ಕೊಚ್ಚಿ:ಸೋಶಿಯಲ್​ ಮೀಡಿಯಾ ಬದುಕುಗಳನ್ನು ಬದಲಾಯಿಸಬಲ್ಲದು. ಆದರೆ ಸೋಶಿಯಲ್​ ಮೀಡಿಯಾ ಬಗ್ಗೆ ಏನೂ ಅರಿಯದ ಬಡ ವೃದ್ಧನೊಬ್ಬ, ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆದ ಎನ್ನುವ ಕಾರಣಕ್ಕೆ, ಆತನ ಮೇಲೆ ಅಸೂಯೆ ಪಟ್ಟು ಕೊಲೆ ಮಾಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಇದನ್ನೂ ಓದಿ:ಇನ್ನೂ ಆರು ತಿಂಗಳು ಮಾಸ್ಕ್​ ಬಿಡುವಂತಿಲ್ಲ! ಲಾಕ್​ಡೌನ್​ ಮಾಡಲ್ಲ; ಸರ್ಕಾರದ ಹೊಸ ರೂಲ್ಸ್​
ಕೇರಳದ ಕೊಚ್ಚಿಯ ಮರೀನ್​ಡ್ರೈವ್​ನಲ್ಲಿರುವ ಶಿವದಾಸನ್​ (63) ಮಾಜಿ ರಾಷ್ಟ್ರಪತಿ ಅಬ್ದುಲ್​ ಕಲಾಂ ಅವರ ಅಭಿಮಾನಿ. ಆತ ಎರಡು ಬಾರಿ ಅಬ್ದುಲ್​ ಕಲಾಂ ಅವರನ್ನು ಭೇಟಿ ಮಾಡಿದ್ದನಂತೆ. ಅಬ್ದುಲ್​ ಕಲಾಂ ಅವರು ಶಿವದಾಸನ್​ಗೆ 500 ರೂಪಾಯಿ ಕೊಟ್ಟಿದ್ದರಂತೆ. ಕಲಾಂ ಅವರನ್ನೇ ನಿಜವಾದ ದೇವರು ಎಂದು ನಂಬಿದ್ದ ಶಿವದಾಸನ್​, ನಗರದಲ್ಲಿದ್ದ ಅಬ್ದುಲ್​ ಕಲಾಂ ಅವರ ಪ್ರತಿಮೆಗೆ ಪ್ರತಿದಿನ ಹೂವಿನ ಅಲಂಕಾರ ಮಾಡುತ್ತಿದ್ದ. ಈತನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿತ್ತು. ಕಲಾಂ ಅವರ ಬಗ್ಗೆ ಆತನಿಗಿದ್ದ ಗೌರವವನ್ನು ಕಂಡ ನೆಟ್ಟಿಗರು ವಾವ್​ ಎಂದು ಉದ್ಘರಿಸಿದ್ದರು.
ಶಿವದಾಸನ್​ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್​ ಆಗಿದ್ದು ಕಂಡು ಕೆಲವೊಂದಿಷ್ಟು ಜನರು ಅಸೂಯೆ ಪಟ್ಟಿದ್ದಾರೆ. ಏನೂ ಇಲ್ಲದ ಈ ಮುದುಕ ಇಷ್ಟೊಂದು ಶಹಬ್ಬಾಸ್​ಗಿರಿ ಗಳಿಸಿದನೆಂದು ಆತನ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾರೆ. ಈ ರೀತಿ ದ್ವೇಷ ಬೆಳೆಸಿಕೊಂಡ ರಾಜೇಶ್​ ಹೆಸರಿನ ವ್ಯಕ್ತಿ, ಶಿವದಾಸನ್​ ಜತೆ ಜಗಳವಾಡಿದ್ದಾನೆ. ಆತ ಆ ರೀತಿ ಜಗಳವಾಡಿ ಕೆಲವೇ ದಿನಗಳಲ್ಲಿ ಶಿವದಾಸನ್​ ಹೆಣವಾಗಿ ಪತ್ತೆಯಾಗಿದ್ದಾರೆ. ಆತ ಪ್ರತಿದಿನ ಅಬ್ದುಲ್​ ಕಲಾಂ ರಸ್ತೆಯಲ್ಲಿಯೇ ಮಲಗುತ್ತಿದ್ದು, ಅದೇ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ:ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!
ಡಿಸೆಂಬರ್​ 16ರಂದು ಶಿವದಾಸನ್​ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಈ ಕುರಿತಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ರಾಜೇಶ್​ ಕುರಿತಾಗಿ ಸ್ಥಳೀಯರು ಬಾಯಿಬಿಟ್ಟಿದ್ದಾರೆ. ಇದೀಗ ಆತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)
ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
