ನವದೆಹಲಿ:ಚಂದ್ರಯಾನ-3 ಮಿಷನ್ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದೆ. ಚಂದ್ರನ ಅಂಗಳದಲ್ಲಿರುವ ವಿಕ್ರಮ್​ ಲ್ಯಾಂಡರ್​, ತನ್ನ ಲ್ಯಾಂಡಿಂಗ್​ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿದಿದೆ. ಚಂದ್ರನ ಮೇಲ್ಮೈಯಲ್ಲಿನಲ್ಲಿ ಕುಪ್ಪಳಿಸುವ ಅಥವಾ ಹಾರುವ ತನ್ನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ತನ್ನ ಮಿಷನ್ ಉದ್ದೇಶಗಳನ್ನೂ ಚಂದ್ರಯಾನ-3 ಮೀರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಸೂಚನೆ ಮೇರೆಗೆ ವಿಕ್ರಮ್​ ಲ್ಯಾಂಡರ್ ತನ್ನ ಇಂಜಿನ್‌ಗಳನ್ನು ಉರಿಸಿ, ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿತು ಮತ್ತು 30 ರಿಂದ 40 ಸೆಂ.ಮೀ ದೂರದಲ್ಲಿ ಮತ್ತೊಮ್ಮೆ ಸುರಕ್ಷಿತವಾಗಿ ಸಾಫ್ಟ್​ ಲ್ಯಾಂಡ್​ ಆಯಿತು ಎಂದು ಇಸ್ರೋ ಹೇಳಿದೆ. ಅಲ್ಲದೆ, ಎಕ್ಸ್​ (ಟ್ವಿಟರ್​)ನಲ್ಲಿ ವಿಡಿಯೋ ಸಹ ಹಂಚಿಕೊಂಡಿದೆ.
ಇದನ್ನೂ ಓದಿ:ಟಾಪ್​ಲೆಸ್​ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ವೈರಲ್​ ಆಯ್ತು ನಟಿ ನೀಲಿಮಾ ಕೊಟ್ಟ ಉತ್ತರ
Chandrayaan-3 Mission:🇮🇳Vikram soft-landed on 🌖, again!
Vikram Lander exceeded its mission objectives. It successfully underwent a hop experiment.
On command, it fired the engines, elevated itself by about 40 cm as expected and landed safely at a distance of 30 – 40 cm away.…pic.twitter.com/T63t3MVUvI
— ISRO (@isro)September 4, 2023

ಬಾಹ್ಯಾಕಾಶ ಯೋಜನೆಯಲ್ಲಿ ನಿಜಕ್ಕೂ ಇದೊಂದು ದೊಡ್ಡ ಮೈಲಿಗಲ್ಲು ಆಗಲಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಮಾನವರನ್ನು ಚಂದ್ರನ ಅಂಗಳಕ್ಕೆ ಇಳಿಸಿದಾಗ ಅವರನ್ನು ಮತ್ತೆ ವಾಪಸ್ಸು ಕರೆತರಲು ಈ ಮಹತ್ವದ ಸಾಧನೆಯು ಪ್ರಮುಖ ಉತ್ತೇಜನವಾಗಿದೆ. ಚಂದ್ರನ ಮೇಲೆ ಮತ್ತೆ ಹಾರುವ ಅಥವಾ ಜಿಗಿಯುವ ಪ್ರಯೋಗದ ಯಶಸ್ವಿಯು ವಿಕ್ರಮ್​ ಲ್ಯಾಂಡರ್‌, ಚಂದ್ರನ ಭೂಪ್ರದೇಶದಲ್ಲಿ ಚಲಿಸುವ ಮತ್ತು ನ್ಯಾವಿಗೇಟ್ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇದು ಭವಿಷ್ಯದ ಪರಿಶೋಧನಾ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಾಮರ್ಥ್ಯವಾಗಿದೆ.
ಪ್ರಸ್ತುತ ಚಂದ್ರಯಾನ 3 ಸಿಸ್ಟಮ್​ಗಳು ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತಿವೆ ಮತ್ತು ಸ್ಥಿರವಾಗಿವೆ. ನಿಯೋಜಿತ ರ್‍ಯಾಂಪ್, ChaSTE ಮತ್ತು ILSA ಗಳನ್ನು ಹಿಂದಕ್ಕೆ ಮಡಚಲಾಯಿತು ಮತ್ತು ಪ್ರಯೋಗದ ನಂತರ ಯಶಸ್ವಿಯಾಗಿ ಮರುನಿಯೋಜಿಸಲಾಯಿತು ಎಂದು ಇಸ್ರೋ ಎಕ್ಸ್​ನಲ್ಲಿ ತಿಳಿಸಿದೆ.
ಚಂದ್ರಯಾನ 3 ಮಿಷನ್​ ಅನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಆಗಸ್ಟ್​ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ ಲ್ಯಾಂಡರ್​ ಮತ್ತು ಪ್ರಗ್ಯಾನ್​ ರೋವರ್​ ಒಳಗೊಂಡಿದ್ದ ಲ್ಯಾಂಡರ್​ ಮಾಡ್ಯೂಲ್​ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಸಾಫ್ಟ್​ ಲ್ಯಾಂಡಿಂಗ್​ ಮಾಡಿತು. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದೆ.
ಇದನ್ನೂ ಓದಿ:ಕೇರಳದ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ! ಕೃಷ್ಣ ಜನ್ಮಾಷ್ಟಮಿಗೆ ಚಿನ್ನದ ವ್ಯಾಪಾರಿಯಿಂದ ಬರ್ತಡೇ ಗಿಫ್ಟ್
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನಲ್ಲಿಗೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ-3 ಗಳಿಸಿದೆ. ಚಂದ್ರನ 1 ದಿನ ಭೂಮಿಯ 14ಕ್ಕೆ ಸಮನಾಗಿದ್ದು, 14 ದಿನ ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್​ ರೋವರ್​ ಇದೀಗ ಸ್ತಬ್ಧವಾಗಿದೆ. ಸೆ. 22ಕ್ಕೆ ಮತ್ತೆ ಕಾರ್ಯಾಚರಣೆ ಆರಂಭಿಸಬಹುದು ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲೆ ಸಲ್ಫರ್​ ಸೇರಿದಂತೆ ಅನೇಕ ಅಂಶಗಳು ಇರುವುದನ್ನು ಪ್ರಗ್ಯಾನ್​ ರೋವರ್​ ಪತ್ತೆಹಚ್ಚಿದೆ.(ಏಜೆನ್ಸೀಸ್​)
ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್​ಡೌನ್​ ಧ್ವನಿ ನೀಡಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
