ನವದೆಹಲಿ:ನಮಾಜ್​ ಅಥವಾ ಧಾರ್ಮಿಕ ಹೆಸರಿನಲ್ಲಿ ಸಾಮಾಜಿಕ ಅಂತರ ಅಥವಾ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸುವುದು ಮತ್ತು ಉತ್ತೇಜಿಸುವುದನ್ನು ಜಮಿಯತ್​ ಉಲೆಮಾ-ಇ-ಹಿಂದ್​ ಮಹಾ ಕಾರ್ಯದರ್ಶಿ ಮೌಲಾನಾ ಮಹಮೂದ್ ಅವರು ಖಂಡಿಸಿದ್ದಾರೆ.​
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ಕರೊನಾ ವೈರಸ್​ ಹರಡುವುದನ್ನು ತಡೆಗಟ್ಟಲು ಭಾರತೀಯ ಮುಸ್ಲಿಮರೆಲ್ಲರೂ ಒಗ್ಗೂಡಿದ್ದಾರೆ. ಇದೀಗ ತಬ್ಲಿಘಿ ಜಮಾತ್​ನಿಂದ ಅಂಟಿಕೊಂಡಿರುವ ಕಳಂಕವನ್ನು ತೊಲಗಿಸಬೇಕಾಗಿದೆ ಎಂದು ಕರೆ ನೀಡಿದರು.
ಭಾರತದಲ್ಲಿ ಲಕ್ಷಾಂತರ ಮಸೀದಿಗಳಿವೆ. ಕರೊನಾ ಮಣಿಸಲು ಸರ್ಕಾರ ನೀಡಿರುವ ಆದೇಶವನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ಭಾರತೀಯ ಮುಸ್ಲಿಮರು ನೂರಕ್ಕೆ ನೂರರಷ್ಟು ದೇಶದ ಜತೆಗಿರುತ್ತಾರೆ ಎಂದು ಮೌಲಾನ ಮದನಿ ಸ್ಪಷ್ಟನೆ ನೀಡಿದರು. ಅಲ್ಲದೆ, ನಮಾಜ್​ ಹೆಸರಿನಲ್ಲಿ ಯಾರು ನಿಯಮವನ್ನು ಉಲ್ಲಂಘಿಸುತ್ತಾರೋ ಅವರು ಹರಾಮ್​ಗಳು ಎಂದು ಕಿಡಿಕಾರಿದರು.
ಕರೊನಾ ಮಣಿಸಲು ಲಾಕ್​ಡೌನ್​ ಅನುಸರಿಸಬೇಕಾಗಿಲ್ಲ. ಮುಸ್ಲಿಂರನ್ನು ಧಾರ್ಮಿಕ ಚಟುವಟಿಕೆಯಿಂದ ದೂರವಿಡಲು ಮಾಡಿರುವ ಕುತಂತ್ರವಿದು ಎಂಬ ತಬ್ಲಿಘಿ ಜಮಾತ್​ ಮರ್ಕಜ್​ ಮುಖ್ಯಸ್ಥ ಮೌಲಾನಾ ಸಾದ್​ ಆಡಿಯೋ ವಿಚಾರವಾಗಿ ಮಾತನಾಡಿ, ಇಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಆಡಿಯೋ ಸರಿ ಇದೆಯೋ? ಇಲ್ಲವೋ? ಎಂಬುದನ್ನು ಪರೀಕ್ಷಿಸಬೇಕು. ಒಂದು ವೇಳೆ ಆಡಿಯೋ ಅಧಿಕೃತ ಎಂದಾದರೆ ಅದರಲ್ಲಿರುವ ಸಂದೇಶ ಖಂಡಿತವಾಗಿಯು ತಪ್ಪು ಮತ್ತು ಅಪರಾಧ ಎಂದು ಟೀಕಿಸಿದರು.(ಏಜೆನ್ಸೀಸ್​)
100 ಕೋಟಿ ಡಾಲರ್ ನಿಧಿ ಭಾರತಕ್ಕೆ ನೀಡಲು ಒಪ್ಪಿತು ವಿಶ್ವ ಬ್ಯಾಂಕ್

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರೋ ಸಾರಿಗೆ ಚಾಲಕರಿಗೆ ಸಿಎಂ ಕೇಜ್ರಿವಾಲ್​ರಿಂದ 5 ಸಾವಿರ ರೂ. ಆರ್ಥಿಕ ನೆರವು ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
