ಚೆನ್ನೈ:ಸಾಮಾಜಿಕ ಜಾಲತಾಣ ಹೆಚ್ಚೆಚ್ಚು ಜನಪ್ರಿಯತೆ ಗಳಿಸುತ್ತಾ ಹೋದಂತೆ ಅನೇಕರಿಗೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಂದು ಒಳ್ಳೆಯ ವೇದಿಕೆ ಸಿಕ್ಕಂತಾಯಿತು. ಸೃಜನಶೀಲ ವಿಷಯದೊಂದಿಗೆ ವಿಡಿಯೋಗಳನ್ನು ರಚಿಸುವುದು ಮತ್ತು ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವುದಷ್ಟೇ ಅಲ್ಲದೆ, ಉದ್ಯೋಗಗಳನ್ನು ಸಹ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜೀವನಕ್ಕೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾ ಮತ್ತು ಯೂಟ್ಯೂಬ್ ಬಳಕೆದಾರರು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿ ಜನಪ್ರಿಯ ವಿಲೇಜ್ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ತನ್ನ ವಿಭಿನ್ನ ರೀತಿಯ ಖಾದ್ಯಗಳ ಮೂಲಕವೇ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.
ಮೊದಲ ಡೈಮಂಡ್ ಕ್ರಿಯೇಟರ್ ಪ್ರಶಸ್ತಿಯನ್ನು ಪಡೆದ ಮೊದಲ ತಮಿಳು ಯೂಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆಯನ್ನು ವಿಲೇಜ್​ ಕುಕ್ಕಿಂಗ್​ ಚಾನೆಲ್​ ಹೊಂದಿದೆ. ಅವರ ಅಡುಗೆಯ ವಿಡಿಯೋಗಳು 100 ಮಿಲಿಯನ್ ವೀಕ್ಷಣೆಗಳ ಹೊಸ ದಾಖಲೆಯನ್ನು ಸಾಧಿಸಿದೆ.
ಅಂದಹಾಗೆ ಸಾಮಾನ್ಯವಾಗಿ ನಾವು ನಿರಂತರವಾಗಿ ಚಿತ್ರರಂಗದ ಸಿನಿಮಾ ಆದಾಯದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ಮಾಧ್ಯಮಗಳಲ್ಲೂ ಇದರ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತವೆ. ಹಣ ಗಳಿಕೆ ಆಧಾರದ ಮೇಲೆಯೇ ಇಂದು ಯಶಸ್ಸನ್ನು ಅಳೆಯಲಾಗುತ್ತದೆ. ಅಂದಹಾಗೆ ಸಿನಿಮಾ ತಾರೆಯರಂತೆಯೇ ಯೂಟ್ಯೂಬ್ ಮೂಲಕ ಫೇಮಸ್ ಆದವರು ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಯೂಟ್ಯೂಬ್​ ಮೂಲಕ ತಮ್ಮದೇಯಾದ ವಿಶೇಷ ಸ್ಥಾನವನ್ನು ಗಳಿಸಿದ ಜನರಲ್ಲಿ ದಿ ವಿಲೇಜ್​ ಕುಕ್ಕಿಂಗ್​ ಚಾನೆಲ್ ಕೂಡ ಒಂದು. ತಮ್ಮ ಅಡುಗೆ ಶೈಲಿಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಈ ಚಾನೆಲ್​ ಆಕರ್ಷಿಸಿದೆ. ಕಿಟ ಕರಿ ಬಿರಿಯಾನಿ, ಸೇಮಯ್ಯ ಕೊಕ್ಷಮಾನ್ ಬಂಗಾರಮ ರೌಶಂ, ಇನ್ನಿಕಿ ಒರುಪುಡಿ, ಎಲ್ಲರೂ ವಾಂಗ ಆಲ್​ವೇಸ್​ ವೆಲ್​ಕಮ್ಸ್​ ಯು ಎಂದು ಅಡುಗೆ ಮಾಡುವ ಮೊದಲು, ಇವರಾಡುವ ಮಾತುಗಳು ಹೆಚ್ಚು ಹೆಚ್ಚು ಆಕರ್ಷಿಸಲ್ಪಟ್ಟಿವೆ.
ವಿಲೇಜ್​ ಕುಕ್ಕಿಂಗ್​ ಯೂಟ್ಯೂಬ್‌ನಲ್ಲಿ 25.4 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇವರು ಪೋಸ್ಟ್ ಮಾಡುವ ಪ್ರತಿ ವಿಡಿಯೋಗೆ ಕನಿಷ್ಠ 15 ಮಿಲಿಯನ್ ವೀಕ್ಷಣೆಗಳನ್ನು ಪಡೆಯುತ್ತಾರೆ. ಇವರ ವಿಡಿಯೋ ಅಂದರೆ, ಎಲ್ಲರು ಕಾದು ಕುಳಿತುಕೊಳ್ಳುತ್ತಾರೆ. ಹೀಗಾಗಿಯೇ ಇಂದು ಅವರು ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಅವರ ಆದಾಯದ ಬಗ್ಗೆ ಹೇಳಿದರೆ ನಿಮ್ಮ ತಲೆ ತಿರುವುದಂತೂ ಗ್ಯಾರೆಂಟಿ. ವರ್ಷಕ್ಕೆ ಬರೋಬ್ಬರಿ 2.5 ಮಿಲಿಯನ್​ ಡಾಲರ್ (23,43,71,060 ರೂ.) ​ನಿಂದ ಹಿಡಿದು 5 ಮಿಲಿಯನ್​ ಡಾಲರ್​ವರೆಗೂ ಸಂಪಾದನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಆದರೆ, ಅಧಿಕೃತವಾಗಿ ಎಷ್ಟು ಗಳಿಸುತ್ತಾರೆ ಎಂಬುದನ್ನು ಚಾನೆಲ್​ನವರಿಗೆ ಮಾತ್ರ ತಿಳಿದಿದೆ. ಇದು ಚಾನೆಲ್​ ಆಪ್ತ ಮೂಲಗಳ ಮಾಹಿತಿಯಾಗಿದೆ.
ಈ ಹಿಂದೆ ತಮಿಳುನಾಡಿನಲ್ಲಿ ಪ್ರವಾಹ ಆದಾಗ ಈ ಚಾನೆಲ್​ನ ತಂಡ ಪರಿಹಾರವನ್ನೇ ನೀಡಿತ್ತು. ಅಲ್ಲದೆ, ರಾಹುಲ್​ ಗಾಂಧಿ ಅವರು ಕೂಡ ಹಿಂದೊಮ್ಮೆ ಈ ಚಾನೆಲ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮಶ್ರೂಮ್​ ಬಿರಿಯಾನಿ ಮಾಡಲಾಗಿತ್ತು. ರಾಹುಲ್​ ಗಾಂಧಿ ಅದನ್ನು ಸವಿದು ಶುಭ ಹಾರೈಸಿದ್ದರು.(ಏಜೆನ್ಸೀಸ್​)
ವಿಲೇಜ್​​ ಕುಕ್ಕಿಂಗ್ ಯೂಟ್ಯೂಬ್​​ ಚಾನೆಲ್​ ಬಳಸುವ ಕ್ಯಾಮೆರಾ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಖಚಿತ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 + 20 =
Remember me
