ಬಲ್ಲಿಯಾ: ಇಲ್ಲಿ ಪೊಲೀಸರು ಮತ್ತು ಸ್ಥಳೀಯರ ನಡುವೆ ನಡೆದ ಘರ್ಷಣೆಯಲ್ಲಿ ಆರು ಪೊಲೀಸ್​ ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳೀಯನೋರ್ವನಿಗೆ ಹೊಡೆದಿದ್ದಾರೆ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡಿದ್ದರು. ಬಲ್ಲಿಯಾ-ಲಖನೌ ಹೆದ್ದಾರಿಯನ್ನು ಬಂದ್​ ಮಾಡಿ, ಘೋಷಣೆ ಕೂಗುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಪ್ರಾರಂಭಿಸಿದಾಗ ಸಿಟ್ಟಿಗೆದ್ದು, ಕಲ್ಲು ಎಸೆದಿದ್ದಾರೆ. ತಾತ್ಕಾಲಿಕ ಪೊಲೀಸ್​ ಪೋಸ್ಟ್​​ಗಳನ್ನು, 6 ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.ಈ ಗಲಾಟೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಅದರಲ್ಲಿ ಓರ್ವ ಹಿರಿಯ ಪೊಲೀಸ್​ ಅಧಿಕಾರಿಯೂ ಇದ್ದಾರೆ. ಇಬ್ಬರು ಪತ್ರಕರ್ತರೂ ಕೂಡ ಗಾಯಗೊಂಡಿದ್ದಾರೆ ಎಂದು ಎಸ್​ಪಿ ಸಂಜಯ್​ ಯಾದವ್​ ತಿಳಿಸಿದ್ದಾರೆ.ಇದನ್ನೂ ಓದಿ:ನಂ. 1 ಪಟ್ಟಕ್ಕೆ ಇಂಗ್ಲೆಂಡ್-ಆಸೀಸ್ ಫೈಟ್, ಟಿ20 ಸರಣಿಯ ಫಲಿತಾಂಶ ಭಾರತಕ್ಕೂ ಲಾಭ ತರಬಹುದು!
ಪುನ್ನಾಲಾಲ್​ (35) ಎಂಬಾತನಿಗೆ ಪೊಲೀಸರು ಹೊಡೆದಿದ್ದಾರೆ ಎಂದು ಆರೋಪಿಸಿ ಬೆಳಗ್ಗೆ 9.30ರಿಂದಲೇ ಪ್ರತಿಭಟನೆ ಶುರು ಮಾಡಿದ್ದರು. ಸ್ಥಳಕ್ಕೆ ಹೋಗಿ ಮಾತುಕತೆ ನಡೆಸಿದಾಗ ಕೆಲವರು ಒಪ್ಪಿಕೊಂಡು ಅಲ್ಲಿಂದ ತೆರಳಿದರು. ಆದರೆ ಮತ್ತೂ ಹಲವರು ಕಲ್ಲು ಎಸೆಯಲು ಶುರು ಮಾಡಿ, ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದರು ಎಂದು ಹೇಳಿದ್ದಾರೆ. ಸದ್ಯ ಆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ. (ಏಜೆನ್ಸೀಸ್)
VIDEO: ಹಾಡುತ್ತಿದ್ದ ಮಗಳಿಗೆ ಶಾಕ್​ ಕೊಟ್ಟ ಅಮ್ಮ; ಸೀಲಿಂಗ್​ ಸೀಳಿ ಜೋತಾಡಿದರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
