ಗೋದಾವರಿ:ಸಿಗರೇಟ್ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಬಾಲಕನನ್ನು ಟೆರೇಸ್​ನಿಂದ ತಳ್ಳಿರುವ ದಾರುಣ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಚಂದ್ರನಲ್ಲಿ ವಿಕ್ರಮ್​ ಲ್ಯಾಂಡರ್​ ಇಳಿದ ಜಾಗಕ್ಕೆ ‘ಶಿವಶಕ್ತಿ’ ಎಂದು ನಾಮಕರಣ: ಪ್ರಧಾನಿ ಮೋದಿ ಘೋಷಣೆಕೋರುಕೊಂಡ ಮಂಡಲದ ಕಲ್ಯಾಣಂ ಸತೀಶ್ ಗ್ರಾಮ ಪಂಚಾಯತಿಯ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದು, ಇದೇ ಗ್ರಾಮದ ಏಳನೇ ತರಗತಿ ವಿದ್ಯಾರ್ಥಿ ಶಶಿಧರ್ ಇದೇ 11ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಈ ವೇಳೆ ಸತೀಶ್ ಬಾಲಕನನ್ನು ಕರೆದು ಆತನಿಗೆ ಸಿಗರೇಟ್​ ತಂದು ಕೊಡುವಂತೆ ಹೇಳಿದ್ದಾನೆ. ಈ ವೇಳೆ ಬಾಲಕ ಆತನ ಮಾತನ ಧಿಕ್ಕರಿಸಿ ಸುಮ್ಮನೇ ಹೋಗಿದ್ದಾನೆ. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಸತೀಶ್​ ಅಂದು ಸಂಜೆ ಶಶಿಧರ್ ಮತ್ತು ಅಲ್ಲೇ ಇದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಮೋಜು ಮಾಡಲು ತನ್ನ ಜತೆಗೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲದೇ, ತಾನು ಹೇಳಿದಾಗ ಸಿಗರೇಟ್ ಏಕೆ ತಂದು ಕೊಡಲಿಲ್ಲ ಎಂದು ಕೇಳಿ ಹೊಡೆಯಲು ಶುರು ಮಾಡಿದ್ದಾನೆ. ಈ ವೇಳೆ ಹುಡುಗ ಹೊಡೆಯಬೇಡ ಎಂದು ಬೇಡಿಕೊಂಡರೂ ಕೇಳಲಿಲ್ಲ. ಕೊನೆಗೆ ಆತ ತಪ್ಪಿಸಿಕೊಳ್ಳಲು ಕೆಳಗಿಳಿಯಲು ಮುಂದಾದಾಗ ಯುವಕ ವಿದ್ಯಾರ್ಥಿಯನ್ನು ಹಿಂದಿನಿಂದ ಒದ್ದಿದ್ದಾನೆ. ಈ ವೇಳೆ ವಿದ್ಯಾರ್ಥಿ ತಾರಸಿಯಿಂದ ರಸ್ತೆಯಲ್ಲಿ ಬಿದ್ದಿದ್ದು, ಬಾಲಕನ ಕಾಲು, ಕೈ ಮುರಿದಿದ್ದು, ಗಂಭೀರ ಗಾಯಗೊಂಡಿದ್ದಾನೆ. ಯುವಕನು ಮತ್ತೇ ಸ್ಥಳದಲ್ಲಿ ನಡೆದ ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ.ಇದನ್ನೂ ಓದಿ:ಗೃಹಲಕ್ಷ್ಮಿ ನೇರಪ್ರಸಾರ: ಅನುದಾನ ಪೀಕಲಾಟ; ಸರ್ಕಾರವೇ ವೆಚ್ಚ ಭರಿಸಲು ಆಗ್ರಹ, ಪಿಡಿಒಗಳಿಗೆ ಧರ್ಮಸಂಕಟ
ಅಲ್ಲದೇ, ವಿದ್ಯಾರ್ಥಿಯನ್ನು ತನ್ನ ಬೈಕ್​ನಲ್ಲಿಯೇ ಕರೆದುಕೊಂಡು ಹೋಗಿ ಮನೆಗೆ ಡ್ರಾಪ್ ಮಾಡಿದ ಯವಕ, ದೇವಸ್ಥಾನದ ಮೆಟ್ಟಿಲು ಹತ್ತುವಾಗ ಬಿದ್ದಿದ್ದ ಅದನ್ನು ನೋಡಿ ತಾನು ಕರೆತಂದಿದ್ದೇನೆ ಎಂದು ಆತನ ತಾಯಿಗೆ ತಿಳಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನ ಪೋಷಕರು ಮರುದಿನ ಚಿಕಿತ್ಸೆಗಾಗಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.
ಕೊನೆಗೆ ಆತ ಚೇತರಿಸಿಕೊಂಡ ಬಳಿಕ ತನ್ನ ತಾಯಿ ಲಕ್ಷ್ಮಿಗೆ ನಡೆದ ಘಟನೆ ಹೇಳಿದ್ದು, ಕೂಡಲೇ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸುರ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಯುವಕನು ಈ ಹಿಂದೆಯೂ ಹಲವು ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
