ಘಾಜಿಯಾಬಾದ್:ಪತ್ರಕರ್ತ ವಿಕ್ರಮ್ ಜೋಶಿ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ಗಾಜಿಯಾಬಾದ್ ಪೊಲೀಸರು ಬುಧವಾರ ತಿಳಿಸಿದ್ದಾರೆ.ಜೋಶಿ (35), ಜುಲೈ 20 ರ ರಾತ್ರಿ ವಿಜಯ್ ನಗರದ ಮಾತಾ ಕಾಲೋನಿಯಲ್ಲಿರುವ ತನ್ನ ಮನೆಯ ಬಳಿ ತನ್ನ ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಗೂಂಡಾಗಳು ತಲೆಗೆ ಗುಂಡು ಹಾರಿಸಿದ್ದರು.ಗಂಭೀರ ಗಾಯಗೊಂಡಿದ್ದ ಜೋಶಿ ಜುಲೈ 22 ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವಿಗೀಡಾಗಿದ್ದರು.
ಇದನ್ನೂ ಓದಿ:ಗುಂಡಿಗೆ ಪತ್ರಕರ್ತ ಬಲಿ: ಘಟನೆ ಬಳಿಕವಷ್ಟೇ ತಪ್ಪಿತಸ್ಥ ಪೊಲೀಸರ ಅಮಾನತು!
“ಘಟನೆಯ ನಂತರವಷ್ಟೇ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಓರ್ವ ಆರೋಪಿ ಆಕಾಶ್ ಬಿಹಾರಿ ಪರಾರಿಯಾಗಿದ್ದ ಮತ್ತು ಆತನಿಗೆ ಶೋಧ ಕಾರ್ಯ ನಡೆಸಲಾಗಿತ್ತು.ಆ ಕೊನೆಯ ಆರೋಪಿಯನ್ನು ಹುಡುಕಿಕೊಟ್ಟವರಿಗೆ 25 ಸಾವಿರ ರೂ.ಗಳ ಬಹುಮಾನವನ್ನೂ ಘೋಷಿಸಲಾಗಿತ್ತು. ಆಕಾಶ್‌ನನ್ನು ಬುಧವಾರ ಮುಂಜಾನೆ ಬಂಧಿಸಲಾಗಿದೆಗಾಜಿಯಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.ಈ ಹಿಂದೆ ದುಷ್ಕರ್ಮಿಗಳ ವಿರುದ್ಧ ನೀಡಿದ ದೂರುಗಳ ಬಗ್ಗೆ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೋಶಿಯ ಕುಟುಂಬ ಆರೋಪಿಸಿತ್ತು.
ಇದನ್ನೂ ಓದಿ:ಮಕ್ಕಳ ಎದುರೇ ಪತ್ರಕರ್ತನ ಮೇಲೆ ಗುಂಡಿನ ದಾಳಿ: ಸಿಸಿಟಿವಿಯಲ್ಲಿ ಸೆರೆ
ಈ ಪ್ರಕರಣದ ಎಲ್ಲ ಆರೋಪಿಗಳನ್ನು ಈಗ ಬಂಧಿಸಲಾಗಿದೆ ಎಂದು ಅವರು ಹೇಳಿದರು.ಜುಲೈ 16 ರಂದು ಆರೋಪಿಗಳು ಮತ್ತು ಜೋಶಿ ಮಧ್ಯೆ ಜಗಳವಾಗಿದ್ದು.ಆಗ ಆರೋಪಿಗಳಲ್ಲಿ ಒಬ್ಬ ಗಾಯಗೊಂಡಿದ್ದ..ಜೋಶಿಯನ್ನು ಗುಂಡಿಕ್ಕಿ ಕೊಂದಾಗ ಆ ಪ್ರದೇಶದ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಯನ್ನು ಗಾಜಿಯಾಬಾದ್ ಪೊಲೀಸರು ಅಮಾನತುಗೊಳಿಸಿದ್ದರು. ಪ್ರಕರಣದ ತನಿಖೆಯನ್ನು ಸ್ಥಳೀಯ ವಿಜಯ್ ನಗರ ಪೊಲೀಸ್ ಠಾಣೆಯಿಂದ ಕೊಟ್ವಾಲಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಮುಂದಿನ ಪೀಳಿಗೆಗೆ ಶ್ರೀರಾಮಮಂದಿರ ಸ್ಫೂರ್ತಿ: ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + three =
Remember me
