞಾನ ಪ್ರಯೋಗಾಲಯದವರು ಮತ್ತು ಎಸ್​ಟಿಎಫ್​ ತಂಡಗಳು ಹೇಳುತ್ತವೆ.
ವಿಕಾಸ್​ ದುಬೆ ಬಂಧನಕ್ಕೆ ಆತನ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸ್​ ತಂಡದ ಮೇಲೆ ಸ್ನೈಪರ್​ಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸ್ನೈಪರ್​ಗಳನ್ನು ತನ್ನ ಮನೆಯ ಮೇಲೆ ನೆಲೆಗೊಳಿಸಿ ಪೊಲೀಸ್​ ತಂಡದ ಮೇಲೆ ದಾಳಿ ಮಾಡುವ ತಂತ್ರಗಾರಿಕೆಯನ್ನು ದುಬೆ ಅನುಸರಿಸಿದ್ದಾನೆ. ಎತ್ತರದಿಂದ ಗುಂಡಿನ ದಾಳಿ ಮಾಡಿರುವ ಕಾರಣ ಪೊಲೀಸ್​ ಸಿಬ್ಬಂದಿಯ ತಲೆ ಮತ್ತು ಭುಜಗಳಲ್ಲಿ ಗುಂಡಿನ ಗಾಯಗಳು ಆಗಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಂ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ; 3 ಹಳ್ಳಿಗಳಿಗೆ ದಿಗ್ಬಂಧನ; ಸೂಪರ್​ ಸ್ಪ್ರೆಡರ್​ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 8 =
Remember me
