ಬಲ್ಲಿಯಾ:45 ವರ್ಷಗಳವರೆಗೆ ಮದುವೆಯಾಗದೇ ಬ್ರಹ್ಮಚಾರಿಯಾಗಿ ಉಳಿದಿದ್ದ ವ್ಯಕ್ತಿಯೊಬ್ಬ ಇದೀಗ ಗ್ರಾಮ ಪಂಚಾಯಿತಿ ಚುನಾವಣೆಯಿಂದಾಗಿ ತನ್ನ ಬ್ರಹ್ಮಚರ್ಯವನ್ನು ತೊರೆದಿದ್ದಾನೆ. ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲು ಅನಿವಾರ್ಯವಾಗಿ ಮದುವೆ ಆಗಿದ್ದಾನೆ.
ಹೌದು. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ದಶಕಗಳವರೆಗೆ ಸಾಮಾಜಿಕ ಸೇವೆ ಮಾಡಿದ್ದಾರೆ. ಇದೀಗ ರಾಜಕೀಯಕ್ಕೆ ಸೇರಿ ತನ್ನ ಸೇವೆಯನ್ನು ಇನ್ನುಷ್ಟು ಹೆಚ್ಚಿಗೆ ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗ್ರಾಮದ ಮುಖ್ಯಸ್ಥನಾಗುವ ಕನಸು ಕಂಡಿದ್ದ ವ್ಯಕ್ತಿಗೆ ಚುನಾವಣಾ ಆಯೋಗ ತಣ್ಣೀರೆರಚಿದೆ. ವ್ಯಕ್ತಿ ಸ್ಪರ್ಧಿಸಬೇಕಾದ ಕ್ಷೇತ್ರವನ್ನು ಆಯೋಗ ಮಹಿಳಾ ಮೀಸಲು ಕ್ಷೇತ್ರವನ್ನಾಗಿ ಘೋಷಿಸಿದೆ.
ವಿವರಣೆಗೆ ಬರುವುದಾದರೆ, ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕರನ್​ ಛಪ್ರಾ ಗ್ರಾಮದ ನಿವಾಸಿ ಹಥಿ ಸಿಂಗ್​, 2015ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಸೋಲನ್ನು ಅನುಭವಿಸಿದ್ದರು. ಆದರೆ, ಈ ಬಾರಿ ಮತ್ತೊಮ್ಮೆ ಸ್ಪರ್ಧಿಸಿ ಗೆಲುವಿನ ಕನಸು ಕಂಡಿದ್ದರು. ಆದರೆ, ಆಯೋಗ ಮಹಿಳಾ ಮೀಸಲು ಕ್ಷೇತ್ರವನ್ನಾಗಿ ಮಾಡಿದ್ದು, ಹಥಿ ಸಿಂಗ್​ ಚುನಾವಣೆಗೆ ಸ್ಪರ್ಧಿಸದಂತಾಗಿದೆ.
ಇದನ್ನೂ ಓದಿರಿ:ರಮೇಶ್​ ಜಾರಕಿಹೊಳಿ ಪರಿಚಯ ಹೇಗೆ? ನಂಬರ್​ ಎಕ್ಸ್​ಚೇಂಜ್​ ಆಗಿದ್ಹೇಗೆ? ಸಿಡಿ ಲೇಡಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!
ಇದರಿಂದ ಚಿಂತಾಕ್ರಾಂತನಾಗಿದ್ದ ಹಥಿ ಸಿಂಗ್​ಗೆ ಆತನ ಬೆಂಬಲಿಗರು ಮದುವೆ ಮಾಡಿಕೊಂಡು ಪತ್ನಿಯನ್ನು ಚುನಾವಣೆಗೆ ನಿಲ್ಲಿಸು ಎಂದು ಸಲಹೆ ನೀಡಿದ್ದು, ಕೊನೆಗೂ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ ಹಥಿ ಸಿಂಗ್​ ಇದೇ ಮಾರ್ಚ್​ 26ರಂದು ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಹಿಂದು ಸಂಪ್ರದಾಯಕ್ಕೆ ಒಳ್ಳೆಯದಲ್ಲದ ಸಮಯದಲ್ಲೇ ಹಥಿ ಸಿಂಗ್​ ಮದುವೆ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಥಿ ಸಿಂಗ್​, ಏಪ್ರಿಲ್​ 13ಕ್ಕೂ ಮುಂಚೆಯೇ ನಾಮಪತ್ರ ಸಲ್ಲಿಸಬೇಕು. ಹೀಗಾಗಿ ನಾನು ಮದುವೆ ಆಗಿದ್ದೇನೆಂದು ತಿಳಿಸಿದ್ದಾರೆ.
ಹಥಿ ಸಿಂಗ್​ ಪತ್ನಿ ಪದವಿ ಮುಗಿಸಿದ್ದು, ಇದೀಗ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ದೀದಿ ನಾಡಲ್ಲಿ ಮತ್ತೆ ರೌಡಿಸಂ: ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ ನಡೆಸಿ ತೀವ್ರ ಹಲ್ಲೆ

ಪೊಲೀಸ್​ ಠಾಣೆಯಲ್ಲಿದ್ದ ಸಾವಿರಾರು ಬಾಕ್ಸ್​ ಮದ್ಯದ ಬಾಟಲ್​ ನಾಪತ್ತೆ… ಇಲಿಯ ಕೆಲಸ ಎಂದ್ರು ಅಧಿಕಾರಿಗಳು!

ಇನ್​ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ ಮದ್ವೆ ಬಳಿಕ ಆತ್ಮಹತ್ಯೆಯಲ್ಲಿ ಅಂತ್ಯ! ಇದು ಯುವತಿಯ ಕಣ್ಣೀರ ಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 5 =
Remember me
