ನವದೆಹಲಿ:ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ವಿನಯ್ ಮೋಹನ್ ಕ್ವಾತ್ರಾ ಅವರನ್ನು ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿಯಾಗಿ ನೇಮಿಸಲಾಗಿದೆ. ಶೀಘ್ರದಲ್ಲೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ವೊಂಬತ್ತು ವರ್ಷದಿಂದ ಡೇಟಿಂಗ್..ಕಡೆಗೂ ತನ್ನ ದೀರ್ಘಕಾಲದ ಗೆಳತಿಗೆ ಈ ಕ್ರಿಕೆಟಿಗ ಮೂರು ಗಂಟು ಹಾಕಿದ!
ಕ್ವಾತ್ರಾ ಅವರು ಜನವರಿಯಲ್ಲಿ ನಿವೃತ್ತರಾದ ತರಂಜಿತ್ ಸಿಂಗ್ ಸಂಧು ಅವರ ಸ್ಥಾನಕ್ಕೆ ಬರಲಿದ್ದಾರೆ. ಸಂಧು 2020 ರಿಂದ ಜನವರಿ 2024 ರವರೆಗೆ ಯುಎಸ್ ರಾಯಭಾರಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಾಗೂ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಕ್ವಾಟ್ರಾ ಅವರನ್ನು ದೇಶದ ಭಾರತೀಯ ರಾಯಭಾರಿಯಾಗಿ ನೇಮಕ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ವಿನಯ್ ಮೋಹನ್ ಕ್ವಾತ್ರಾ, 1988 ರ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆ (ಐಎಫ್​ಎಸ್​) ಅಧಿಕಾರಿಯಾಗಿದ್ದಾರೆ. ಅವರು 2022 ಮೇ 1ರಿಂದ 20246 ಜುಲೈ 14 ರವರೆಗೆ ಭಾರತದ 34 ನೇ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ನೇಪಾಳದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
ರಾಜತಾಂತ್ರಿಕರಾಗಿ 34 ವರ್ಷಗಳ ಅನುಭವ ಹೊಂದಿರುವ ಕ್ವಾತ್ರಾ ಆಗಸ್ಟ್ 2017 ರಿಂದ ಫೆಬ್ರವರಿ 2020 ರವರೆಗೆ ಫ್ರಾನ್ಸ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೀತಿ ಯೋಜನೆ-ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದರು. ಜುಲೈ 2013 ಮತ್ತು ಅಕ್ಟೋಬರ್ 2015 ರ ನಡುವೆ ಅವರು ವಿದೇಶದಲ್ಲಿ ಯುಎಸ್​ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರು ಮೇ 2010 ರಿಂದ ಜುಲೈ 2013 ರವರೆಗೆ ವಾಷಿಂಗ್ಟನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಸಚಿವರಾಗಿ (ವಾಣಿಜ್ಯ) ಸೇವೆ ಸಲ್ಲಿಸಿದ್ದರು. 2015-2017ರ ನಡುವೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅದರ ನಂತರ ಅವರು ಫೆಬ್ರವರಿ 2020 ರವರೆಗೆ ಫ್ರಾನ್ಸ್‌ಗೆ ರಾಯಭಾರಿಯಾಗಿದ್ದರು.
ತಮನ್ನಾ ಇದ್ರೆ ಸಾಕು..ಎಂದ ಹಿರಿಯ ನಟ ಕೊನೆಗೆ ಕ್ಷಮೆ ಕೇಳಿದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − 10 =
Remember me
