ಮೇದಕ್ (ತೆಲಂಗಾಣ):ಕರೊನಾ ವೈರಸ್ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ವಿದ್ಯುತ್‌ ಬಿಲ್‌ ಕೂಡಲೇ ಕಟ್ಟುವುದಕ್ಕೆ ಸರ್ಕಾರ ಈ ಹಿಂದೆ ಕೆಲವೊಂದು ವಿನಾಯಿತಿ ನೀಡಿತ್ತು. ನಿಗದಿತ ಅವಧಿಯಲ್ಲಿ ಕಟ್ಟದಿದ್ದರೆ ದಂಡ ವಸೂಲಿ ಮಾಡುವುದು ಬೇಡ ಎಂದು ಇಲಾಖೆಗೆ ನಿರ್ದೇಶಿಸಿತ್ತು.ಹಾಗೆಂದು ಬಿಲ್ಲನ್ನು ಕಟ್ಟುವುದೇ ಬೇಡ ಎಂದೇನೂ ಹೇಳಿರಲಿಲ್ಲ. ಆದರೆ ಕೆಲವರು ಮಾತ್ರ ಕರೆಂಟ್‌ ಬಿಲ್‌ ಕಟ್ಟಲಾಗದೇ ಪರದಾಡುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವನ್ನು ಕಳೆದುಕೊಂಡಿರುವ ಅಥವಾ ತಾತ್ಕಾಲಿಕವಾಗಿ ಕೆಲಸ ಇಲ್ಲದೇ ಪರದಾಡುತ್ತಿರುವವರೇ ಹೆಚ್ಚು.ಇದೀಗ ಲಾಕ್‌ಡೌನ್‌ ಮುಗಿದು ಜನರು ಪುನಃ ಕೆಲಸಕ್ಕೆ ಹೋಗಲು ಶುರು ಮಾಡಿದ್ದರಿಂದ (ಕೆಲವು ಕಡೆಗಳಲ್ಲಿ ಪುನಃ ಲಾಕ್‌ಡೌನ್‌ ಆಗಿದೆ) ಕರೆಂಟ್‌ ಬಿಲ್‌ ಕಟ್ಟುವಂತೆ ಕೆಲವು ರಾಜ್ಯ ಸರ್ಕಾರಗಳು ತಾಕೀತು ಮಾಡಿದ್ದವು. ಆದರೆ ಹಲವರು ನಾಲ್ಕೈದು ತಿಂಗಳುಗಳ ಬಿಲ್‌ ಕಟ್ಟದೇ ಸುಮ್ಮನಾಗಿದ್ದಾರೆ.ಇದನ್ನೂ ಓದಿ:ಕಳುವು ಮಾಡಿದನೆಂದು ಸಂಶಯಿಸಿ ಸಾಯುವಂತೆ ಥಳಿಸಿದಆದ್ದರಿಂದ ತೆಲಂಗಾಣದ ಮೇದಕ್ ಗ್ರಾಮದಲ್ಲಿ ವಿದ್ಯುತ್‌ ಬಿಲ್‌ ವಸೂಲಿಗೆಂದು ವಿದ್ಯುತ್‌ ನಿಗಮದ ಸಿಬ್ಬಂದಿಯು ಮನೆಮನೆಗೆ ಹೋಗಿದ್ದಾರೆ. ಆದರೆ ಇದರಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.ಇಲ್ಲಿನ ಅಲ್ಲಾದುರ್ಗಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಪ್ಪ ಹಗ್ಗದಿಂದ ಇಬ್ಬರು ಸಿಬ್ಬಂದಿಯನ್ನು ಕಟ್ಟಿಹಾಕಲಾಗಿದ್ದು, ಇದರ ಫೋಟೋ ಇದೀಗ ವೈರಲ್‌ ಆಗುತ್ತಿದೆ.
Telangana: Residents of a village under Alladurgam Police Station limits in Medak tied Electricity Department officials to a pole when they were visiting the area to collect payments of electricity bills. Police say, "We immediately reached the spot & released the officials."pic.twitter.com/IHcDyCXRbB— ANI (@ANI)July 18, 2020
Telangana: Residents of a village under Alladurgam Police Station limits in Medak tied Electricity Department officials to a pole when they were visiting the area to collect payments of electricity bills. Police say, "We immediately reached the spot & released the officials."pic.twitter.com/IHcDyCXRbB
ಹೋಟೆಲ್‌ ಓಪನ್‌ ಮಾಡಿದ ಸೋಂಕಿತನ ಅಪ್ಪ: ಗ್ರಾಹಕರ ಸ್ಥಿತಿ ಹರೋಹರ!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 4 =
Remember me
