ಪುಣೆ :ಭಾರತದಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸೌಲಭ್ಯಗಳಿಲ್ಲದಿದ್ದರೂ ಸಾಧನೆಯ ಪಥ ಹಿಡಿದು ಶ್ರಮಿಸುತ್ತಿದ್ದಾರೆ. ಅಂತಹುದರಲ್ಲಿ ಇರುವ ಮೂಲಸೌಕರ್ಯಗಳ ಬಗ್ಗೆಯೂ ಉಡಾಫೆ ಮನೋಭಾವ ತೋರುವುದು ಎಷ್ಟು ಸಮಂಜಸ? ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರು ಈ ರೀತಿಯ ದುರ್ವರ್ತನೆ ತೋರಿ ಸುದ್ದಿ ಮಾಡಿದ್ದಾರೆ.
ಜೂನ್ 26 ರಂದು ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಹೋದ ಗಣ್ಯರು, ಕ್ರೀಡಾಂಗಣದ ಒಳಗಡೆ ಅಥ್ಲೀಟ್​ಗಳು ಓಟದ ಅಭ್ಯಾಸ ಮಾಡಲು ಬಳಸುವ ವಿಶೇಷ ಟ್ರ್ಯಾಕ್​ನ ಮೇಲೆ ತಮ್ಮ ಕಾರುಗಳನ್ನು ಪಾರ್ಕ್​ ಮಾಡಿಸಿದ್ದಾರೆ! ಎನ್​ಸಿಪಿ ಮುಖ್ಯಸ್ಥ ಹಾಗೂ ಇಂಡಿಯನ್ ಒಲಂಪಿಕ್​ ಅಸೋಸಿಯೇಷನ್ನಿನ ಅಧ್ಯಕ್ಷರಾಗಿರುವ ಶರದ್​ ಪವಾರ್​, ಮಹಾರಾಷ್ಟ್ರ ಕ್ರೀಡಾ ಸಚಿವ ಸುನಿಲ್​ ಕೇದಾರ್ ಮತ್ತು ಮತ್ತೊಬ್ಬ ಸಚಿವೆ ಅದಿತಿ ತತ್ಕರೆ ಮುಂತಾದವರ ವಾಹನಗಳು ಟ್ರ್ಯಾಕ್​ನ ಮೇಲೆ ಕಂಡುಬಂದವು ಎನ್ನಲಾಗಿದೆ.
ಇದನ್ನೂ ಓದಿ:ಪುಲ್ವಾಮಾದಲ್ಲಿ ಪೊಲೀಸ್​ ವಿಶೇಷ ಅಧಿಕಾರಿ ಮತ್ತು ಪತ್ನಿಯನ್ನ ಗುಂಡಿಕ್ಕಿ ಕೊಂದ ಉಗ್ರರು
ಪುಣೆಯ ಶಿವಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಲೆ ಈ ಬಗ್ಗೆ ತಿಳಿಸುತ್ತಾ, ಅಥ್ಲೆಟಿಕ್​ ಸಮುದಾಯಕ್ಕೆ ಅಗೌರವ ತೋರಿಸುವ ವಿಐಪಿ ಸಂಸ್ಕೃತಿ ಮತ್ತು ಉದ್ಧಟತನ ಇದು ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರೆನ್​ ರಿಜಿಜು ಅವರು ಕ್ರೀಡೆಗಳ ಬಗ್ಗೆ ಈ ರೀತಿಯ ಅಗೌರವ ನೋಡಲು ವಿಷಾದವೆನಿಸುತ್ತದೆ. ನಮ್ಮ ದೇಶದಲ್ಲಿ ಸಾಕಷ್ಟು ಕ್ರೀಡಾ ಸೌಲಭ್ಯಗಳು ಇಲ್ಲದಿರುವಾಗ, ಎಲ್ಲಾ ಕ್ರೀಡಾ ಕೇಂದ್ರಗಳಿಗೂ ಸೂಕ್ತ ಉಪಚಾರದ ಅವಶ್ಯಕತೆ ಇದೆ ಎಂದಿದ್ದಾರೆ.(ಏಜೆನ್ಸೀಸ್)
“ಶಾಲೆಗಳು ತೆರೆಯಬೇಕೆಂದರೆ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಬೇಕು”
ಪೊಲೀಸ್​ ಇಲಾಖೆ ವೆಬ್​ಸೈಟ್​ಗೆ ಹೊಸ ರೂಪ! ಅಪೂರ್ಣ ಕೆಎಸ್​ಪಿ ಜಾಲತಾಣಕ್ಕೆ ಗುಡ್​ಬೈ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
