ನವದೆಹಲಿ:ಗ್ರಾಮಸ್ಥರ ಪ್ರತಿಭಟನೆಗೆ ಹೆದರಿದ ಮಹಾರಾಷ್ಟ್ರ ಸರ್ಕಾರ ಸಾಂಗ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದ ರಾಜ್ಯ ಹೆದ್ದಾರಿ ಯೋಜನೆಯನ್ನೇ ಬದಲಿಸಿದೆ! ಅದು ಕೇವಲ ಒಂದು ಮರಕ್ಕಾಗಿ ನಡೆದ ಪ್ರತಿಭಟನೆ. ಈ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಚಾರ ಪಡೆದಿದ್ದರಿಂದ, ಕೊನೆಗೂ ಮಣಿದ ಅಧಿಕಾರಿಗಳು ಆ ಮರವನ್ನು ಉಳಿಸಲು ಯೋಜನೆಯನ್ನೇ ಬದಲಿಸಿದ್ದಾರೆ.
ಸಾಂಗ್ಲಿ ಜಿಲ್ಲೆಯ ಭೋಸೆ ಗ್ರಾಮದಲ್ಲಿ ಎಲ್ಲಮ್ಮ ದೇಗುಲ ಇದೆ. ಈ ದೇವಸ್ಥಾನದ ಪ್ರಾಂಗಣದಲ್ಲಿ 400 ವರ್ಷಗಳಷ್ಟು ಹಳೆಯದಾದ ಬೃಹತ್​ ಆಲದ ಮರ ಇದೆ. ಇದು 400 ಚದರ ಮೀಟರ್​ನಷ್ಟು ಹಬ್ಬಿದ್ದು, ನಯಮನೋಹರವಾದ ನೋಟವನ್ನು ಒದಗಿಸುವ ಜತೆಗೆ ಪ್ರದೇಶದಲ್ಲಿ ತಂಪಾದ ನೆರಳನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಪಂಢರಾಪುರಕ್ಕೆ ತೆರಳುವ ವಾರ್ಕರಿಗಳಿಗೆ (ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಹೋಗುವವರು) ವಿರಮಿಸಲು ಸಹಕಾರಿಯಾಗಿದೆ. ಮಹಾರಾಷ್ಟ್ರ ರಾಜ್ಯ ಹೆದ್ದಾರಿ 166ರಲ್ಲಿ ಬರುವ ರತ್ನಗಿರಿ-ಸೊಲ್ಲಾಪುರ-ನಾಗ್ಪುರ ಹೆದ್ದಾರಿ ನಿರ್ಮಾಣಕ್ಕಾಗಿ ಈ ಮರವನ್ನು ಕಡಿಯಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ಆದರೆ, ಪುರಾತನವಾದ ಈ ಮರವನ್ನು ಉಳಿಸಿಕೊಳ್ಳಬೇಕು ಎಂದು ಪಣತೊಟ್ಟ ಭೋಸೆ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು. ಈ ವಿಷಯ ಮಾಧ್ಯಮಗಳನ್ನೂ ತಲುಪಿತು. ಪ್ರತಿದಿನವೂ ಚಿಪ್​ಕೋ ಚಳವಳಿಯ ರೀತಿಯಲ್ಲಿ ಮರದ ಬಳಿ ಬಂದು ಅದರ ಚಿತ್ರಗಳನ್ನು ಫೇಸ್​ಬುಕ್​ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಮರವನ್ನು ಅಪ್ಪಿಕೊಂಡು ಅವುಗಳ ಚಿತ್ರಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಇದರಿಂದಾಗಿ ಈ ಪ್ರತಿಭಟನೆ ಅಭಿಯಾನದ ರೂಪ ಪಡೆದುಕೊಂಡಿತು. ಇದು ಮಹಾರಾಷ್ಟ್ರ ಸರ್ಕಾರದ ಗಮನಕ್ಕೂ ಬಂದಿತು.
ಇದನ್ನೂ ಓದಿ:ರಷ್ಯಾ ಉಪಗ್ರಹನಿರೋಧಕ ಶಸ್ತ್ರ ಪ್ರದರ್ಶಿಸಿತೇ? ಹಾಗೆಂದು ಅಮೆರಿಕ ಆರೋಪಿಸುತ್ತಿದೆ…
ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆಧಿತ್ಯ ಠಾಕ್ರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತನ್​ ಗಡ್ಕರಿ ಅವರಿಗೆ ಜು.16ರಂದು ಪತ್ರಬರೆದು, ರಸ್ತೆ ನಿರ್ಮಾಣಕ್ಕಾಗಿ ಪುರಾತನ ಮರವನ್ನು ಬಲಿಗೊಡುವುದು ಬೇಡ. ಅದನ್ನು ರಕ್ಷಿಸುವ ಸಲುವಾಗಿ ಹೆದ್ದಾರಿ ಯೋಜನೆಯಲ್ಲಿ ಸೂಕ್ತ ಮಾರ್ಪಾಟುಗಳನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ವಿಶಾಲವಾಗಿ ಹಬ್ಬಿರುವ ಈ ಮರವು ಈ ಪ್ರದೇಶದ ಐತಿಹಾಸಿಕ ಮಹತ್ವಕ್ಕೆ ಪೂರಕವಾಗಿದೆ. ಅಲ್ಲದೆ, ನೂರಾರು ಪಕ್ಷಿಗಳು ಮತ್ತು ಸಣ್ಣಪುಟ್ಟ ಪ್ರಾಣಿಗಳಿಗೆ ಆಶ್ರಯತಾಣವೂ ಆಗಿದೆ ಎಂದು ಆದಿತ್ಯ ಠಾಕ್ರೆ ಅವರ ಮಾತನ್ನು ಮನ್ನಿಸಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಮರವನ್ನು ಉಳಿಸುವ ನಿಟ್ಟಿನಲ್ಲಿ ರತ್ನಗಿರಿ-ನಾಗ್ಪುರ ಹೆದ್ದಾರಿ ಯೋಜನೆಯಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಕೇಂದ್ರ ಸಚಿವರ ಸೂಚನೆ ಮೇರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್​ಎಚ್​ಎಐ) ಅಧಿಕಾರಿಗಳು ಯೋಜನೆಯಲ್ಲಿ ಮಾರ್ಪಾಡು ಮಾಡಲು ಮುಂದಾಗಿದ್ದಾರೆ. ಯೋಜನೆಯನ್ನು ಮರುಪರಿಶೀಲಿಸಲಾಯಿತು. ಮುಖ್ಯರಸ್ತೆಗಾಗಿ ಈ ಮರದ ಕೆಲವೊಂದು ಕೊಂಬೆಗಳನ್ನು ಕತ್ತರಿಸಬೇಕಾಗುತ್ತದೆ. ಆದರೆ, ಸರ್ವಿಸ್​ ರಸ್ತೆಗೆ ಅಡ್ಡಲಾಗಿ ಬರುತ್ತಿದ್ದ ಮರದ ಮುಖ್ಯಕಾಂಡವನ್ನು ಉಳಿಸಲು ಆ ಮಾರ್ಗದ ವಿನ್ಯಾಸವನ್ನು ಬದಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Dil Bechara Review: ಭಾವನೆಗಳ ಬುನಾದಿ ಮೇಲೆ ಜೀವನಸ್ಫೂರ್ತಿಯ ಮಹಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − twelve =
Remember me
