ನವದೆಹಲಿ:ಉತ್ತರಪ್ರದೇಶದಲ್ಲಿ ಎಂಟು ಮಂದಿ ಪೊಲೀಸರ ಹತ್ಯೆಗೆ ಕಾರಣವಾಗಿರುವ ಆರೋಪ ಹೊತ್ತ ಕುಖ್ಯಾತ ರೌಡಿ ವಿಕಾಸ್ ದುಬೆ ಪೊಲೀಸರು ಬರುವ ಮುನ್ನವೇ ತಂಗಿದ್ದ ಹೋಟೆಲ್‌ನಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.
ಈತ ಫರಿದಾಬಾದ್ ಹೋಟೆಲ್‌ ಒಂದರಲ್ಲಿ ತಂಗಿದ್ದ ಮಾಹಿತಿ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಹೋಟೆಲ್‌ ಮೇಲೆ ದಾಳಿ ಮಾಡಿದ್ದರು. ಆದರೆ ಪೊಲೀಸರು ಬರುವ ಸುಳಿವು ಮೊದಲೇ ತಿಳಿದಿತ್ತೋ ಎನ್ನುವಂತೆ ದುಬೆ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.
ಗುಪ್ತಚರ ವರದಿಗಳ ಪ್ರಕಾರ, ವಿಕಾಸ್ ನಕಲಿ ಗುರುತಿನ ಚೀಟಿ ನೀಡಿ ಜನನಿಬಿಡ ಪ್ರದೇಶದಲ್ಲಿ ಇರುವ ಚಿಕ್ಕ ಹೋಟೆಲ್‌ನಲ್ಲಿ ತಂಗಿದ್ದ. ಇಲ್ಲಿ ತಂಗಿದ್ದರೆ ತನ್ನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟ ಎಂಬುದನ್ನು ಆತ ಅರಿತಿದ್ದ, ಮಾತ್ರವಲ್ಲದೇ ಸಮಯ ಬಂದರೆ ಜನರ ನಡುವೆ ತಪ್ಪಿಸಿಕೊಳ್ಳುವುದೂ ಸುಲಭ ಎನ್ನುವ ಕಾರಣಕ್ಕೆ ಇಂಥದ್ದೊಂದು ಐಡಿಯಾ ಮಾಡಿದ್ದ.
ಇದನ್ನೂ ಓದಿ:ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎನ್​ಕೌಂಟರ್​ನಲ್ಲಿ ಫಿನಿಶ್​
ಆದರೆ ಆತ ಹೋಟೆಲ್‌ನಲ್ಲಿ ನೆಲೆಸಿರುವ ಸುಳಿವು ಸಿಗುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.ಹರಿಯಾಣ ಮತ್ತು ಉತ್ತರ ಪ್ರದೇಶದ ಜಂಟಿ ತಂಡಗಳು ದುಬೆ ಸಹಾಯಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂಲಕ ದುಬೆ ಕೂಡ ಅವರೊಂದಿಗೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಎಂಬುದು ಖಚಿತವಾಗಿದೆ.
ಅದೇ ಇನ್ನೊಂದೆಡೆ, ಸಿಸಿಟಿವಿಯ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸಿದಾಗ ಕಪ್ಪು ಶರ್ಟ್, ಜೀನ್ಸ್ ಮತ್ತು ಮುಖವಾಡ ಧರಿಸಿ ಹೋಟೆಲ್‌ನಲ್ಲಿ ನಿಂತಿರುವುದು ಕಂಡುಬಂದಿದೆ. ಹೋಟೆಲ್‌ ಹೊರಗಡೆ ಇರುವ ಸಿಸಿಟಿಯಲ್ಲಿ ಆತ ವಾಹನಕ್ಕಾಗಿ ಕಾಯುತ್ತಿರುವ ದೃಶ್ಯವೂ ಸೆರೆಯಾಗಿದೆ.
ಹೋಟೆಲ್ ಸಿಬ್ಬಂದಿಯ ಪ್ರಕಾರ, ವಿಕಾಸ್ ತನ್ನನ್ನು ಅಂಕುರ್ ಎಂದು ಗುರುತಿಸಿಕೊಂಡು ನಕಲಿ ಐಡಿ ಕೊಟ್ಟಿದ್ದಾನೆ.
“ನಮ್ಮ ಮಾಹಿತಿಯ ಪ್ರಕಾರ, ವಿಕಾಸ್ ದುಬೆ ದೆಹಲಿ ಮತ್ತು ಎನ್‌ಸಿಆರ್‌ಗಳಲ್ಲಿ (ರಾಷ್ಟ್ರೀಯ ರಾಜಧಾನಿ ಪ್ರದೇಶ) ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳು ಅವರು ರಸ್ತೆಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದಾಗಲೇ ಉತ್ತರ ಪ್ರದೇಶದ ಮೌದಾಹದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವಿಕಾಸ್ ದುಬೆಯ ಬಲಗೈ ಬಂಟ ಅಮರ್‌ ದುಬೆ ಹತನಾಗಿದ್ದ.(ಏಜೆನ್ಸೀಸ್‌)
ಸಿಎಎ, ಹಿಂದೂ ವಿರೋಧಿ ಗಲಭೆಗಳಿಗೆ ವಿದೇಶಗಳಿಂದ ಹಣದ ಹೊಳೆ- ಬಯಲಾಗಿದೆ ಭಯಾನಕ ಮಾಹಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
